WhatsApp Image 2024-02-11 at 7.36.17 PM (1)

ಶಾಸಕರಿಂದ ಗಂಗ ಕಲ್ಯಾಣ ಯೋಜನೆಯ ಪಲಾನುಭವಿಗಳಿಗೆ  ಪಂಪ್ ಸೆಟ್ ವಿತರಣೆ

ಕರುನಾಡ ಬೆಳಗು ಸುದ್ದಿ

ಕೂಡ್ಲಿಗಿ,11- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ರೈತರಿಗೆ ಶಾಸಕರಾದ  ಡಾ. ಶ್ರೀನಿವಾಸ್. ಎನ್. ಟಿ. ಕೂಡ್ಲಿಗಿ  ಪಟ್ಟಣದ ಪ್ರವಾಸ ಮಂದಿರದಲ್ಲಿ ಶನಿವಾರ ಗಂಗ ಕಲ್ಯಾಣ ಯೋಜನೆಯ ಪಲಾನುಭವಿಗಳಿಗೆ  ಪಂಪ್ ಸೆಟ್  ಉಪಕರಣಗಳನ್ನು ವಿತರಿಸಿದರು.

ಕೂಡ್ಲಿಗಿ ಕ್ಷೇತ್ರದ  ನಿಂಬಳಗೆರೆ, ಚಿಕ್ಕಜೋಗಿಹಳ್ಳಿ, ಖಾನಹೊಸಹಳ್ಳಿ, ಪಿಚ್ಛಾರಹಟ್ಟಿ, ಕೋಣನಹಳ್ಳಿ
ಮತ್ತು ಗುಡೇಕೋಟೆ ಭಾಗದ ಎಂಟು ಜನ ಫಲಾನುಭವಿಗಳಿಗೆ ವಿತರಿಸಿದರು.   ಶಾಸಕರು  ಮಾತನಾಡಿ ರೈತರು  ಇವುಗಳನ್ನು ಒಳ್ಳೆಯದಯಕ್ಕೆ  ಸದುಪಯೋಗ ಪಡಿಸಿಕೊಳ್ಳಬೇಕು‌. ಹಾಗೆಯೇ  ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ಹೇಳಿದರು.

ಈ ಬಾರಿ ಕಡಿಮೆ ಸೌಲಭ್ಯಗಳಿವೆ ಹಂಚಿಕೆ ಮಾಡುವುದು ಕಷ್ಟ.  ನಮ್ಮ ಕ್ಷೇತ್ರದಲ್ಲಿ ಬಡವರು  ಇರುವುದರಿಂದ ಸರ್ಕಾರಕ್ಕೆ ಹೆಚ್ಚಿನದಾಗಿ  ಗಂಗ ಕಲ್ಯಾಣ ಸೌಲಭ್ಯಗಳನ್ನು  ಒದಗಿಸಿ ಕೊಡಬೇಕು ಎಂದು  ಮನವಿ ಮಾಡಿಕೊಂಡಿರುವೆ ಎಂದರು.

ಈ ವೇಳೆ ಜಿಲ್ಲಾ ವ್ಯವಸ್ಥಾಪಕರಾದ ಮೆಹಬೂಬಾ ಭಾಷಾ,  ಕಾಂಗ್ರೆಸ್ ಪಕ್ಷದ  ಮುಖಂಡರಾದ ತಮ್ಮಣ್ಣ ಎನ್.ಟಿ  ಗುರುಸಿದ್ದನಗೌಡ್ರು, ಕಾವಲಿ ಶಿವಪ್ಪ ನಾಯಕ, ಅಜ್ಜನ ಗೌಡ್ರು, ಜಿಲಾನ್, ಬಾಬು, ಕೂಡ್ಲಿಗಿ ರಾಘವೇಂದ್ರ, ಸಿ.ಎಸ್. ಪುರ ಬಸವರಾಜ,  ಉಮೇಶ ನಾಯಕ, ಎಕ್ಕೆಗೊಂದಿ ನಾಗರಾಜ,  ಪಲಾನುಭವಿಗಳು ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!