
ಹಿಪ್ಪುನೇರಳೆ ಬೆಳೆಯ ಸಮೀಕ್ಷೆ ಮಾಡಿಸಲು ರೈತರಿಗೆ ಸಲಹೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 30- ಪ್ರಸ್ತುತ ಜುಲೈ ತಿಂಗಳಲ್ಲಿ “ಕ್ರಾಪ್ ಸರ್ವೆ ಖಾರೀಫ್-2024 ಆ್ಯಪ್ ನಲ್ಲಿ ಬೆಳೆ ಸಮೀಕ್ಷೆ ಆರಂಭವಾಗಿದೆ. ಆದರೆ ಜಿಲ್ಲೆಯ ರೇಷ್ಮೆ ಬೆಳೆಗಾರರಿಂದ ಈ ಸಮೀಕ್ಷೆಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಹಳ್ಳಿಗಳಲ್ಲಿನ ರೈತರಿಂದ ದೊರೆಯುತ್ತಿಲ್ಲ. ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ಆರಂಭವಾಗಿರುವ ಮುಂಗಾರು ಬೆಳೆ ಸಮೀಕ್ಷೆಗಾಗಿ ರೈತರು ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಇಲ್ಲವೇ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ತಾವು ಬೆಳೆದ ಬೆಳೆಗಳ ಸಮೀಕ್ಷೆ ಕೈಗೊಳ್ಳಬಹುದು. ಮೊಬೈಲ್ ಇಲ್ಲದಿದ್ದರೆ ಗ್ರಾಮದಲ್ಲಿರುವ ಪಿ.ಆರ್. ರನ್ನು ಭೇಟಿ ಮಾಡಿ ಬೆಳೆ ಸಮೀಕ್ಷೆ ಮಾಡುವಾಗ ಹಿಪ್ಪುನೇರಳೆಯನ್ನು ತಪ್ಪದೇ ದಾಖಲು ಮಾಡಬೇಕು.
ಸರ್ಕಾರವು ರೈತರ ಬೆಳೆಗಳ ಬಗ್ಗೆ ನಿಖರವಾದ ಮಾಹಿತಿ ಪಡೆದುಕೊಳ್ಳಲು ಮೊಬೈಲ್ ಆ್ಯಪ್ ಅಭಿವೃದ್ದಿಪಡಿಸಿದ್ದು, ಗ್ರಾಮಗಳಲ್ಲಿ ಆಯ್ಕೆಯಾಗಿರುವ ಪಿ.ಆರ್.ಗಳಿಂದ ಬೆಳೆ ಸಮೀಕ್ಷೆ ಕಾರ್ಯ ಕೃಷಿ ಇಲಾಖೆಯಿಂದ ಪ್ರಾರಂಭಗೊAಡಿದೆ. ರೈತರ ಬಳಿ ಆಂಡ್ರಾಯ್ಡ್ ಮೊಬೈಲ್ ಇಲ್ಲವಾದಲ್ಲಿ ಅವರಿಗೆ ಅನುಕೂಲವಾಗಲೆಂದು ಕೃಷಿ ಇಲಾಖೆ ಪ್ರತಿ ಹಳ್ಳಿಗೆ ಪಿ.ಆರ್.ಗಳನ್ನು ನೇಮಕ ಮಾಡಿದೆ. ರೈತರ ಬೆಳೆಯ ಮಾಹಿತಿಯನ್ನು ಸಮೀಕ್ಷೆಯಲ್ಲಿ ಅಪ್‌ಲೋಡ್ ಮಾಡುವುದು ಇವರ ಕೆಲಸವಾಗಿದೆ. ಆದರೆ ಇವರನ್ನು ಸದ್ಭಳಕೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ.
ಬೆಳೆ ಸಮೀಕ್ಷೆಯಿಂದ ಇರುವ ಉಪಯೋಗಗಳು, ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಿಸಲು, ರಾಷ್ಟಿçÃಯ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆಯಲು, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ, ಬೆಳೆ ಹಾನಿ ವರದಿಯಾದ ಸಂದರ್ಭಗಳಲ್ಲಿ ಬೆಳೆ ಕಟಾವು ಪ್ರಯೋಗದಲ್ಲಿ ಬೆಳೆ ವಿಮಾ ಯೋಜನೆ ಸಂದರ್ಭಗಳಲ್ಲಿ ಇಲಾಖೆಯಿಂದ ಸಹಾಯಧನ ಸೌಲಭ್ಯ ಪಡೆಯಲು ಚಾಕಿ ಮತ್ತು ಗೂಡಿಗೆ ಪ್ರೋತ್ಸಾಹಧನ ಪಡೆಯಲು ಮತ್ತು ರೇಷ್ಮೆ ಹುಳು ಸಾಕುವ ಮನೆಗೆ, ಹನಿ ನೀರಾವರಿ, ನರೇಗಾ, ಉಪಕರಣ ಪಡೆಯಲು ಸಹಾಯಧನಕ್ಕೆ ಕಡ್ಡಾಯವಾಗಿ ಬೆಳೆ ಸಮೀಕ್ಷೆಯಲ್ಲಿ ಆರ್.ಟಿ.ಸಿ.ಯಲ್ಲಿ ರೇಷ್ಮೆ ಬೆಳೆ (ಹಿಪ್ಪುನೇರಳೆ) ನಮೂದಾಗಿರಬೇಕು. ಒಂದು ವೇಳೆ ಬೆಳೆ ನಮೂದು ಆಗದೇ ಇದ್ದರೆ ರೇಷ್ಮೆ ಇಲಾಖೆಯಿಂದ ಸಹಾಯ ಧನ ಸೌಲಭ್ಯಗಳು ದೊರೆಯುವುದಿಲ್ಲ ಹಾಗೂ ನೀಡುವುದಿಲ್ಲ.
ರೈತರು ಇಲಾಖಾ ತಾಂತ್ರಿಕ ಸಿಬ್ಬಂದಿಗಳನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆದು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ತಾವು ಬೆಳೆದಿರುವ ಬೆಳೆಗಳನ್ನು ತಪ್ಪದೇ ದಾಖಲಿಸಬೇಕು ಹಾಗೂ ಪಹಣಿಯಲ್ಲಿ ರೇಷ್ಮೆ ಬೆಳೆ (ಹಿಪ್ಪುನೇರಳೆ) ನಮೂದಾಗಿದ್ದರೆ ಮಾತ್ರ ಇಲಾಖೆಯಿಂದ ದೊರೆಯುವ ಸಾಲ ಸೌಲಭ್ಯಗಳು ಸಿಗಲಿದೆ ಎಂದು ರೇಷ್ಮೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ಕೊಪ್ಪಳ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.