037b2cf4-3342-4cdc-b25a-f6091b3886ba (1)

ದೇಶನೂರು :ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಸಮಾನತೆ ಬಗ್ಗೆ ಅರಿವು ಮೂಡಿಸಿ ನ್ಯಾಯಾಧೀಶ ಹಾಜಿ ಹುಸೇನ್ ಸಾಬ್ ಯಾದವಾಡ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, ೨೦-  ದೇಶದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯಕ ಸಾಮಾಜಿಕ ನ್ಯಾಯವು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರವಾಗಿರುವ ತತ್ವ ಆಗಿದೆ ಜಗತ್ತಿನಾದ್ಯಂತ ಲಿಂಗ ವಯಸ್ಸು ಜನಾಂಗೀಯ ಧರ್ಮ ಸಂಸ್ಕೃತಿ ಬಡತನ ನಿರುದ್ಯೋಗ ಶಿಕ್ಷಣ ವಲಸೆ ಆರ್ಥಿಕ ಮುಂತಾದ ಸಾಮಾಜಿಕ ಸಮಸ್ಯೆಗಳು ಗಂಭೀರ ವಾಗಿದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯರು ಕಾರ್ಯದರ್ಶಿಗಳು ಪ್ರಥಮ ದರ್ಜೆ ನ್ಯಾಯ ದಂಡ ಹಾಗೂ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಹೇಳಿದರು.

ಸಿರುಗುಪ್ಪ ತಾಲೂಕು ದೇಶನೂರು ಗ್ರಾಮದ ಸದಾ ಶಿವರೆಡ್ಡಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಸಿರುಗುಪ್ಪ ವಕೀಲರ ಸಂಘ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಾ ಸಾಮಾಜಿಕ ಸಮಸ್ಯೆಗಳು ಗಂಭೀರವಾಗಿದ್ದು ಇಂತಹ ಸಮಸ್ಯೆ ತೊಡೆದುಹಾಕುವ ಪ್ರಯತ್ನಗಳಿಗೆ ಪ್ರೋತ್ಸಾಹಿಸಲು ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು,

ವಕೀಲರ ತಂಡದ ಹಿರಿಯ ವಕೀಲರಾದ ಎನ್ ಅಬ್ದುಲ್ ಸಾಬ್ ರಾರಾವಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಾ ಪ್ರತಿ ವರ್ಷ ಫೆಬ್ರವರಿ 20ರಂದು ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತದೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2007 ರ ಫೆಬ್ರವರಿ 20ರಂದು ಈ ದಿನವನ್ನು ಅಂಗೀಕರಿಸಲಾಯಿತು ಹಾಗೂ 2009ರಲ್ಲಿ ಈ ದಿನವನ್ನು ಆಚರಿಸಲು ಅನುಮೋದನೆ ನೀಡಲಾಯಿತು ಪ್ರತಿ ಸಮಾಜದಲ್ಲೂ ಐಕ್ಯತೆ ಸಾಮರಸ್ಯ ಸೌಹಾರ್ದತೆ ಮೂಲಭೂತ ಹಕ್ಕುಗಳ ನ್ಯಾಯವಿದ್ದರೆ ಸಮಾಜದ ಅಭಿವೃದ್ಧಿ ಯಾಗುತ್ತದೆ ಇದರಿಂದ ದೇಶ ಅಭಿವೃದ್ಧಿಯಾಗುತ್ತದೆ ದೇಶ ಅಭಿವೃದ್ಧಿಯಾದರೆ ವಿಶ್ವವೇ ಅಭಿವೃದ್ಧಿ ಯಾಗುತ್ತದೆ ಎಂಬುದು ವಿಶ್ವಸಂಸ್ಥೆಯ ಅಭಿಪ್ರಾಯವಾಗಿದೆ ಎಂದು ಅವರು ವಿವರಿಸಿ ಮಾತನಾಡುತ್ತಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಬಿ ಕುಮಾರಗೌಡ ಅಧ್ಯಕ್ಷತೆ ವಹಿಸಿದ್ದರು ಸರಕಾರಿ ಸಹಾಯಕ ಅಭಿಯೋಜಕಿ ಶಾರದಾ ವಕೀಲರ ಸಂಘದ ಅಧ್ಯಕ್ಷ ಎಸ್ ಮಂಜುನಾಥಗೌಡ ವಕೀಲರ ಸಂಘದ ಕಾರ್ಯದರ್ಶಿ ಹೆಚ್ ಪ್ಯಾಟೆಗೌಡ ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಹಾಜಿ ಎ ಅಬ್ದುಲ್ ನಬಿ ಬಳ್ಳಾರಿ ಜಿಲ್ಲಾ ಡಯಟ್ ಉಪನ್ಯಾಸಕರಾದ ಹೆಚ್ ಕೆ ಪಾಂಡು ಮುಖ್ಯ ಅತಿಥಿಗಳಾಗಿದ್ದರು ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯ ಅಂಗವಾಗಿ ನ್ಯಾಯ ನಿಮ್ಮದು ನೆರವು ನಮ್ಮದು ಕಾನೂನು ಅರಿವು ನೆರವು ಕಾರ್ಯಕ್ರಮದ ಕುರಿತು ಪ್ಯಾನಲ್ ವಕೀಲರಾದ ಮಲ್ಲಿ ಗೌಡ ವೆಂಕಟೇಶ್ ನಾಯಕ ಹೆಚ್ ಕೆ ರಾಮಪ್ಪ ಕೆ ಸಣ್ಣ ಹುಸೇನ್ ಅವರು ಮಾತನಾಡಿದರು ಶಿಕ್ಷಕರು ಡಿ ನಾಗನಗೌಡ ಅವರು ಸರ್ವರನ್ನು ಸ್ವಾಗತ ಬಯಸಿದರು ನಾಗರಾಜ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು ಪ್ಯಾನಲ್ ವಕೀಲರು ವೆಂಕಟೇಶ್ ನಾಯಕ ಅವರು ವಂದನಾರ್ಪಣೆ ಮಾಡಿದರು ಶಾಲಾ ಮಕ್ಕಳು ಮತ್ತು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!