WhatsApp Image 2024-03-11 at 12.35.41 PM

ಕೆಂಚನಗುಡ್ಡ ಹಾಗೂ ದೇಶನೂರು ಕಾಲುವೆ ಕಾಮಗಾರಿಗೆ ಶಾಸಕರಿಂದ ಅಡಿಗಲ್ಲು

ಕರುನಾಡ ಬೆಳಗತು ಸುದ್ದಿ

ಸಿರುಗುಪ್ಪ,11- ಇತಿಹಾಸದ ಉದ್ದಕ್ಕೂ ಅನ್ನದಾತರ ಕ್ಷೇಮಾಭಿವೃದ್ಧಿಗಾಗಿ ವಿಜಯನಗರ ಅರಸರು ಸಾಮ್ರಾಟರು ಬಾವಿ ಕೆರೆ ಅಣೆಕಟ್ಟು ಕಾಲುವೆಗಳ ಮುಖಾಂತರ ಅಗತ್ಯ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದಾರೆ ಅದಕ್ಕೆ ಉದಾಹರಣೆಯಾಗಿ ವಿಜಯನಗರದ ಅರಸ ಮನೆತನದ ನೆರವಿನಿಂದ ಹಲವಾರು ವರ್ಷಗಳ ಹಿಂದಿನಿಂದಲು ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಮತ್ತು ದೇಶನೂರು ಗ್ರಾಮಗಳಲ್ಲಿ ನೀರಾವರಿ ಕಾಣಬಹುದಾಗಿದೆ ಎಂದು ಶಾಸಕ ಬಿ ಎಂ ನಾಗರಾಜ ಅವರು ಹೇಳಿದರು.

ತಾಲೂಕು ತುಂಗಭದ್ರಾ ನದಿ ವಿಜಯನಗರ ಆಣೆಕಟ್ಟಿನ ಕಾಲುವೆಗಳ ಅಧುನಿಕರಣ ಯೋಜನೆ ಕೆಂಚನಗುಡ್ಡ ಗ್ರಾಮ 1.38 ರೂ ಮತ್ತು ದೇಶನೂರು ಗ್ರಾಮ 3.68 ಕೋಟಿ ರೂ ವೆಚ್ಚದ ಮಡಿ ಕಾಲುವೆಗಳ ಅಡಿಗಲ್ಲು ಹಾಕುವ ಮೂಲಕ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿ ಇಂದು ಸರ್ಕಾರ ರೈತರ ಸಮಗ್ರ ಅಭಿವೃದ್ಧಿಗೆ ಸಹ ರೈತರ ಜಮೀನುಗಳಿಗೆ ವಿವಿಧ ಯೋಜನೆ ಗಳ ಅಡಿಯಲ್ಲಿ ಪೂರಕವಾದ ನೀರಾವರಿ ಕಲ್ಪಿಸುತ್ತಿದೆ ರೈತ ಬಾಂಧವರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಕೊಟ್ಟ ಮಾತಿನಂತೆ ನಡೆದುಕೊಳ್ಳುವವರನ್ನು ಬೆಂಬಲಿಸಿದರೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಸರ್ಕಾರದ ಅಗತ್ಯ ಸೌಲಭ್ಯ ಕಲ್ಪಿಸಿ ಕೊಡಲಾಗುತ್ತಿದೆ ಸರ್ಕಾರದ ಪ್ರಯೋಜನದ ಎಲ್ಲರೂ ಪಡೆದುಕೊಂಡು ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಬಲ ಪಡಿಸಬೇಕು ಎಂದು ಶಾಸಕ ಬಿ ಎಂ ನಾಗರಾಜ್ ಅವರು ಸರ್ವರಲ್ಲಿ ಕೋರಿದರು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಎ ಇ ಇ ಸುರೇಶ್ ಪೂಜಾರಿ, ಜೆ ಇ ತಿಪ್ಪೇಸ್ವಾಮಿ, ಮುನೀರ್ ಇ ಜಿ ಐ ಎಸ್ ಸಂಸ್ಥೆಯ ಮಂಜುಳ, ವೆಂಕಟೇಶ್, ವಿರೇಶ, ಯೋಗೇಶ ಸ್ವಾಮಿ ದೇಶನೂರು, ವಿ ಎನ್ ಸಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಅಬ್ದುಲ್ ರಹೀಮ್, ಉಪಾಧ್ಯಕ್ಷ ಕೆ ಹನುಮೇಶಪ್ಪ, ಕಾರ್ಯದರ್ಶಿ ಈರಣ್ಣ ಕೆಂಚನಗುಡ್ಡ, ಸಂಘದ ಅಧ್ಯಕ್ಷ ಎಸ್ ಮುದುಕಪ್ಪ, ಉಪಾಧ್ಯಕ್ಷ ಪಂಪಣ್ಣ, ಕಾರ್ಯದರ್ಶಿ ಕೆಎಂ ಸರ್ಮಸ್, ಮುಖಂಡರಾದ ಸುಗನಗೌಡ, ಪಿ ವೆಂಕೋಬ, ಆರ್ ಎಲ್ಲಯ್ಯ, ಅಬ್ದುಲ್ ಗಫೂರ್, ಅಬ್ದುಲ್ ನಬಿ, ಚಂದ್ರ ದೇವೇಂದ್ರ, ಬಾಬಯ್ಯ, ರಮಣಯ್ಯ, ಚಿದಾನಂದ ರೈತ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!