9gvt1

ಪುರಂದರ ದಾಸರು ದಾಸ ಸಾಹಿತ್ಯದ ಮೇರು ಪರ್ವತ ಭಗವಂತನ ನಾಮಸ್ಮರಣೆಗೆ ದಾಸರುಗಳ ಕೊಡುಗೆ ಅಪಾರ

ಕರುನಾಡ ಬೆಳಗು ಸುದ್ದಿ

ಗಂಗಾವತಿ,10- ಪುರಂದರ ದಾಸರು-ದಾಸಸಾಹಿತ್ಯದ ಮೇರುಪರ್ವತ ಎಂದು
ಪಂಡಿತ ಸುಸ್ವರಂ ನಾಗೇಂದ್ರಕುಮಾರ ಆಚಾರ್ಯ ಹೇಳಿದರು.

ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ವಿಜಯ ವಿಠಲ ಮಹಿಳಾ ಭಜನಾ ಮಂಡಳಿ ನೇತೃತ್ವದಲ್ಲಿ ನಡೆದ ಪುರಂದರ ದಾಸರ ಆರಾಧನೆಯಲ್ಲಿ ಮಾತನಾಡಿ ಭಗವಂತನ ನಾಮಸ್ಮರಣೆಯನ್ನು ಸರಳವಾಗಿ ಹಾಡುಗಳ ಮೂಲಕ ಸ್ಮರಿಸಿ ಆರಾಧಿಸಲು ಸಾಧ್ಯೆ ಎಂಬುದನ್ನು ಎಲ್ಲ ದಾಸರುಗಳು ತೋರಿಸಿಕೊಟ್ಟಿದ್ದಾರೆ.

ಪುರಂದರ ದಾಸರು, ವಿಜಯ ದಾಸರು, ಕನಕ ದಾಸರು, ಗೋಪಾಲ ದಾಸರು, ಜಗನ್ನಾಥ ದಾಸರು ಅನೇಕ ದಾಸವರೇಣ್ಯರು ನಮ್ಮ ಜೀವನವನ್ನು ಕೃತಾರ್ಥ ಮೋಡಿಕೊಳ್ಳಲು ಶ್ರೀಹರಿಯ ನಾಮ ಸ್ಮರಣೆ ಮೂಲಕ ಮೋಕ್ಷ ದಾರಿಯನ್ನು ನೀಡಿದ್ದಾರೆ.

ಪುರಂದರ ದಾಸರು ದಾಸ ಪರಂಪರೆಯ ಪಿತಾಮಹರಾಗಿದ್ದಾರೆ ೪ಲಕ್ಷ ೭೫ಸಾವಿರಕ್ಕೂ ಅಧಿಕ ದೇವರ ನಾಮಗಳನ್ನು ರಚಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿಯೋಬ್ಬರು ದೇವರ ನಾಮಸ್ಮರಣೆ ಮೂಲಕ ಜೀವನ ಪಾವನವಾಗಿಸೊಣ ಎಂದರು.

ಶ್ರೀರಾಘವೇಂದ್ರ ಸ್ವಾಮಿ ಮಠದಿಂದ ನಗರದ ವಿವಿದಡೆ ಹಾಗೂ ಸುಂಕದ ಕಟ್ಟೆ ಪ್ರಾಣದೇವರ,ನಗರೇಶ್ವರ ದೇವಸ್ಥಾನದವರೆಗೆ ಪಲ್ಲಕಿ ಸೇವೆಯು ವಿವಿಧ ಭಜನಾ ಮಂಡಳಿಗಳ ಮೂಲಕ ಜರುಗಿತು.

ಈಸಂದರ್ಭದಲ್ಲಿ ವಿಜಯವಿಠಲ ಮಹಿಳಾ ಭಜನಾ ಮಂಡಳಿಯ ವತ್ಸಲಾ ಮುಜಮದಾರ, ಮಂಜುಳಾ ದೇಶಪಾಂಡೆ, ಪರಿಮಳಾ ಜಹಾಗಿರದಾರ, ಕಾಳಿನಂದಿನಿ ದೇಶಪಾಂಡೆ, ಸುಜಾತಾ ಜಾಲಿಹಾಳ, ಮಹಾಲಕ್ಷ್ಮಿ ದೇಶಪಾಂಡೆ, ವೇದವತಿ ಋಗ್ವೇದಿ, ನಿರ್ಮಲಾ ದೇಶಪಾಂಡೆ, ವಿದ್ಯಾಜೋಶಿ, ಮಾಲಾರಾವ, ರಕ್ಷಿತಾ ಜೋಶಿ, ಕಸ್ತೂರಿ ಮುಕ್ಕುಂದಿ, ಜಯಶ್ರೀ ಕಟ್ಟಿ, ರಮಾ ಕುರ್ಡಿ, ಅನಿತಾ ಅಯೋಧ್ಯಾ, ಶ್ರೀದೇವಿ ದಾಸನಾಳ, ರಮಾದೇವಿ ನಾಗೂರ, ಅಂಬುಜಾ, ಸುರ್ವಣ ಚಿಚ್ಚನಗುಡ್ಡ, ಸುಮಾ ಬೆಳ್ಬೂಬಿ, ರಾಘಮ್ಮ ಬದರಿನಾರಾಯಣ, ಗಂಗಾವತಿ ಶ್ರೀರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕರು, ವಿಚಾರಣಕರ್ತರು, ಕಾರಟಗಿ ರಾಯರಮಠದ ವ್ಯವಸ್ಥಾಪಕರು ಉಪಸ್ಥೀತರಿದ್ದರು.

Leave a Reply

Your email address will not be published. Required fields are marked *

error: Content is protected !!