ನಿವೇಶನ ಅತಿಕ್ರಮಿಸಿಕೊಂಡಿರುವವರ ಮೇಲೆ ಕ್ರಮ ಕೈಗೊಳ್ಳಿಲು ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 8- ನಗರದ ಗಾಂಧಿನಗರ ವಿದೇಶದಲ್ಲಿರುವ ಟಿಎಸ್ ನಂಬರ್ ೩೩೩/೨, ಖಾತೆ ಸಂಖ್ಯೆ ೧೧೪/೮೩ ಚದರ ಅಡಿ ಅಳತೆಯ ಮನೆ ಮತ್ತು ಕಾಂಪೌAಡನ್ನು ಅದರ ಮೂಲ ಮಾಲೀಕರು ಚಿಕಿತ್ಸೆಗೆಂದು ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಬಳ್ಳಾರಿ ನಗರದ ಶಿವಕುಮಾರ್ ಎಂಬ ಭೂ ಮಾಫಿಯಾ ವ್ಯಕ್ತಿಯೊಬ್ಬರು ಗುಂತಕಲ್ಲಿನ ಭಾಸ್ಕರ್ ಎಂಬುವರ ಕುಮ್ಮಕ್ಕಿನಿಂದ ನಮ್ಮ ಮನೆಯನ್ನು ನೆಲಸಮ ಮಾಡಿ ಅತಿಕ್ರಮಿಸಕೊಂಡಿರುತ್ತಾರೆ ಇವರಿಂದ ನಮ್ಮ ನಿವೇಶನವನ್ನು ಬಿಡಿಸಿಕೊಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಿ ಮನವಿ ಮಾಡಿದ್ದರೂ ಸಹ ನಮಗೆ ಯಾವುದೇ ಉಪಯೋಗವಾಗಿಲ್ಲ ಕಾರಣ ದಯವಿಟ್ಟು ನಮ್ಮ ಆಸ್ತಿಯನ್ನು ಮತ್ತು ಅಪಹರಿಸಿರುವ ನಮ್ಮ ತಂಗಿಯನ್ನು ಹುಡುಕಿಕೊಡಬೇಕೆಂದು ಎಂ ಕೆ ಭಾಸ್ಕರ್ ಮತ್ತು ಎಂ ಕೆ ವೆಂಕಟೇಶ್ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಅವರು ಇಂದು ನಗರದ ಗಾಂಧಿನಗರ ಪ್ರದೇಶದ ಎರಡೇ ಕ್ರಾಸ್ನಲ್ಲಿರುವ ತಮ್ಮ ಮನೆಯ ನಿವೇಶನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ನಮ್ಮ ತಂದೆ ಮತ್ತು ತಾಯಿ ಕಳೆದ ಕೆಲವು ವರ್ಷಗಳಿಂದ ತೀರಿಕೊಂಡು ಹೋಗಿರುತ್ತಾರೆ, ಈ ಮನೆಯಲ್ಲಿ ನಮ್ಮ ತಂಗಿಯಾದ ಎಂ.ಕೆ.ಸರೋಜಾ ಮಾತ್ರ ವಾಸವಾಗಿದ್ದು ಇವರು ಮಕ್ಕಳಿಗೆ ಮನೆ ಪಾಠವನ್ನು ಹೇಳಿಕೊಟ್ಟು ಜೀವನ ನಡೆಸುತ್ತಿದ್ದರು. ಕೆಲ ತಿಂಗಳುಗಳ ಹಿಂದೆ ಎಂ ಕೆ ಸರೋಜಾ ಹತ್ತಿರ ಬಂದ ಶಿವಕುಮಾರ್, ನಮ್ಮ ಮಕ್ಕಳಿಗೆ ಮನೆ ಪಾಠ ಹೇಳಿಕೊಡಿ ಎಂದು ಕೇಳಿಕೊಂಡು ಅವರ ಮಕ್ಕಳನ್ನು ಮನೆ ಪಾಠಕ್ಕೆ ಸರೋಜಾ ಅವರ ಹತ್ತಿರ ಕಳಿಸಿರುತ್ತಾರೆ. ಅಲ್ಲದೆ ಆ ಮನೆಗೆ ಶಿವಕುಮಾರ್ ಎಂಬ ವ್ಯಕ್ತಿಯು ಆಗಾಗ ಬಂದು ಹೋಗುತ್ತಿರುತ್ತಾರೆ. ಎಂ ಕೆ ಸರೋಜಾ ಅವರ ಹತ್ತಿರ ಆತ್ಮೀಯತೆಯನ್ನು ಬೆಳೆಸಿಕೊಂಡು ಅತ್ಯಂತ ಸಲಗೆಯಿಂದ ಇರುತ್ತಾರೆ. ಅವರೊಬ್ಬರೇ ಇರುವ ಸಮಯ ಮತ್ತು ಸಂದರ್ಭವನ್ನು ಬಳಸಿಕೊಂಡು ಅವರಿಗೆ ಸಣ್ಣಪುಟ್ಟ ಸಹಾಯವನ್ನು ಮಾಡುತ್ತಾ ಅವರ ಜೊತೆ ಪ್ರೀತಿ ಮತ್ತು ಬಾಂಧವ್ಯವನ್ನು ಬೆಳೆಸಿಕೊಂಡು ಆಗಾಗ್ಗೆ ಅವರ ಮನೆಗೆ ಬಂದು ಹೋಗುತ್ತಿರುತ್ತಾರೆ.
ಕೆಲ ದಿನಗಳ ನಂತರ ಸದರಿ ನಿವೇಶನದ ಎಲ್ಲಾ ದಾಖಲೆಗಳನ್ನು ಮತ್ತು ನಮ್ಮ ತಂಗಿ ಎಂಕೆ ಸರೋಜಾ ಅವರ ಆಧಾರ್ ಕಾರ್ಡ್ ಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಮತ್ತು ಅತ್ಯಂತ ಮಹತ್ವದ ದಾಖಲೆಯಾದ ವಂಶವೃಕ್ಷವನ್ನು ಸಹ ಕೋಟ್ಟಿಯಾಗಿ ಸೃಷ್ಟಿಸಿಕೊಂಡಿರುತ್ತಾರೆ. ಮತ್ತು ಎಂ ಕೆ ಸರೋಜಾ ತನ್ನ ಹೆಂಡತಿ ಎಂಬAತೆ ದಾಖಲೆಗಳನ್ನು ಸೃಷ್ಟಿಸಿ ಈ ದಾಖಲೆಗಳಿಂದ ಸದರಿ ನಿವೇಶನದ ಆಸ್ತಿಯನ್ನು ಸರೋಜಾ ತಾಯಿ ದಾನ ನೀಡಿರುತ್ತಾರೆ ಎಂಬAತೆ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ನಮ್ಮ ನಿವೇಶನವನ್ನು ಅತಿಕ್ರಮಿಸಿಕೊಂಡು ರಾತ್ರೋರಾತ್ರಿ ಆ ಮನೆಯನ್ನು ನೆಲಸಮಗೊಳಿಸಿ ಬೇರೆಯವರಿಗೆ ಮಾರಾಟ ಮಾಡಿರುತ್ತಾರೆ.
ಈ ವಿಷಯ ನಮಗೆ ತಡವಾಗಿ ತಿಳಿದು ನಾವು ವಿಚಾರಿಸಿದಾಗ ಅದು ನಿಜವಾಗಿದ್ದು ತಕ್ಷಣ ನಾವುಗಳು ಬಳ್ಳಾರಿಗೆ ಬಂದು ನೋಡಲಾಗಿ ನಮ್ಮ ಪುರಾತನ ಮನೆಯನ್ನು ಶಿವಕುಮಾರ್ ಎಂಬ ವ್ಯಕ್ತಿ ನೆಲಸಮ ಮಾಡಿರುವುದು ಗೊತ್ತಾಗುತ್ತದೆ. ಮತ್ತು ನಮ್ಮ ತಂಗಿಯನ್ನು ಸಹ ಅಪರಿಸಿಕೊಂಡು ಹೋಗಿರುತ್ತಾರೆ, ಜೊತೆಗೆ ಮನೆಯಲ್ಲಿದ್ದ ಕೆಜಿಗಟ್ಟಲೆ ಬೆಳ್ಳಿ ಮತ್ತು ಬಂಗಾರವನ್ನು ಕದ್ದುಕೊಂಡು ಹೋಗಿರುತ್ತಾರೆ ನಮ್ಮ ತಾಯಿಯ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸಹ ಲಪಟಾಯಿಸಿರುತ್ತಾನೆ.
ಈ ಘಟನೆ ಕುರಿತು ನಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಸಹ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ದೂರು ನೀಡಿದಾಗ ಅವರ ಸೂಚನೆಯ ಮೇರೆಗೆ ನಾಮಕವಸ್ಥೆ ದೂರು ದಾಖಲಿಸಿಕೊಂಡಿರುತ್ತಾರೆ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಕಾರಣ ನಾವು ಮಾಧ್ಯಮಗಳ ಮುಖಾಂತರ ಮನವಿ ಮಾಡುವುದೇನೆಂದರೆ, ನಾಪತ್ತೆಯಾದ ನಮ್ಮ ತಂಗಿ ಎಂ. ಕೆ ಸರೋಜಾ ಅವರನ್ನು ಹುಡುಕಿಕೊಡಬೇಕು ಮತ್ತು ನಮ್ಮ ಪೂರ್ವಜರ ಆಸ್ತಿಯಾದ ನಿವೇಶನವನ್ನು ಸುಳ್ಳು ದಾಖಲಾತಿಗಳೊಂದಿಗೆ ಅತಿಕ್ರಮಿಸಿಕೊಂಡು ಮಾರಾಟ ಮಾಡಿರುವ ಶಿವಕುಮಾರ್ ವಿರುದ್ಧ ಕ್ರಮ ಕೈಗೊಂಡು ನಮ್ಮ ತಂಗಿಯನ್ನು ಮತ್ತು ನಮ್ಮ ಆಸ್ತಿಯನ್ನು ನಮಗೆ ಮರಳಿ ಕೊಡಿಸಬೇಕೆಂದು ಅವರುಗಳು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ನಿವೇಶನದ ಮೂಲ ವಾರಸುದಾರರಾದ ಎಂ.ಕೆ.ವೆAಕಟೇಶ್, ಎಂ.ಕೆ.ಭಾಸ್ಕರ್ ಹಾಗೂ ವಕೀಲ ರಮಣ, ನಾಗರಾಜ್, ಬೆಲ್ಡೋಣ ಗೋಪಿನಾಥ್, ಹಂಪಿ ರಮಣ ಸೇರಿದಂತೆ ಇತರರಿದ್ದರು.
