5

ಕಲೆ, ಕಲಾವಿದ, ಸಾಹಿತಿಗಳಿಗೆ ಸನ್ಮಾನ ಸಿಕ್ಕಾಗ ಹೆಮ್ಮರವಾಗಿ ಬೆಳೆಯಲು ಸಾಧ್ಯ : ಎಸ್.ಪನ್ನಾರಾಜ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 16- ಕಲಾ ದಿಗ್ಗಜರ ಹೆಸರಿನಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದಂತ ಸಾಧಕರಿಗೆ ಪ್ರಶಸ್ತಿ, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಹಾಗೂ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನೋತ್ಸವ ಸನ್ಮಾನ, ಸತ್ಕಾರ ಕಾರ್ಯಕ್ರಮವನ್ನು ಬಳ್ಳಾರಿ ಆಕ್ಟಿವಿಟೀಸ್ ಅಸೋಸಿಯೇಷನ್ ಸಂಸ್ಥೆಯ ೫೨ನೇ ವಾರ್ಷಿಕೋತ್ಸವ ಅಂಗವಾಗಿ ಯುಗಾದಿ ಪ್ರಶಸ್ತಿ ಪ್ರಧಾನೋತ್ಸವ ಸಮಾರಂಭ ೨೦೨೪ ಕಾರ್ಯಕ್ರಮವನ್ನು ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ ಶರಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಲೆಕ್ಕ ಪರಿಶೋಧಕ ಎಸ್.ಪನ್ನಾರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ “ಕಲೆ, ಕಲಾವಿದ, ಸಾಹಿತಿ, ವಿದ್ಯಾರ್ಥಿ ಯಾರೇ ಆಗಲಿ ಪ್ರೋತ್ಸಾಹ, ಸನ್ಮಾನ ಸಿಕ್ಕಾಗ ಹೆಮ್ಮರವಾಗಿ ಬೆಳೆಯಲು ಸಾಧ್ಯ” ಎಂದು ಉದ್ಘಾಟನೆ ನುಡಿಗಳಲ್ಲಿ ತಿಳಿಸಿದರು.

ಬಿಪಿಎಸ್‌ಸಿ ಶಾಲೆಯ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್, ಹಿರಿಯ ನ್ಯಾಯವಾದಿಗಳು ಜನಾರ್ಧನ್, ಕನ್ನಡ ಸಾಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಕಾರ್ಯಕ್ರಮದ ಕುರಿತು ಮಾತನಾಡಿದರು.
ಪರಮಪೂಜ್ಯ ಕಲ್ಯಾಣ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಖ್ಯಾತ ರಂಗಭೂಮಿ ಕಲಾವಿದರಾದ ಬಳ್ಳಾರಿ ರಾಘವ ಅವರ ಮೊಮ್ಮಗ ಎ.ರಘುರಾಮ್, ಬೆಂಗಳೂರು ಅತಿಥಿಗಳಾಗಿ ಆಗಮಿಸಿದ್ದು ವಿಶೇಷತೆ ಅನಿಸಿತು. ಅಂಚೆ ಚೀಟಿ ಮತ್ತು ಹಳೆ ನಾಣ್ಯಗಳ ಪ್ರದರ್ಶನವು ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಶವಂತ ರಾಜ್ ಉಪಾಧ್ಯಕ್ಷರಾದ ಪಿ.ಗಾದೆಪ್ಪ ಸಹ ಕಾರ್ಯದರ್ಶಿ ವಿ.ರಾಮಚಂದ್ರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!