WhatsApp Image 2024-03-09 at 12.01.50 PM

ವಿಮಾ ನೌಕರರ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,9- ಪ್ರತಿ ವರ್ಷದಂತೆ ಭಾರತೀಯ ವಿಮಾ ಸಂಸ್ಥೆ ನೌಕರರ ಸಂಘ ಬಳ್ಳಾರಿ ಶಾಖೆ 2,ವತಿಯಿಂದ ಅರ್ಥಪೂರ್ಣವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಕಮೇಲ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ವಯಂ ಪ್ರೇರಿತರಾಗಿ ಮತ್ತು ವಿದ್ಯಾರ್ಥಿಗಳ ಉತ್ತಮ ಪ್ರಯೋಜನಕ್ಕಾಗಿ 43 ಇಂಚಿನ ಆಂಡ್ರಾಯ್ಡ್ ಪ್ಲಾಟ್ ಟಿವಿ ಯನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ 71 ವಯಸ್ಸಿನ ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಸುಜಾತ ಅವರ ಸೇವೆಗಳನ್ನು ಗುರುತಿಸಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೃತ್ತಿಯಿಂದ ನಿವೃತ್ತಿ ಹೊಂದಿದ್ದರೂ ಕೂಡ ಶಿಕ್ಷಕಿ ಸುಜಾತ ಅವರು ಇಂದಿಗೂ ವಿದ್ಯಾರ್ಥಿಗಳಿಗೆ ಪ್ರತಿದಿನ ಶಾಲೆಗೆ ಬಂದು ಪಾಠ ಹೇಳುತ್ತಿರುವುದು ಅಭಿನಂದನೆಯ ಎಂದು ಎಲ್ಐಸಿ ಬ್ರಾಂಚ್ ಮೆನೇಜರ್ ಬ್ರಾಂಚ್ 2 ಸಂಪತ್ ಕುಮಾರ್ ಅಭಿನಂದಿಸಿದರು.

ಈ ಸಂದರ್ಭದಲ್ಲಿ ವಿಮಾನೌಕರರ ಸಂಘದ ಸಂಘಟನೆಯ ಕಾರ್ಯದರ್ಶಿ, ಡಿ ವಿ ಸೂರ್ಯನಾರಾಯಣ ಮಾತನಾಡುತ್ತಾ, ಎಂದು ಮಹಿಳೆಯರು ಎಲ್ಲ ರಂಗದಲ್ಲಿ ಸೇವೆಗಳು ಸಲ್ಲಿಸುತ್ತಾ ದೇಶದ ಅಭಿವೃದ್ಧಿಗೆ ಪುರುಷರ ಜೊತೆ ಕೆಲಸ ಮಾಡುತ್ತಿರುವುದು ಅಭಿನಂದನೆ ಯಾಂದರು. ಅಂತರ್ಜಾತಿಯ ಮಹಿಳಾ ದಿನಾಚರಣೆ ಅಂಗವಾಗಿ ಎಲ್ಲಾ ಮಹಿಳೆಯರಿಗೂ ಅಭಿನಂದನೆಗಳು ಸಲ್ಲಿಸುತ್ತಿರುವುದಾಗಿ ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಕಷ್ಟಪಟ್ಟು ಓದಿ ಉತ್ತಮ ಫಲಿತಾಂಶವನ್ನು ಹೊಂದಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯ ಸಂಯೋಜಕರು ಲವಕುಮಾರ್, ಎಲ್ಐಸಿ ಅಸಿಸ್ಟೆಂಟ್ ಬ್ರಾಂಚ್ ಮೆನೇಜರ್ ವೆಂಕಟರಮಡು, ವಿಮಾ ನೌಕರರ ಸಂಘದ ಖಜಂಜಿ, ವಿಜ್ಞೇಶ್, ಶಾಂತಕುಮಾರಿ, ವಿ ರವಿಕುಮಾರ್, ಜೀವ ವಿಮೆ ಪ್ರತಿನಿಧಿ, ಪದ್ಮ, ಮುಖ್ಯೋಪಾಧ್ಯಾಯರು, ತಿಪ್ಪೇಸ್ವಾಮಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!