ಮಹಾ ಶಿವರಾತ್ರಿ ಉಪವಾಸ ವ್ರತ ಶಿವನಾಮ ಜಪ ಜಾಗರಣೆ ಸಂಗೀತೋತ್ಸವ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,9- ಮಹಾ ಶಿವರಾತ್ರಿ ದೈವಿಕ ರಾತ್ರಿ ಧ್ಯಾನ ಆನಂದ ಗಾಯನ ಸಂಗೀತೋತ್ಸವ ಶ್ರೀ ಅಭಯಂಜೆನಯ್ಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಸಿರಿ ಸಾಂಸ್ಕೃತಿಕ ಸಂಸ್ಥೆ ಅಕ್ಕಿ ಗಿರಣಿ ಮಾಲೀಕರ ಸಂಘ ತಾಲೂಕ ರೆಡ್ಡಿ ಜನ ಸಂಘ ಸಹಭಾಗಿತ್ವದಲ್ಲಿ ಒಳಬಳ್ಳಾರಿ ಸುವರ್ಣಗಿರಿ ಮಠದ ಸಿದ್ದಲಿಂಗ ಮಹಾಸ್ವಾಮಿ ಹಾಗೂ ಬಸವಲಿಂಗ ಮಹಾಸ್ವಾಮಿ ದಿವ್ಯ ಸಾನಿಧ್ಯದಲ್ಲಿ ಶಾಸಕ ಬಿ. ಎಂ . ನಾಗರಾಜ, ಮಾಜಿ ಶಾಸಕ ಟಿ ಎಂ ಚಂದ್ರಶೇಖರಯ್ಯ ಸ್ವಾಮಿ, ಅಕ್ಕಿ ಗಿರಣಿ ಮಾಲಿಕ ಬಿ ಮುತ್ಯಾಲಯ್ಯ ಶೆಟ್ಟಿ ಅವರು ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರು ತಾಲೂಕ ರೆಡ್ಡಿ ಜನಸಂಘ ಅಧ್ಯಕ್ಷರು ಸಿರಿ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ಅಗಸನೂರು ಎಂ ಗೋಪಾಲ ರೆಡ್ಡಿ ಅವರು ಮಹಾಶಿವರಾತ್ರಿಯ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಅವರು ನಿರೂಪಣೆ ಕಾರ್ಯಕ್ರಮ ನಿರ್ವಾಹಕರಾಗಿ ವ್ಯವಸ್ಥೆ ಮಾಡಿ ಸರ್ವರನ್ನು ಸ್ವಾಗತ ಬಯಸಿದರು.
ಡಿವೈಎಸ್ಪಿ ವೆಂಕಟೇಶ್ ತಹಶೀಲ್ದಾರ್ ಶಂಶೇ ಆಲಂ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್, ನಗರಸಭಾ ಪೌರಾಯುಕ್ತ ಹೆಚ್ ಎನ್ ಗುರುಪ್ರಸಾದ್, ಸಿಪಿಐ ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ, ಸಮನ್ವಯಾಧಿಕಾರಿ ತಮ್ಮನ ಗೌಡ ಪಾಟೀಲ್, ಸಾಕ್ಷರತಾ ಸದಸ್ಯರು ಅಬ್ದುಲ್ ನಬಿ, ನಗರಸಭೆಯ ಎಲ್ಲಾ ಸದಸ್ಯರು ಅಕ್ಕಿ ಗಿರಣಿ ಮಾಲೀಕರ ಅಧ್ಯಕ್ಷ ಎನ್ ಜಿ ಬಸವರಾಜಪ್ಪ, ಬಿ ಜಿ ಮಂಜುನಾಥ ರೆಡ್ಡಿ, ನ್ಯಾಯವಾದಿ ಎಚ್ ಕೆ ಮಲ್ಲಿಕಾರ್ಜುನಯ್ಯ ಸ್ವಾಮಿ, ನೂರಾರು ಗಣ್ಯರ ಸಮ್ಮುಖದಲ್ಲಿ ಸಂಗೀತ ಉತ್ಸವ ಕಾರ್ಯಕ್ರಮ ನಗರದ ಶ್ರೀ ಬೀರಲಿಂಗೇಶ್ವರ ಸ್ವಾಮಿ, ಅಮೃತೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ, ಶ್ರೀ ಶಂಭುಲಿಂಗೇಶ್ವರ, ನೀಲಕಂಠೇಶ್ವರ, ಕಾಶಿ ವಿಶ್ವನಾಥ, ನಗರೇಶ್ವರ, ಕೊಟ್ಟೂರೇಶ್ವರ, ನಾಗಲಿಂಗೇಶ್ವರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕೆಂಚನಗುಡ್ಡ, ಗಂಗಾಧರ ಸ್ವರ ಪರ್ವತ ಮಲ್ಲಯ್ಯ ಶಾಲಿಗನೂರು, ರಾಮಲಿಂಗೇಶ್ವರ ತೆಕ್ಕಲಕೋಟೆ, ವರವಿನ ಮಲ್ಲೇಶ್ವರ, ನೆಲ ಅಮರೇಶ್ವರ, ಈಶ್ವರ ಬಿ ಎಂ ಸೂಗೂರು, ಈಶ್ವರ ಗಜಗಿನಾಳ, ಬಸವೇಶ್ವರ ಇಬ್ರಾಹಿಂಪುರ್, ಬಾಗೇವಾಡಿ ಬಸವೇಶ್ವರ, ಸಿರಿಗೇರಿ ನಾಗನಾಥೇಶ್ವರ, ಶಿವ ದೇವಾಲಯಗಳಿಗೆ ಹೂಗಳಿಂದ ವಿಶೇಷ ಅಲಂಕಾರ ವಿವಿಧ ಶಿವ ಭಕ್ತರು ಬೆಳಗಿನ ಜಾವದಿಂದಲೇ ಸಿರುಗುಪ್ಪ ತಾಲೂಕಿನದ್ಯಂತ ಮಹಾಶಿವರಾತ್ರಿ ಜಾಗರಣೆ ಆಚರಣೆ ಸಡಗರ ಸಂಭ್ರಮದಿಂದ ಶ್ರದ್ದೆಯಿಂದ ಉಪವಾಸ ವ್ರತ ಇಡೀ ರಾತ್ರಿ ಜಾಗರಣೆಯಲ್ಲಿ ಶಿವ ದೇಗುಲಗಳಲ್ಲಿ ಧ್ಯಾನದೊಂದಿಗೆ ದರ್ಶನ ಪಡೆದು ಶಿವನಾಮ ಸ್ಮರಣೆ ಮಾಡುತ್ತಾ ಭಕ್ತಿ ಸಮರ್ಪಿಸಿದರು.
