ಪತ್ರಿಕೋದ್ಯಮ ಐಚ್ಚಿಕ ಇಂಗ್ಲಿಷ್ ವಿಭಾಗ ಉದ್ಘಾಟನೆ ಮತ್ತು ಯುವ ಸ್ಫೂರ್ತಿ ಪತ್ರಿಕೆ ಬಿಡುಗಡೆ ವಿದ್ಯಾರ್ಥಿಗಳು ಪತ್ರಕರ್ತರಾಗಲು ಜ್ಞಾನ ಬರವಣಿಗೆ ಭಾಷಾ ಮುಖ್ಯ : ನವಿತಾ ಜೈನ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,15- ಪತ್ರಿಕೋದ್ಯಮ ವಿಭಾಗ ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರದಲ್ಲಿ ಯಶಸ್ಸು ಕಾಣಬೇಕಾದರೆ ಜ್ಞಾನ ಸಂಪಾದನೆ ಜೊತೆಗೆ ಪದ ಸಂಪದ ಬರವಣಿಗೆ ಭಾಷಾ ಕೌಶಲ್ಯ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಖಾಸಗಿ ವಾಹನೀಯ ನಿರೂಪಕಿ ನವಿತ ಜೈನ್ ಅವರು ಹೇಳಿದರು.
ತಾಲೂಕಿನ ತೆಕ್ಕಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಪತ್ರಿಕೋದ್ಯಮ ಮತ್ತು ಐಚ್ಚಿಕ ಇಂಗ್ಲಿಷ್ ವಿಭಾಗವನ್ನು ಉದ್ಘಾಟಿಸಿ ಮತ್ತು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಯುವ ಸ್ಪೂರ್ತಿ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡುತ್ತಾ ಪ್ರಸ್ತುತ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಪ್ರಬಲವಾಗಿ ಬೆಳೆದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಶ್ರದ್ಧೆಯಿಂದ ವೃತ್ತಿ ಕಲಿತರೆ ಉತ್ತಮ ಅವಕಾಶ ಪಡೆಯಬಹುದು ಎಂದರು.
ಆಸಕ್ತಿ ಆಕರ್ಷಕ ಬರವಣಿಗೆ ಮೈಗೂಡಿಸಿಕೊಂಡರೆ ಉತ್ತಮ ಪತ್ರಕರ್ತರಾಗಿಕೊಳ್ಳಬಹುದು ಉತ್ತಮ ರಾಷ್ಟ್ರ ಮತ್ತು ಸಮಾಜವನ್ನು ನಿರ್ಮಿಸಲು ಪತ್ರಿಕೆಗಳು ದೂರದರ್ಶನ ಖಾಸಗಿ ವಾಹಿನಿಗಳು ತಮ್ಮದೇ ಆದ ಕರ್ತವ್ಯವನ್ನು ನಿಭಾಯಿಸುತ್ತವೆ ಕೇವಲ ಸುದ್ದಿ ಸಮಾಚಾರವಲ್ಲ ಜನರಿಗೆ ಶಿಕ್ಷಣ ಮನರಂಜನೆ ಜಾಗೃತಿ ಪ್ರೇರೇಪಿಸುವ ವಿಚಾರಗಳಲ್ಲಿ ನಿಸ್ವಾರ್ಥ ಮನೋಭಾವನೆಯಿಂದ ಹಾಗೂ ಸಾರ್ವಜನಿಕ ರಿಂದ ಯಾವುದೇ ಲಾಭಗಳನ್ನು ಆಕ್ಷೇಪಿಸದೆ ಕಾರ್ಯವನ್ನು ನಿರ್ವಹಿಸುತ್ತಿದೆ ಪ್ರತಿಯೊಂದು ಪತ್ರಿಕೆ ಮತ್ತು ವಾಹಿನಿಗಳು ತಮ್ಮದೇ ಆದ ಜವಾಬ್ದಾರಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿವೆ.
ಪತ್ರಿಕೆಗಳು ಕೆಲಸ ಮಾಡುತ್ತಿವೆ ತಳಮಟ್ಟದಲ್ಲಿ ಕೆಲಸ ಮಾಡುವ ಪತ್ರಕರ್ತರಲ್ಲಿ ಪತ್ರಿಕೋದ್ಯಮದ ಬಗ್ಗೆ ಹೆಚ್ಚಿನ ತಿಳುವಳಿಕೆ ಇರುತ್ತದೆ ವಿದ್ಯಾರ್ಥಿಗಳು ನಿರಂತರವಾಗಿ ಓದಬೇಕು ಬರೆಯಬೇಕು ಪತ್ರಕರ್ತರಾಗಲು ಸಾಧ್ಯ ಎಂದರು.
ಪ್ರಾಂಶುಪಾಲ ಡಾ ಮಲ್ಲಿಕಾರ್ಜುನ ಮೋಕ, ಪತ್ರಕರ್ತ ಸಿ ಮಂಜುನಾಥ ಮಾತನಾಡಿದರು ಬಳ್ಳಾರಿ ಜಿಲ್ಲಾ ಬಿಜೆಪಿ ಯುವ ಅಧ್ಯಕ್ಷ ಸಿದ್ದಪ್ಪ, ಡಾ ಜಗದೀಶ್, ಡಾ ತೇಜಸ್ವಿನಿ, ಡಾ ವೈ ಜನಾರ್ಧನ ರೆಡ್ಡಿ, ಡಾ ಬಿ ವೀರೇಶ್, ಸಿದ್ದೇಶ, ಮಾರಪ್ಪ, ಏಕೆ ವರಲಕ್ಷ್ಮಿ, ಸುಭಾನ್ ಸಾಬ್ ಸಾಕ್ಷರತಾ, ಅಬ್ದುಲ್ ನಬಿ ವಿದ್ಯಾರ್ಥಿಗಳು ಇದ್ದರು.
