IMG-20240207-WA0025

ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಮಡಿಲಿಗೆ ನೂತನ ಅಧ್ಯಕ್ಷರಾಗಿ ಕಳಕಪ್ಪ ವೀರಪೊರ, ಉಪಾಧ್ಯಕ್ಷರಾಗಿ ಬೋರಮ್ಮ ಗಾಣಗೇರ ಆಯ್ಕೆ 

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,7- ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯತಿ ನ್ಯೋತನ ಅಧ್ಯಕ್ಷರಾಗಿ ಕಳಕಪ್ಪ ನಿಂಗಪ್ಪ ವೀರಾಪೊರ ಉಪಾಧ್ಯಕ್ಷರಾಗಿ ಬೋರಮ್ಮ ಗಂಡ ಹೂನಪ್ಪ ಗಾಣಗೇರ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. 

ಕಾಂಗ್ರೆಸ್ ಪಕ್ಷದ ಮಡಿಕೇರಿ ಜಾರಿತು, ಒಟ್ಟು 13ಸದಸ್ಯರ ಬಲಾ ಬಲ ಹೊಂದಿರುವ ಹಿರೇಮ್ಯಾಗೇರಿ ಗ್ರಾಮ ಪಂಚಾ ಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇನಾಮಪತ್ರ ಸಲ್ಲಿಸಿದ್ದರು ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಅದ್ಯಕ್ಷರಾಗಿ ಕಳಕಪ್ಪ ನಿಂಗಪ್ಪ ವೀರಾಪುರ ಅವರು 9 ಮತಗಳನ್ನು ಪಡೆದು ಆಯ್ಕೆಯಾದರು. ಆಯ್ಕೆ ಮಾಡಿದ ಎಂದು ಅಧಿಕಾರಿ ಎಫ್ ಎಂ ಕಳ್ಳಿ ಆದೇಶ ಹೊರಡಿಸಿದರು.

ನಂತರ ಕಾಂಗ್ರೆಸ್ ಬೆಂಬಲಿಗರು ಬಾವುಟ ಹಿಡಿದು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ್ ಗಾಣಗೇರ, ಕಾಂಗ್ರೆಸ್ ಯುವ ತಾಲೂಕು ಅಧ್ಯಕ್ಷ ಅಂದಪ್ಪ ಸುಬ್ಬೇದ್ದ, ಕಲ್ಲಪ್ಪ ಗುರಿಕಾರ, ಮಾಂಹತೇಶ ಬೆಲ್ಲದ, ಕಳಕಪ್ಪ ಕಲ್ಲುಗುಡಿ, ಶಿವರಡ್ಡಿ ತೋಟದ, ದ್ಯಾಮಣ್ಣ ಮಡಿಕೇರಿ, ಎಸ್. ಜಿ ಹೊಟ್ಟಿನ, ಮಿಥುನ ದಿವಟರ, ಕಳಕಪ್ಪ ತೋಟದ ಸೇರಿದಂತೆ ಮತ್ತು ಕೆಲವು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!