ಬ್ರಹ್ಮಶ್ರೀ ನಾರಾಯಣ ಗುರುಗಳು ಈನಾಡಿಗೆ ನೀಡಿದ ಕೊಡುಗೆ ಅಪಾರ : ಹಾಲಪ್ಪ ಆಚಾರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 16- ಬ್ರಹ್ಮಶ್ರೀ ನಾರಾಯಣ ಗುರುಗಳು 12ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ಸಮಾಜದಲ್ಲಿನ ಕಂದಾಚಾರ ಮೌಢ್ಯದ ವಿರುದ್ಧ ಜನಜಾಗೃತಿ ಸಂದೇಶವನ್ನು ಸಾರಿದವರು ಎಲ್ಲರೂ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅವರು ಈನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ ನಾರಾಯಣ ಗುರುಗಳು ವ್ಯಕ್ತಿ ತನ್ನನ್ನು ತಾನು ತಿದ್ದಿಕೊಂಡು ಲೋಕವನ್ನು ತಿದ್ದಬೇಕೆಂದು ತಮ್ಮ ಚಿಂತನೆಗಳ ಮೂಲಕ ಜನರ ಮನಃಪರಿವರ್ತನೆಯನ್ನು ಮಾಡಿದವರು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ನಗರದ ಬುದ್ದ ಬಸವ ಅಂಬೇಡ್ಕರ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ನಾರಾಯಣ ಗುರುಗಳು ಜಾತಿ, ಮತ, ಪ್ರದೇಶ, ಕಾಲಗಳ ವ್ಯಾಪ್ತಿಯನ್ನು ಮೀರಿ ವಿಶಾಲತೆಗೆ ತನ್ನನ್ನು ಒಡ್ಡಿಕೊಂಡ ಗುರುಗಳು, ಸಾಧನೆ ವರ್ಚಸ್ಸು ಮತ್ತು ಕೆಲಸಗಳ ಮೂಲಕ ಗುರುವಾಗಿ ಬೆಳೆದು ನಿಂತರು.ಹೀಗೆ ಮೌನಕ್ರಾಂತಿಯ ಮೂಲಕ ಸಮಾಜ ಪರಿವರ್ತನೆ ಯನ್ನು ಮಾಡಿದ ಪರಿವರ್ತನಾ ಶಿಲ್ಪಿ ಬ್ರಹ್ಮಶ್ರೀ ನಾರಾಯಣ ಗುರುಗಳು ದೇಶ ಕಂಡ ಅದ್ಭುತ ದಾರ್ಶನಿಕ, ಚಿಂತಕ, ಅಪ್ಪಟ ಸಮಾಜವಾದಿ. ಭಾರತೀಯ ಸಮನ್ವಯ ಧಾರ್ಮಿಕ ಪರಂಪರೆಯಲ್ಲಿ ಅಪರೂಪವಾಗಿ ಕಂಡುಬರುವ ಸಿದ್ಧಾಂತವಾದಿ ಅವರ ಧಾರ್ಮಿಕ ಸಿದ್ಧಾಂತಗಳು ವಾದಕ್ಕಾಗಿ ಮಾತ್ರವಲ್ಲ ವಾದಿಸಿ ಗೆಲ್ಲಲು ಅಲ್ಲ, ಅದು ಸರ್ವರ ಜೀವನದ ಧರ್ಮವಾಗಬೇಕು ಎಂದು ತಾನು ಕಂಡ ಸತ್ಯವನ್ನು ಆಚರಿಸಿ ತೋರಿಸಿದವರು ನಾರಾಯಣ ಗುರುಗಳು. ಮನುಷ್ಯತ್ವದ ಅನಾವರಣವೇ ಧರ್ಮದ ಗುರಿ ಎಂದರು.
ಹೃದಯ ದೌರ್ಬಲ್ಯವನ್ನು ತೊರೆದು ಆತ್ಮವಿಶ್ವಾಸವನ್ನು ಗಳಿಸಿ, ವ್ಯಕ್ತಿತ್ವವನ್ನು ಪಕ್ವವಾಗಿಸಬೇಕು. ವಿದ್ಯೆ, ವಿನಯ, ಶ್ರದ್ಧೆ, ಉದ್ಯೋಗ, ಸಂಸ್ಕೃತಿ, ಸಮಾನ ಭಾವ, ಸಂಘರ್ಷರಹಿತ ಕ್ರಾಂತಿ ಇವು ನಾರಾಯಣ ಗುರುಗಳ ಜೀವನ ಧರ್ಮವಾಗಿತ್ತು. ೧೯ನೇ ಶತಮಾನದ ಸಂದರ್ಭದಲ್ಲಿ ಭಾರತ ಹಲವಾರು ಸಂತ ಸತ್ವಗಳನ್ನು ಕಂಡಿದೆ, ಉಂಡಿದೆ. ಎಷ್ಟೋ ಸಮಾಜ ಸುಧಾರಕರು ಬಂದು ಹೋಗಿದ್ದಾರೆ ತಮ್ಮ ಚಿಂತನೆಗಳನ್ನು ಅರ್ಪಿಸಿದ್ದಾರೆ. ಆದರೆ ನೀರಿನಲ್ಲಿ ಇಳಿದು ಚಳಿಯನ್ನು ಅನುಭವಿಸಿದಂತೆ ಪ್ರಾಯೋಗಿಕ ನೆಲೆಯಲ್ಲಿ ಹೋರಾಟದ ಮೂಲಕ ಸಮಾಜ ಸುಧಾರಣೆಯನ್ನು ಮಾಡಿದ ಗುರು ಎಂದರೆ ಅದು ನಾರಾಯಣ ಗುರುಗಳು ಮಾತ್ರ. ಧರ್ಮ ಎನ್ನುವುದು ಅಧರ್ಮದೋಳಗಿನ ಬೀಜ ಎಂಬAತಿದ್ದ ಆ ಕಾಲದಲ್ಲಿ ತಾನು ಹುಟ್ಟಿದ ಸಮಾಜದಲ್ಲಿ ಇದ್ದ ಮೇಲು ಕೀಳು, ಮೌಡ್ಯ, ಅಂಧಾನುಕರಣೆ, ದೇವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ದೌರ್ಜನ್ಯ ಇವುಗಳನ್ನು ಕಂಡು ದೇವರು, ಧರ್ಮದಿಂದ ವಂಚಿತರಾದ ದೀನದಲಿತರಿಗೆ, ಸಾಮಾಜಿಕವಾಗಿ ಹಿಂದುಳಿದವರಿಗೆ, ನಿಮ್ಮಗೂ ಒಂದು ದೇವರು ಬೇಕು, ದೇವಸ್ಥಾನಬೇಕು, ನಿಮಗೂ ಮನುಷ್ಯರಂತೆ ಬದುಕುವ ಹಕ್ಕು ಈ ಭೂಮಿಯಲ್ಲಿದೆ ಎನ್ನುವುದನ್ನು ತೋರಿಸಿಕೊಟ್ಟ ಮಹಾಪುರುಷರು ಎಂದು ಮಾಜಿ ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ನಿಟ್ಟೂರು ತಿರ್ಥಹಳ್ಳಿಯ ಆರ್ಯ ಈಡೀಗ ಸಮಾಜದ ಗುರುಗಳಾದ ಶ್ರೀ ರೇಣುಕಾನಂದ ಮಹಾ ಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ನಂತರ ಬ್ರಹ್ಮಶ್ರೀ ನಾರಾಯಣ ಗುರುಗಳು ಕುರಿತು. ಬಸವರಾಜ ಉಳ್ಳಾಗಡ್ಡಿ. ವೀರಣ್ಣ ಹುಬ್ಬಳ್ಳಿ. ವೀರನಗೌಡ್ರ ಪೋಲಿಸ್ ಪಾಟೀಲ ಮಾತನಾಡಿದರು.
ಶರಣಪ್ಪ ಈಳಗೇರ ಮಾತನಾಡಿ, ಈಡಿಗ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದೆ ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೂಡಿಸಬೇಕು ಶಿಕ್ಷಣದಿಂದ ಸಂಘಟನೆ ಸಾಧ್ಯ.ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಜದಲ್ಲಿನ ಅಸ ಪುರಷತೆ ಮತ್ತು ಮೌಡ್ಯಗಳನ್ನು ಹೋಗಾಲಿಸಲು ಶ್ರಮಿಸಿದವರು ಇಂದಿಗೂ ಅವರ ತತ್ವಾದರ್ಶಗಳು ಜೀವಂತವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ವೀರನಗೌಡ ಪೋಲೀಸ್ ಪಾಟೀಲ್, ವೀರಣ್ಣ ಹುಬ್ಬಳ್ಳಿ, ಈಡೀಗ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷ ಕಾಶಿ ವಿಶ್ವನಾಥ ಬಿಚ್ಚಾಲಿ, ಗೌರವಾಧ್ಯಕ್ಷ ವೆಂಕಟೇಶ್ ಆರ್.ಗುತ್ತಿಗೆದಾರ, ಉದ್ಯಮಿದಾರ ಪ್ರದೀಪ್ ಶೇಟ್ ಹಾನಗಲ್, ಜಿಲ್ಲಾ ಕಮೀಟಿ ಸದಸ್ಯ ರಾಜಪ್ಪ.ಹೆಚ್ ಈಳಗೇರ, ಯಲಬುರ್ಗಾ ಈಡೀಗ ಸಮಾಜದ ತಾಲೂಕ ಅಧ್ಯಕ್ಷ ಮಂಜುನಾಥ ಈಳಗೇರ, ಮಾಜಿ ತಾಲೂಕ ಪಂಚಾಯತ ಸದಸ್ಯ ಶರಣಪ್ಪ ಈಳಗೇರ, ಕುಕನೂರು ತಾಲೂಕ ಈಡೀಗ ಸಮಾಜದ ಅಧ್ಯಕ್ಷ ವೆಂಕಟೇಶ ಈಳಗೇರ, ಕೊಪ್ಪಳ ಆರ್ಯ ಈಡೀಗ ಸಮಾಜದ ಅಧ್ಯಕ್ಷ ವೀರಣ್ಣ ಹುಲಗಿ, ಕಾರಟಗಿ ತಾಲೂಕ ಅಧ್ಯಕ್ಷ ವಿರೇಶ ಮರ್ಲಾನಹಳ್ಳಿ, ಕನಕಗಿರಿ ತಾಲೂಕ ಅಧ್ಯಕ್ಷ ನಾಗೇಶ ಚಿಕ್ಕಡಣಕನಕಲ್ಲ, ಗಂಗಾವತಿ ಅಧ್ಯಕ್ಷ ನಾಗರಾಜ ಕುಷ್ಟಗಿ, ತಾಲೂಕ ಅಧ್ಯಕ್ಷ ಉಮಾಕಾಂತಗೌಡ ಮಾನ್ವಿ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.
