ವ್ಯಸನ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 14- ನಗರದ ಎಚ್ ಆರ್ ಸರೋಜಮ್ಮ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಡಿಯಲ್ಲಿ ವ್ಯಸನ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಡಾ. ರವಿ ಎನ್ ಚವ್ಹಾಣ ಮಾತನಾಡಿ ವಿದ್ಯಾರ್ಥಿ ಜೀವನ ಅಮೂಲ್ಯವಾದದು ಅದನ್ನು ಚಟಗಳಿಗೆ ದಾಸರಾಗಿ ಹಾಳು ಮಾಡಿಕೊಳ್ಳಲಾರದೆ ಓದಿಗೆ ಆದ್ಯತೆ ನೀಡಬೇಕು. ಭವಿಷ್ಯದಲ್ಲಿ ಉತ್ತಮ ಗುರಿಗಳನ್ನು ಇಟ್ಟುಕೊಂಡು ಮುನ್ನಡೆಯಬೇಕು.
ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳದೇ ವ್ಯಸನ ಮುಕ್ತವಾದ ಜೀವನವನ್ನು ಆನಂದಿಸಬೇಕು.
ಚಟಗಳಿಗೆ ದಾಸನಾಗಿರುವ ವ್ಯಕ್ತಿಯ ವೈಯಕ್ತಿಕ, ಸಾಮಾಜಿಕ ಹಾಗೂ ಕೌಟುಂಬಿಕ ಜೀವನವು ಸೂಚಿನೀಯವಾಗಿರುತ್ತದೆ. ವ್ಯಸನಕ್ಕೆ ದಾಸನಾಗಿರುವ ವ್ಯಕ್ತಿಯು ಗೌರವ ಆದರಗಳನ್ನು ಕಳೆದುಕೊಳ್ಳುತ್ತಾನೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಹನುಮಂತ್ ವಡ್ದರ, ಕೆಎಚ್ ಕೊಳ್ಳನ್ನವರ, ನರಸಿಂಹಲು, ಶ್ರೀಮತಿ ಡಾ. ಜರಿನಾ, ಕುಮಾರಿ ಶ್ವೇತಾ, ಶ್ರೀಕಾಂತ, ಗ್ಯಾನಪ್ಪ ಉಪಸ್ಥಿತರಿದ್ದರು
