ಶ್ರೀ ಗವಿಸಿದ್ದೇಶ್ವರ ಅಯುರ್ವೇದ ಕಾಲೇಜು ಮಹಿಳಾ ರಿಲೆ ತಂಡಕ್ಕೆ ತೃತೀಯ ಸ್ಥಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಕಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ೪*೪೦೦ ರಿಲೆ ವಿಭಾಗದಲ್ಲಿ ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಕುಮಾರಿ ಸಹನಾ ಮೇಟಿ, ಜಿ.ಪೂನ್ಯ, ಶಿವಾನಿ ಮತ್ತು ಸಂಜನಾ ಇವರುಗಳ ತಂಡ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜೇತ ತಂಡಕ್ಕೆ ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಅಧ್ಯಕ್ಷ ಸಂಜಯ ಕೊತಬಾಳ, ಪ್ರಾಂಶುಪಾಲ ಡಾ.ಮಹಾಂತೇಶ ಸಾಲಿಮಠ, ಎಸ್ಜಿ ಟ್ರಸ್ಟ್ ಸದಸ್ಯ ವಿರೇಶ ದೇವರು, ಡಾ.ಗವಿ ಪಾಟೀಲ ಮತ್ತು ಕ್ರೀಡಾ ವಿಭಾಗದ ಡಾ.ಎಸ್.ಎಸ್.ಶಿರೂರಮಠ, ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಶುಭ ಕೊರಿದ್ದಾರೆ.
