ಜ. 26 ಗಣರಾಜ್ಯೋತ್ಸವ ಪೂರ್ವಭಾವಿ ಸಭೆ
ಕರುನಾಡ ಬೆಳಗು ಸುದ್ದಿ
ಕುಕನೂರು,17- ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗಣರಾಜ್ಯೋತ್ಸವ ಕುರಿತು ಬುಧವಾರ ಪೂರ್ವಭಾವಿ ಸಭೆ ನಡೆಸಲಾಯಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಎಚ್. ಕುಕುನೂರು ತಾಲೂಕ ವ್ಯಾಪ್ತಿಯ ಎಲ್ಲ ಇಲಾಖೆಯವರು ತಸಿಲ್ದಾರ್ ಕಚೇರಿ ಮುಂದೆ ನಡೆಯುವ ಧ್ವಜಾರೋಹಣಕ್ಕೆ ಆಗಮಿಸಬೇಕು ಕಾರ್ಯಕ್ರಮದಲ್ಲಿ ಉಪನ್ಯಾಸ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರೂ ಸಕ್ರಿಯವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ವೇದಿಕೆಯ ಪ್ರಮಾಣ ಮತ್ತು ಸಿದ್ಧತೆ ಕಾರ್ಯವನ್ನು ಪಟ್ಟಣ ಪಂಚಾಯಿತಿ ಅವರಿಗೆ ವಹಿಸಲಾಗಿದೆ. ಕೆಇಬಿ ಇಲಾಖೆಯವರಿಗೆ ವಿದ್ಯುತ್ ಅಲಂಕಾರ ಶಿಕ್ಷಣ ಇಲಾಖೆಯವರು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧಪಡಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಮಾರಂಭದಲ್ಲಿ ಗ್ರೇಡ್ 2 ತಹಸಿಲ್ದಾರ್ ಮುರುಳಿಧರ್, ಕುಲಕರ್ಣಿ. ಮೊಹಮ್ಮ ಮುಸ್ತಾಫ್. ಪಟ್ಟಣ ಪಂಚಾಯಿತಿ ಕೆಇಬಿ ತೋಟಗಾರಿಕೆ ಶಿಕ್ಷಣ ಇಲಾಖೆ ಎಪಿಎಂಸಿ ಇತರ ಇಲಾಖೆಯ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.
