ವಿದ್ಯಾರ್ಥಿಗಳು ಸಮರ್ಥವಾಗಿ ಪರೀಕ್ಷೆ ಎದುರಿಸಿ : ಪಂಪನಗೌಡ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೧೯- ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪರೀಕ್ಚಾ ಭಯದಿಂದ. ಹೊರಬಂದು ಸಮರ್ಥವಾಗಿ ಪರೀಕ್ಷೆ ಎದುರಿಸಬೇಕು ಎಂದು ನಿವೃತ್ತ ಮುಖ್ಯಗುರು ಜೋಳದರಾಶಿ ಪಂಪನಗೌಡ ಸಲಹೆ ನೀಡಿದರು.
ಅವರು ತಾಲೂಕಿನ ಜೋಳದರಾಶಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಪೆಟ್ರೋಲ್ ಬಂಕ್ ನ ಮಾಲೀಕ ತಿಮ್ಮಪ್ಪ ಜೋಳದರಾಶಿ ಅವರು ಹಮ್ಮಿಕೊಂಡಿದ್ದ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ಹಾಗೂ ಪೆನ್ನುಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಸಂಭ್ರಮದಿಂದಲೇ ಪರೀಕ್ಷಾ ಕೇಂದ್ರಗಳಿಗೆ ತೆರಳಬೇಕು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಎಂಬ ಕೀಳುರಿಮೆ ಇಟ್ಟುಕೊಳ್ಳದೆ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಅಂಕಗಳನ್ನು ಪಡೆದು ಮಾದರಿಯಾಗಬೇಕು ಎಂದರು.
ಯುವ ಉದ್ಯಮಿ ಹಾಗೂ ಲಕ್ಷ್ಮಿ ವೆಂಕಟೇಶ್ವರ ಪೆಟ್ರೋಲ್ ಬಂಕ್ ಮಾಲೀಕ ತಿಮ್ಮಪ್ಪ ಜೋಳದರಾಶಿ ಮಾತನಾಡಿ, ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಸರ್ಕಾರಿ ಶಾಲೆಗಳಲ್ಲಿ ಓದಿದವರಾಗಿದ್ದಾರೆ. ಓದುವ ಛಲ ಹಾಗೂ ಏನಾದರೂ ಸಾಧಿಸಬೇಕು ಎಂಬ ಹಂಬಲ ಇದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರಲ್ಲದೆ, ನಾನು ವಿದ್ಯಾರ್ಥಿಯಾಗಿದ್ದಾಗ ಪರೀಕ್ಷೆ ಬರೆಯಲು ಪ್ಯಾಡ್ , ಪೆನ್ನುಗಳು ಸಹ ಇರಲಿಲ್ಲ. ಅತ್ಯಂತ ಕಡುಬಡತನದಲ್ಲಿ ಬೆಳೆದು ಬಂದಿದ್ದೇನೆ. ಸರ್ಕಾರಿ ಶಾಲೆಗೆ ಏನಾದರೂ ಸಣ್ಣ ಸೇವೆ ಮಾಡಬೇಕು ಎಂಬ ಆಶಯದಿಂದ ಪರೀಕ್ಷೆ ಪ್ಯಾಡ್ ಹಾಗೂ ಪೆನ್ನುಗಳನ್ನು ನೀಡುತ್ತಿರುವೆ ಎಂದು ತಿಳಿಸಿದರು.
ವಾಲ್ಮೀಕಿ ಸಮಾಜದ ಮುಖಂಡರಾದ ದುರುಗಪ್ಪ, ಜನಾರ್ದನ ನಾಯಕ, ಹೊನ್ನೂರಪ್ಪ, ಅಶೋಕ ಗೌಡ, ಭೀಮೇಶ್ ಸ್ವಾಮಿ, ಮನೋಜ್, ವಿನೋದ್, ದೇವೇಂದ್ರ, ಜೋಳದರಾಶಿ ಶೇಕ್ಷಾವಲಿ, ರೂಪನಗುಡಿ ನಾಗರಾಜ್, ಗೋವಿಂದ, ಹನುಮಂತಪ್ಪ, ಕುಂಟನಹಾಳ್ ದೊಡ್ಡಬಸವನಗೌಡ ಇತರರಿದ್ದರು.ಚೇಳ್ಳಗುರ್ಕಿ, ರೂಪನಗುಡಿ, ಕುಂಟನಹಾಳು ಹಾಗೂಹಗರಿಫಾರ್ಮ್ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.
