9

ಮಹಾತ್ಮರ ತ್ಯಾಗ ಬಲಿದಾನಗಳ ಮೂಲಕ ನಮಗೆ ಸ್ವಾತಂತ್ರ‍್ಯ : ಭಾಗ್ಯಲಕ್ಷ್ಮಿ ಬಂಗಾರಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 17- ಕಲ್ಯಾಣ ಕನಾ೯ಟಕ ಸ್ವಾತಂತ್ರ‍್ಯ ಗೋಸ್ಕರ ಹೋರಾಡಿದ ಮಹಾತ್ಮರು ತಮ್ಮ ತ್ಯಾಗ ಬಲಿದಾನಗಳ ಮೂಲಕ ನಮಗೆ ಸ್ವಾತಂತ್ರ‍್ಯ ಸಿಕ್ಕಿತ್ತು ಈ ಸಂದರ್ಭದಲ್ಲಿ ಅವರಿಗೆ ನಮ್ಮ ನಮನಗಳು ಎಂದು ಶೂಷ್ರುತ ಅಧಿಕಾರಿ ಭಾಗ್ಯಲಕ್ಷ್ಮಿಬಂಗಾರಿ ಹೇಳಿದರು.

ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸಮುದಾಯ ಆರೋಗ್ಯದ ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕರೂ ಕೂಡ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ‍್ಯ ಭಾಗ್ಯ ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ಉಕ್ಕಿನ ಮನುಷ್ಯ ಎಂದು ಹೆಸರು ವಾಸಿಯಾದ ದೇಶದ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್‌ರವರ ಪೋಲೊ ಆಪರೇಷನ್ ಮೂಲಕ ಹೈದರಾಬಾದ್ ನಿಜಾಮನ ಸಾರ್ವಭೌಮತ್ವವನ್ನು ವಿರೋಧಿಸಿ ನಿಜಾಮನ ಸಂಸ್ಥಾನವನ್ನು ೧೭ ನೇ ಸೆಪ್ಟೆಂಬರ್ ೧೯೪೮ ರಂದು ಭಾರತ ಒಕ್ಕೂಟಕ್ಕೆ ಸೇರಿಸಿದ ಕೀರ್ತಿ ಪಟೇಲ್ ರವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು. ಮತ್ತು ಸಿಬ್ಬಂದಿಗಳು ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!