ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ : ನೀಲಮ್ಮ ತಾಯಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,11- ಜಾತ್ರಾ ಮಹೋತ್ಸವ ಮತ್ತು ಮಠ ಮಾನ್ಯಗಳಲ್ಲಿ ಉಚಿತ ಸಾಮೂಹಿಕ ವಿವಾಹಗಳು ನಡೆಯುತ್ತವೆ ಪ್ರತಿಯೂಬ್ಬರು ಸಾಮೂಹಿಕ ವಿವಾಹಗಳನ್ನು ಮಾಡುವದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿದಂತ ಆಗುತ್ತದೆ ಮತ್ತು ಆರ್ಥಿಕಹೊರೆ ತಗ್ಗಿಸಿ ಬಡವರಿಗೆ ವರದಾನವಾಗುತ್ತದೆ ಎಂದು ಶ್ರೀ ಕರಿಬಸವೇಶ್ವರ ಉಕ್ಕಡಗಾತ್ರಿಯ ದೈವಶಕ್ತಿ ಯಾಗಿರುವ ಮಾತು ಶ್ರೀ ನೀಲಮ್ಮ ತಾಯಿಯವರು ಆಶೀರ್ವಚನ ನೀಡಿದರು.
ತಾಲ್ಲೂಕಿನ ಶಿರಗುಂಪಿ ಗ್ರಾಮದಲ್ಲಿ ದೈವ ಶಕ್ತಿ ಯಾಗಿರುವ ಮಾತೋ ಶ್ರೀ ನೀಲಮ್ಮ ಹೂಗಾರ್ ಇವರ ದಿವ್ಯ ಸಾನಿಧ್ಯದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ತಾಲ್ಲೂಕಿನ ಗಡಿ ಗ್ರಾಮವಾಗಿರುವ ಶಿರಗುಂಪಿ ಗ್ರಾಮದಲ್ಲಿ ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನವನ್ನು ನಿರ್ಮಿಸಿದ್ದಾರೆ ಉಕ್ಕಡಗಾತ್ರಿ ಅಜ್ಜಯ್ಯನ ಆಶೀರ್ವಾದದಿಂದ ದೈವ ಭಕ್ತಿಯಾಗಿರುವ ನೀಲಮ್ಮ ತಾಯಿ ಆಶೀರ್ವಾದದಿಂದ ಕೂಡ ಈ ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳ ನೆರವಿನಿಂದ ಗ್ರಾಮದಲ್ಲಿ ವಿಶಾಲವಾದ ದೇವಸ್ಥಾನವನ್ನು ನಿರ್ಮಿಸಿದ್ದಾರೆ.
ಶಿರಗುಂಪಿ ಗ್ರಾಮದ ಶ್ರೀ ಕರಿಬಸವೇಶ್ವರ 9ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ 4ನೇ ವರ್ಷದ ಮಹಾ ರಥೋತ್ಸವ. ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ನಂತರ ಶಿವನಗೌಡ ಅಮರಗೋಳ ಗ್ರಾಮದ ಹಾಗೂ ಶಶಿಧರ್ ಹೂಗಾರ್ ಅವರು ಮಾತನಾಡಿ ಈ ಗ್ರಾಮದ ಕರಿಬಸವೇಶ್ವರ ಎಂದು ನೆನೆದರೆ ಉಕ್ಕಡಗಾತ್ರಿಯ ಕರಿಬಸವೇಶ್ವರ ಇಂದು ನೀಲಮ್ಮ ತಾಯಿಗೆ ಒಲಿದು ಬಂದು ಸುತ್ತ ಮುತ್ತಲ ಗ್ರಾಮ ದವರಿಗೆ ಸುಖ ಶಾಂತಿಯನ್ನು ನೀಡುತ್ತಿದ್ದಾರೆ ಹಾಗೂ ಸರ್ವ ಧರ್ಮವನ್ನು ಯಾರು ರಕ್ಷಿಸುತ್ತಾರೋ ಅಂತವರನ್ನು ಧರ್ಮ ನಿಮ್ಮನ್ನು ರಕ್ಷಿಸುತ್ತದೆ ಎಂದು ಸದಾ ಭಕ್ತರೊಂದಿಗೆ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾರೆ ಮಾತು ಶ್ರೀ ನೀಲಮ್ಮ ತಾಯಿಯವರು ಎಂದು ಹೇಳಿದರು.
ಸಂಗೀತ ಬಳಗ ಪುರಾಣ ಪ್ರವಚನಕಾರರು ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಪ್ರಕಾಶಯ್ಯ ಶಾಸ್ತ್ರಿಗಳು ಸಾ/ಬಂಡಿ ಕುಮಾರ ನಾಗರಾಜ ಕರಡಕಲ್, ಬಸವರಾಜ ಕುರಹಟ್ಟಿ ಈಕಾರ್ಯಕ್ರಮದಲ್ಲಿ ಮುಖಂಡರು ಬಸವರಾಜ ಜಟ್ಟಿ, ಶಿವನಗೌಡ ಅಮರಗೋಳ ಗ್ರಾಮ, ಮಹದೇವ ಗುರಿಕಾರ, ದೇವೇಂದ್ರಪ್ಪ ಕದಡಿ, ದಸ್ತಗಿರಿ ಸಾಬ್ ಎಚ್, ದಾವಲಸಾಬ ಮುಲ್ಲಾನವರ, ಹುಚ್ಚಯ್ಯ ಹಿರೇಮಠ, ಮುತ್ತಣ್ಣ ಹೂಗಾರ, ಮಲ್ಲಪ್ಪ ಹೂಗಾರ, ಮುತ್ತಯ್ಯ ಸ್ವಾಮಿ ಹಿರೇಮಠ, ಶರಣಪ್ಪ ಕೊಡಗಾನೂರ, ಮತ್ತು ಮಾದಿಗನೂರು ಸಕಲ ಸದ್ಭಕ್ತರು ಶಿರುಗುಂಪೆ ಮತ್ತು ಅಮರಗೋಳ ಹಾಗೂ ಸುತ್ತಮುತ್ತಲಿನ ಗ್ರಾಮದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
