WhatsApp Image 2024-02-12 at 12.59.18 PM

ಬಣ್ಣಕ್ಕೆ ಹೋಗಿದ್ದ ಶ್ರೀ ದುರ್ಗಾದೇವಿಯನ್ನು ಭವ್ಯ ಮೆರವಣಿಗೆಯೊಂದಿಗೆ ಗ್ರಾಮಕ್ಕೆ 

ಕರುನಾಡ ಬೆಳಗು ಸುದ್ದಿ

ಕುಕನೂರು,12- ತಾಲೂಕಿನ ಮಂಗಳೂರು ಗ್ರಾಮದ ಜಗನ್ಮಾತೆ ಬೇಡಿದ ವರವನ್ನು ಕಲ್ಪಿಸುವ ಕಾಮಧೇನು ಶ್ರೀ ದುರ್ಗಾದೇವಿ ದೇವಸ್ಥಾನದ ಗೋಪುರ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಕುದುರಿ ಮೋತಿ ಗ್ರಾಮದ ಚಿತ್ರಗಾರರ ಮನೆಗೆ ಬಣ್ಣಕ್ಕೆ ದುರ್ಗಾದೇವಿಯನ್ನು ಕಳಿಸಲಾಗಿತ್ತು.

ಅಭೂತ ಪೂರ್ಣವಾಗಿ ಅಲಂಕಾರಗೊಂಡು ಚಿತ್ರಗಾರರ ಮನೆಯಿಂದ ದುರ್ಗಾದೇವಿಯ ಮೂರ್ತಿಯನ್ನ ಡೊಳ್ಳು, ಹಲಗಿಯ ನಾದ, ತಾಯಿಯ ಜೈಕಾರದೊಂದಿಗೆ ಮಂಗಳೂರು ಗ್ರಾಮಕ್ಕೆ ಕರೆ ತರಲಾಯಿತು.

ಶ್ರೀ ಮುದುಕೇಶ್ವರ ದೇವಸ್ಥಾನದ ಹತ್ತಿರ ತಾಯಿಯನ್ನು ಗಂಗೆ ಸ್ಥಳಕ್ಕೆ ಹೊರಡಿಸಲಾಯಿತು ತದನಂತರ ಮಂಗಳೂರು ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆಯು ಸಾಗಿ, ಶ್ರೀ ದುರ್ಗಾದೇವಿಯ ಮೆರವಣಿಗೆಯ ಮೂರ್ತಿಯು ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.

ಇದೇ ತಿಂಗಳು 13 ಮತ್ತು 14ನೇ ತಾರೀಖಿನಂದು ಶ್ರೀ ದುರ್ಗಾದೇವಿ ದೇವಸ್ಥಾನದ ಗೋಪುರ ಉದ್ಘಾಟನೆ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗುವುದು..

ಈ ಸಂದರ್ಭದಲ್ಲಿ ಶ್ರೀ ದುರ್ಗಾದೇವಿ ಕಮಿಟಿಯ ಅಧ್ಯಕ್ಷರು,ಕಾರ್ಯದರ್ಶಿಗಳು, ಸದಸ್ಯರುಗಳು, ಗ್ರಾಮದ ಗುರು ಹಿರಿಯರು, ಯುವಕ ಮಿತ್ರರು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!