2c136fae-be38-4577-97e1-318669006cc9

ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 22- ಕೊಪ್ಪಳ ತಾಲೂಕಿನ ಗಿಣೆಗೇರಾ ಗ್ರಾಮದ ನಿವಾಸಿ ಸಂಜೀವಕುಮಾರ್ ಎಂಬ ವ್ಯಕ್ತಿಯು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾ ಹವಾಲ್ದಾರರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಂಜೀವ ಕುಮಾರ್ ಇತನು 2024ರ ಆಗಸ್ಟ್ 17ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ತನ್ನ ತಂದೆಯೊಂದಿಗೆ ಜಮೀನಿಗೆ ಹೋದಾಗ, ಅಲ್ಲಿಂದ ಮನೆಗೆ ಹೋಗುತ್ತೇನೆ ಎಂದು ಹೇಳಿ ಮನೆಗೂ ಹೋಗದೆ ಯಾರಿಗೂ ಹೇಳದೆ ಹೋಗಿ ಕಾಣೆಯಾಗಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 154/2024 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯ ವಯಸ್ಸು 25 ವರ್ಷ, 5.4 ಎತ್ತರ, ದುಂಡು ಮುಖ, ಕಪ್ಪು ಮುಖ ಬಣ್ಣ, ಕಪ್ಪು ಕೂದಲು, ಕುರುಚಲು ಗಡ್ಡ, ಸದೃಢ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಮೈ ಮೇಲೆ ನೀಲಿ ಬಣ್ಣದ ಟಿ ಶರ್ಟ ಹಾಗೂ ಕಪ್ಪು ಬಣ್ಣದ ಬರ್ಮುಡಾ ಧರಿಸಿಕೊಂಡು ಹೊಗಿರುತ್ತಾನೆ.

ಈ ವ್ಯಕ್ತಿಯ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಅಥವಾ ಪತ್ತೆಯಾದಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ದೂ.ಸಂ: 08539-221333, ಮತ್ತು ಪಿ.ಐ ಮೊ.ಸಂ: 9480803746, ಸಿ.ಪಿ.ಐ ಮೊ.ಸಂ: 9480803731, ಡಿ.ವೈ.ಎಸ್.ಪಿ ದೂ.ಸಂ: 08539-230342, ಮೊ.ಸಂ: 9480803720, ಎಸ್.ಪಿ ದೂ.ಸಂ: 08539-230111, ಕೊಪ್ಪಳ ಕಂಟ್ರೋಲ್ ದೂ.ಸಂ: 08539-230222-100 ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!