3

ಮಕ್ಕಳಲ್ಲಿ ಅಡಗಿದ ಪ್ರತಿಭೆಗೆ ಸೂಕ್ತ ವೇದಿಕೆ ಅನಾವರಣಗೊಳ್ಳಲಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 13- ಗ್ರಾಮೀಣ ಪ್ರದೇಶದಲ್ಲಿನ ಪ್ರತಿಯೊಂದು ಮಗುವಿನ ನಲ್ಲಿ ತನ್ನದೇಯಾದ ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆ ಹೊರ ಹಾಕಲು ಸೂಕ್ತ ವೇದಿಕೆ ನಿರ್ಮಾಣದಿಂದ ಮಾತ್ರ ವೇದಿಕೆಗೆ ಅರ್ಥ ಬರುತ್ತಿದೆ ಎಂದು ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಜಶ್ವಂತರಾಜ್ ಜೈನ್ ಹೇಳಿದರು.

ಸಮೀಪದ ಮಂಗಳೂರು ಗ್ರಾಮದ ಅಬ್ದುಲ್ ಕಲಾಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.

ಮಕ್ಕಳಲ್ಲಿ ಸಂಗೀತ, ರಂಗಭೂಮಿ, ಹಾಡುಗಾರಿಕೆ, ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಲು ಸರಕಾರ ಇಂತಹ ವೇದಿಕೆಗಳನ್ನು ನಿರ್ಮಾಣಗೊಳಿಸಿ ಅವಕಾಶ ಮಾಡಿದರಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜತಗೆ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ತಿಳಿಸಿದರು.

ಕುಕನೂರು ತಾಲೂಕು ಎನ್‌ಜಿಒ ಅಧ್ಯಕ್ಷ ಮಹೇಶ ಸಬರದ್ ಮಾತನಾಡಿ, ಪ್ರತಿಯೊಂದು ಕಲೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವ ಮೂಲಕ ಪ್ರತಿಭೆ ಹೊರ ಹಾಕುವ ಕಾರ್ಯ ಮಾಡಬೇಕಿದೆ. ನಾಡಿನ ಪರಂಪರೆ, ಸಾಂಸ್ಕೃತಿಕ ಹಬ್ಬಗಳನ್ನು ಉಳಿಸಿ ಬೆಳೆಸುವ ಕೆಲಸವಾಗಲಿ ಎಂದರು.

ಸಿಆರ್‌ಪಿ ರವಿ ಮಳಗಿ ಮಾತನಾಡಿದರು. ಕುಕನೂರು ಪ್ರೌಢ ಶಾಲಾ ಸಹ ಶಿಕ್ಕರ ಸಂಘದ ಅಧ್ಯಕ್ಷ ಬಸವರಾಜ ಮೇಟಿ, ಇಸಿಒ ಸುರೇಶ ಮಾದಿನೂರ, ಇಸಿಒ ಶರಣಪ್ಪ ರ‍್ಯಾವಣಿಕಿ, ಬಿಆರ್‌ಪಿ ಬಸವರಾಜ ಮೇಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಕ್ರಪ್ಪ ಚಿನ್ನೂರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ ಮ್ಯಾಗಳೇಶಿ, ಸದಸ್ಯ ಶರಣಪ್ಪ ಎಮ್ಮಿ,ಎನ್‌ಜಿಒ ಉಪಾಧ್ಯಕ್ಷ ಸುರೇಶ ಮಡಿವಾಳರ್, ಸಂಘದ ಪ್ರಧಾನ ಕಾರ್ಯದರ್ಶಿ ಮಹಾವೀರ ಕಲ್ಲಬಾವಿ, ಪತ್ರಕರ್ತ ಕೋಟ್ರಪ್ಪ ತೋಟದ್, ಸಿಆರ್‌ಪಿಗಳಾದ ದೇವೆಂದ್ರಪ್ಪ ಬಗನಾಳ, ಮಂಜುನಾಥಯ್ಯ , ದೇವಪ್ಪ ತಳವಾರ್, ಮುಖಂಡರಾದ ನಾಗರಾಜ ಜನಾದ್ರಿ, ಬಸವರಾಜ ಬೆಲ್ಲದ್, ಶಿಕ್ಷಕರಾದ ಬಸವರಾಜ ಆಟದ್, ಮಾರುತಿ ಹಾದಿಮನಿ, ಸಂಸ್ಥೆಯ ಕಾರ್ಯದರ್ಶಿ ಬಸಿರುದ್ದೀನ್ ಖಾಜಿ, ಮುಖಂಡ ಮುತ್ತಣ್ಣ , ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು,ವಿದ್ಯಾರ್ಥಿಗಳು ಗ್ರಾಮದ ಮುಖಂಡರು ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!