ಬೇಡ ಜಂಗಮ ಸಮಾಜ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕರುನಾಡ ಬೆಳಗು ಸುದ್ದಿ
ವಿಜಯನಗರ,18- ವೀರಶೈವ ಲಿಂಗಾಯತ ಸಮಾಜದಿಂದ ಹಾಗೂ ತಾಲೂಕು ಬೇಡಜಂಗಮ ಸಮಾಜ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ದಿನಾಂಕ : 21.1.2024 ಭಾನುವಾರ ರಂದು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ದಲ್ಲಿ ಸುದ್ದಿಗೋಷ್ಠಿ ನಡೆಸಿ, ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ಪೂಜ್ಯ ಶ್ರೀಮಾನ್ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಇವರ ಪಾವನ ಸನ್ನಿಧಾನದಲ್ಲಿ
ದಿನಾಂಕ : 21.01.2024 ಭಾನುವಾರ ರಂದು ಬೆಳಿಗ್ಗೆ 10:30 ರಿಂದ ಸಂಜೆ 5:00ರ ವರೆಗೆ ಹೊಸಪೇಟೆಯ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಎಸ್ಡಿಎಮ್ ನಾರಾಯಣ ಹಾರ್ಟ್ ಸೆಂಟರ್, ಮಂಜುBHMS ನಗರ, ಸತ್ತೂರ, ಧಾರವಾಡ
ಇವರ ಸಹಯೋಗದಲ್ಲಿ ಹೃದಯ ಶಸ್ತ್ರಚಿಕಿತ್ಸಾ ಶಿಬಿರವನ್ನು ECG & 2D ECHO ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ.
ಇದರ ಜೊತೆಗೆ ಮೊಣಕಾಲು ನೋವು, ಕಿವಿ, ಮೂಗು, ಗಂಟಲು, ಬಿ.ಪಿ., ಶುಗರ್ ಇನ್ನೂಳಿದ ಕಾಯಿಲೆಗಳ ಬಗ್ಗೆ ಉಚಿತ ತಪಾಸಣೆ ಮಾಡಲಾಗುವುದು. ಆದಕಾರಣ ಹೊಸಪೇಟೆ ತಾಲೂಕು ಮತ್ತು ವಿಜಯನಗರ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಬಂದು ಈ ಉಚಿತ ತಪಾಸಣೆಯನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಮಾಧ್ಯಮದ ಮುಖಾಂತರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಹೆಚ್ಚಿನ ವಿವರಹಳಿಗಾಗಿ : ಕಾಶಿನಾಥಯ್ಯ 7899311052, ರವಿಶಂಕರ್ 8867471877, ವೀರ ಮಂಗಳ 9448234723, ಕುಸುಮ 9481711289 ಇವರಿಗೆ ಸಂಪರ್ಕಿಸಲು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹೊಸಪೇಟೆಯ ಗೌರವ ಉಪಸ್ಥಿತಿ ವೈದ್ಯರುಗಳಾದ ಡಾ. ಮೃತ್ಯುಂಜಯ ವಸ್ತ್ರದ MBBS, MD. ಅಭಿಷೇಕ ಆಸ್ಪತ್ರೆ, ಡಾ. ಸುಮಂಗಲದೇವಿ ಎ.ಹೆಚ್. MBBS, DGO ಚಿರಂಜೀವಿ ಆಸ್ಪತ್ರೆ, ಡಾ. ಪೆರುಮಾಳಸ್ವಾಮಿ ಆರ್ಥೋಪೆಡಿಕ್ಸ್ ಸರ್ಜನ್
ಎಸ್.ಎಸ್. ಮೈರಿ ಆಸ್ಪತ್ರೆ , ಡಾ. ಹರಿಪ್ರಸಾದ ಕಿವಿ, ಮೂಗು, ಗಂಟಲು ಹಿರಿಯ ವೈದ್ಯಾಧಿಕಾರಗಳು, ಸಾರ್ವಜನಿಕ ಉಪ ವಿಭಾಗ, ಡಾ. ಬಿ. ಮಂಜುಳಾ MBBS ಜನರಲ್ ಫಿಜಿಸಿಯನ್, ಡಾ. ಎಲ್.ಆರ್. ಶಂಕರನಾಯ್ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಡಾ. ಜಂಬಯ್ಯ RCHO, ಡಾ. ವಿನಯ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು, ಡಾ. ಭಾಸ್ಕರ್, ತಾಲೂಕು ಆರೋಗ್ಯ ಅಧಿಕಾರಿಗಳು,
ಡಾ. ಎಂ. ಧರ್ಮನಗೌಡ ಆರೋಗ್ಯ ನಿರಕ್ಷಣಾಧಿಕಾರಿಗಳು, ಡಾ. ಸಾಗರ ಎಸ್.ಎಸ್. ಮೈತ್ರಿ ಆಸ್ಪತ್ರೆ, ಡಾ. ಶರಣಪ್ರಸಾದ ಎ.ಹೆಚ್. MS ಅರ್ತೋಪೆಡಿಕ್ಸ್ ಚಿರಂಜೀವಿ ಆಸ್ಪತ್ರೆ.ಡಾ. ವಿ.ಸಿ. ಮಂಟೂರ್ ಮಠ BHMS ಹೊಸಪೇಟೆ ಇವರುಗಳು ಉಪಸ್ಥಿತಿ ಇರಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೊಷ್ಟಿಯಲ್ಲಿ ಕಾಶಿನಾಥಯ್ಯ, ವೀರಭದ್ರಯ್ಯ, ಬಿ ಎಂ ತಿಪ್ಪಯ್ಯ, ಪ್ರಕಾಶ, ಪರಮೇಶ್ವರಪ್ಪ, ವೀರ ಮಂಗಳ, ಕೆ ಸುಮಾ, ಗಿರಿಜಾ ನಾಗಲಿಕರ್ ಇದ್ದರು.
