ಶಾಲಾ ವಾರ್ಷಿಕೋತ್ಸವ ಸಮಾರಂಭ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ : ಬಿ ಎಂ ನಾಗರಾಜ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,18- ವಿದ್ಯಾರ್ಥಿಗಳು ಪರಿಶ್ರಮದಿಂದ ವಿದ್ಯೆ ಸಂಪಾದಿಸಿ ತಂದೆ ತಾಯಿ ಶಿಕ್ಷಕ ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದು ಶಾಸಕ ಬಿ ಎಂ ನಾಗರಾಜ ಅವರು ಅಭಿಪ್ರಾಯ ಪಟ್ಟರು.
ನಗರದ ಸುನ್ನಿ ಮುಸ್ಲಿಂ ಮತ್ತು ಖಬರಸ್ಥಾನ್ ಕಮಿಟಿಯ ಮೌಲಾನ ಅಬುಲ್ ಕಲಾಂ ಆಜಾದ್ ಪ್ರಾಥಮಿಕ ಹಾಗೂ ಪ್ರೌಢಶಾಲಾ 19ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಕ್ಕಳ ಬಗ್ಗೆ ಪಾಲಕ ಪೋಷಕರಿಗೆ ಇರುವಷ್ಟೇ ಕಾಳಜಿ ಶಿಕ್ಷಕರಿಗೂ ಇರಬೇಕು ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿದಾಗ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಕರೆ ನೀಡಿದರು ಮತ್ತು ಮುಸ್ಲಿಂ ಸಮುದಾಯದವರಿಗೆ ಶಾದಿ ಮಹಲ್ ನಿರ್ಮಿಸಲು ಸೂಕ್ತವಾದ ಸ್ಥಳ ತೋರಿಸಿದಲ್ಲಿ ಕಟ್ಟಡ ಕಟ್ಟಲಾಗುವುದು ಎಂದು ಅವರು ಭರವಸೆ ನೀಡಿದರು.
ಬಳ್ಳಾರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹುಮಾಯುನ್ ಖಾನ್ ಸಾಹಬ್ ಅವರು ಸರ್ವರನ್ನು ಉದ್ದೇಶಿಸಿ ಮಾತನಾಡುತ್ತಾ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಹೆಣ್ಣು ಮಕ್ಕಳ ಕಾಲೇಜನ್ನು ಸಿರುಗುಪ್ಪದಲ್ಲಿ ತಾವು ಆರಂಭಿಸುವದಾದರೆ ನಾನು ಅದಕ್ಕೆ ಪರ್ಮಿಷನ್ ಕೊಡಿಸುವುದಾಗಿ ಭರವಸೆ ಕೊಟ್ಟರು ಗುರು ಹಿರಿಯರು ಸೂಫಿ ಶರಣರು ಸಮಾಜಕ್ಕೆ ನೀಡಿದ ಕೊಡುಗೆ ಉತ್ತಮ ಅವರ ಗುಣ ಆದರ್ಶಗಳಲ್ಲಿ ಅವರ ಸನ್ಮಾರ್ಗದಲ್ಲಿ ನಾವು ನಡೆಯಬೇಕು ಎಂದರು.
ಜಿಲ್ಲಾ ವಕ್ಫ್ ಉಪಾಧ್ಯಕ್ಷರಾದ ಉಡೆ ಗೋಳ್ ಖಾಜಾಸಾಬ್ ಕಣೆಕಲ್ ಮಾಬು ಸಾಬ್ ಸದಸ್ಯ ಮೀರ್ ಹುಸೇನ್ ಸಾಬ್ ಜಿಲ್ಲಾ ವಕ್ಫ್ ಅಧಿಕಾರಿ ಉಮೇರ್ ಅಹಮದ್ ಮಾಜಿ ಜಿಲ್ಲಾ ವಾಕ್ಫ್ ಸದಸ್ಯರಾದ ಚಿಟಗಿ ಎಸ್ ಹುಸೇನ್ ಭಾಷಾ ಹಾಜಿ ಎ ಅಬ್ದುಲ್ ನಬಿ ಹಾಜಿ ಕೆ ಸಿದ್ದೀಕ್ ಸಾಬ್ ಸಿಂಧನೂರು ಕೃಷಿ ಸಹಾಯಕ ನಿರ್ದೇಶಕ ಎನ್ ನಜೀರ್ ಅಹಮದ್ ಖತೀಬ್ ಜಹಿರುದ್ದೀನ್ ಬಾಬು ಹಾಜಿ ಹಂಡಿ ಹುಸೇನ್ ಭಾಷಾ ಹಾಜಿ ಚೌದ್ರಿ ಖಾಜಾ ಸಾಬ್ ಹಾಜಿ ಪಾನ್ ಕೆ ಅಬ್ದುಲ್ಲಾ ಸಾಬ್ ಹಾಜಿ ಸೈಯದ್ ಆಲಂಬಾಷಾ ಹಾಜಿ ಕೆ ಬಾಬಾ ಸಾಬ್ ಹಾಜಿ ಅನ್ಸಾರಿ ಗೌಸುಲ್ ಅಜಂ ಚಾರ್ಮಿನಾರ್ ಹೋಟೆಲ್ ಹಾಜಿ ದೇಶನೂರ್ ಅಬ್ದುಲ್ ಗಫೋರ್ ಸಾಬ್ ಹಾಜಿ ಜಿ ಎ ಕೆ ಬಾಷು ಹಾಜಿ ಟಿ ಎಂ ಶಫಿ ನಗರಸಭಾ ಸದಸ್ಯರಾದ ಹೆಚ್ ಗಣೇಶ್ ಬಿ ಎಂ ಅಪ್ಪಾಜಿ ನಾಯಕ್ ಮೋದಿನ್ ನಜೀರ್ ಸಾಬ್ ಕಮಾಲ್ ಭಾಷಾ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರ್ರಪ್ಪ ಕಲೀಮ್ ಮುಲ್ಲಾ ಸಿರುಗುಪ್ಪ ನಗರದ ಎಲ್ಲಾ ಮಸೀದಿಗಳ ಅಧ್ಯಕ್ಷರು ಪದಾಧಿಕಾರಿಗಳು ಮುಸ್ಲಿಂ ಈದ್ಗಾ ಮತ್ತು ಖಬರ್ ಸ್ಥಾನ ಕಮಿಟಿಯ ಸರ್ವ ಸದಸ್ಯರು ಸಿ ನಜೀರ್ ಅಹ್ಮದ್ ಕೆ ಅಲ್ಲಾಭಕ್ಷಿ ಅಹಮದ್ ಶರೀಫ್ ಎ ಗೌಸ್ ರಬ್ಬಾನಿ ಕೆ ಸುಭಾನ್ ಕೆ ಫಾರೂಕ್ ಎಸ್ ಅಬ್ರಾರ್ ಹುಸೇನ್ ಜೆ ಇನಾಯಾತ್ ಉಲ್ಲಾ ಜಿ ಖಾಜಾ ಹುಸೇನ್ ಬಿ ಅಫ್ಜಲ್ ಹುಸೇನ್ ಅವರು ವೇದಿಕೆದಲ್ಲಿದ್ದರು ಸುನ್ನಿ ಮುಸ್ಲಿಂ ಈದ್ಗಾ ಮತ್ತು ಖಬರಸ್ಥಾನ್ ಕಮಿಟಿ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಶಾಲೆಯ ಅಧ್ಯಕ್ಷ ಹಂಡಿ ಹಾಶೀಮ್ ಅವರು ಸರ್ವರನ್ನು ಸ್ವಾಗತಿ ಪ್ರಸ್ತಾವಿಕವಾಗಿ ಮಾತನಾಡಿದರು ಮುಖ್ಯ ಗುರುಗಳು ಸುಮಂಗಳ ಶಿಕ್ಷಕ ವೃಂದದವರು ಕಾರ್ಯಕ್ರಮದ ವ್ಯವಸ್ಥೆ ಗೊಳಿಸಿದ್ದರು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಎಲ್ಲಾ ಗಣ್ಯರಿಗೆ ಗೌರವಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.
