9gvt5

ಅಧಿಕಾರಿಗಳು ಅಭಿವೃದ್ದಿ ಮಾಹಿತಿ ಸರಿಯಾಗಿ ನೀಡಿ : ರಾಮಚಂದ್ರ ಗಡಾದ

ಕರುನಾಡ ಬೆಳಗು ಸುದ್ದಿ

ಗಂಗಾವತಿ,10- ಎಲ್ಲಾ ಇಲಾಖೆ ಅಧಿಕಾರಿಗಳು ಮುಂದಿನ ಸಭೆಗೆ ಬರುವಾಗ ಕೇವಲ ಮಾಹಿತಿ ನೀಡಿದರೆ ಸಾಲದು ಪರಿಪೂರ್ಣವಾದ ಅಭಿವೃದ್ದಿಯ ಮಾಹಿತಿ ನೀಡಬೇಕು ಎಂದು ಕಲುಬುರ್ಗಿ ವಿಭಾಗದ ಕೆ,ಎ.ಎಸ್ ಅಧಿಕಾರಿ ಗಂಗಾವತಿ ಉಸ್ತುವಾರಿ ನೋಡಲ್ ಅಧಿಕಾರಿ ರಾಮಚಂದ್ರ ಗಡಾದ ಹೇಳಿದರು.

ನಗರದ ಮಂಥನ ಸಭಾಂಗಣದಲ್ಲಿ ತಾಲ್ಲೂಕು ಹಂತದ ಅನುಷ್ಠಾನ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ

ಮೊದಲಿಗೆ ಮುಂಬರುವ ಬೇಸಿಗೆ ಹಿನ್ನೆಲೆ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು, ಮೇವು ದಾಸ್ತಾನು ಇರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಮೇವು ಹೊರ ಜಿಲ್ಲೆಗೆ ಹೋಗದಂತೆ ನಿಗಾ ವಹಿಸಿ ಎಂದು ಸೂಚನೆ ನೀಡಿದರು.

ಕೆಡಿಪಿ ಸಭೆಯಲ್ಲಿ ಕಾಟಾಚಾರಕ್ಕೆ ಮಾಹಿತಿ ನೀಡಿದಂತೆ ನನಗೆ ಕಾಟಾಚಾರದ ಮಾಹಿತಿ ನಡೆಯೋದಿಲ್ಲ.
ಮಾಹಿತಿ ಕೇಳುತ್ತೇನೋ ಅದನ್ನು ಮತ್ತು ನೀಡಿದ ಗುರಿ-ಸಾಧನೆಯೊಂದಿಗೆ ಮಾಹಿತಿ ನಿಡಬೇಕು.

ನೀರಿಗೆ ಪ್ರತ್ಯೇಕ ವ್ಯವಸ್ಥೆ : ತಹಶೀಲ್ದಾರ ಯು ನಾಗರಾಜ, ಕೃಷಿ ಅಧಿಕಾರಿ ಸಂತೋಷ ಪಟ್ಟದಕಲ್, ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ, ತಾಲೂಕ ಪಂಚಾಯತ ಸಹಾಯಕ ನಿದೇರ್ಶಕ ಮಹಾಂತಗೌಡರ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಪೋಲಿಸ ಇಲಾಖೆ, ನಗರ ಯೋಜನಾ ಪ್ರಾಧಿಕಾರ, ತೋಟಗಾರಿಕೆ, ಅರಣ್ಯ, ಮೀನುಗಾರಿಗೆ, ಕೃಷಿ ಮಾರುಕಟ್ಟೆ, ಪಶುಸಂಗೋಪನೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ತಹಶಿಲದಾರ ಯು ನಾಗರಾಜ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!