4

ಕುಕನೂರು : ವಿದ್ಯಾರ್ಥಿಗಳಿಂದ ಸಂವಿಧಾನ ಪೀಠಿಕೆ ಬೋಧನೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 13- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ನಿಮಿತ್ತ ಪಟ್ಟಣದ ಕುಕನೂರು ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂವಿಧಾನ ಹಾಗೂ ಡಾ ಬಿ.ಆರ್ ಅಂಬೇಡ್ಕರ್ ಅವರಿಗೆ ಗೌರವ ಸೂಚಕವಾಗಿ ಮಕ್ಕಳ ಹಾಗೂ ಶಿಕ್ಷಕರ ಸರಪಳಿ ನಿರ್ಮಿಸಿ ಮಕ್ಕಳಿಗೆ ಸಂವಿಧಾನ ಪೀಠಕೆ ಬೋಧಿಸಲಾಯಿತು.

ಸ್ವಾತಂತ್ರ‍್ಯ, ಸಮಾನತೆ, ಭ್ರಾತೃತ್ವ ಬಗ್ಗೆ ಅರಿವು ಮೂಡಿಸಲಾಯಿತು. ನಂತರ ಸಂವಿಧಾನ ಕುರಿತು ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಸಂಧರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಸೌಭಾಗ್ಯ ಬಿ., ನಿಲಯಪಾಲಕ ಸಾಹೇಬ್‌ಗೌಡ, ಪ್ರಮುಖರಾದ ಬಸುಕುಮಾರ ಹನುಮಪ್ಪ ಉಪ್ಪಾರ್, ಕೊಪ್ಪದ, ಕಲ್ಲಿನಾಥಯ್ಯ ಹಿರೇಗೌಡ್ರ, ಭಾಗ್ಯಶ್ರೀ, ಪೂರ್ಣಿಮಾ ಎಸ್., ವೃಂದ ಶೇಠ, ಸುಂದರಾ ಜ್ಯೋಶಿ, ಜಯಶ್ರೀ ಗವಿಸಿದ್ದಪ್ಪ ಕಲ್ಗುಡಿ, ಶಶಿಕುಮಾರ್ ಕಂದಕೂರ, ಶಿವರಾಜ ಕುಂಬಾರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!