
ಪಂಚಾಯತ್ ರಾಜ್ ಪ್ರಕೋಷ್ಠದ ರಾಜ್ಯ ಸಮಿತಿ ಬಿ.ಹನುಮಂತಪ್ಪ ನೇಮಕ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 27- ಪಂಚಾಯತ್ ರಾಜ್ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರನ್ನಾಗಿ ಜಿಲ್ಲೆಯ ದಮ್ಮೂರು ಗ್ರಾಮದ ಬಿ.ಹನುಮಂತಪ್ಪ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ ತಳಸಮುದಾಯದಿಂದ ಬಂದಂತಹ ಬಿ.ಹನುಮಂತಪ್ಪ ಅವರು ಇನ್ನು ಉತ್ಸಾಹಿ ಯುವಕರಾಗಿದ್ದು,ಅವರ ಈವರೆಗಿನ ಪಕ್ಷ ಸಂಘಟನೆ ಮತ್ತು ಸೇವೆಯನ್ನು ಗುರುತಿಸಿ ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ ಇದನ್ನು ಅತ್ಯಂತ ಜವಾಬ್ದಾರಿಯಿಂದ ಯಶಸ್ವಿಯಾಗಿ ಮುನ್ನೆಡೆಸುತ್ತಾರೆ ಎಂಬ ದೃಢ ವಿಶ್ವಾಸ ನಮಗಿದೆ ಎಂದರು.
ಮಾಜಿ ಶಾಸಕ ಕಂಪ್ಲಿ ಸುರೇಶ್ ಬಾಬು ಮಾತನಾಡಿ ನಮ್ಮ ಪಕ್ಷ ಯುವಕರಿಗೆ ಹೆಚ್ಚಿನ ಆದ್ಯತೆ,ಮನ್ನಣೆ ನೀಡುವುದರಲ್ಲಿ ಮುಂದೆ ಎನ್ನುವುದಕ್ಕೆ ಹನುಮಂತಪ್ಪ ಅವರ ನೇಮಕವೇ ಉದಾಹರಣೆ.ಪಕ್ಷದ ಸಂಘಟನೆ, ನಿರ್ವಹಣೆಯಲ್ಲಿ ಹನುಮಂತಪ್ಪ ತೋರಿದ ಸಾಧನೆ ಗುರುತಿಸಿ ಪಕ್ಷದ ನಾಯಕರು ಈ ಜವಾಬ್ದಾರಿಯನ್ನು ನೀಡಿದ್ದಾರೆ.ಈ ಮೂಲಕ ಹನುಮಂತಪ್ಪ ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.ಇದೇ ವೇಳೆ ಹನುಮಂತಪ್ಪ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನೂರಾರು ಅಭಿಮಾನಿಗಳು ಪ್ರೀತಿಯಿಂದ ಶಾಲು, ಫಲ-ಪುಷ್ಪಗಳಿಂದ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಸುರೇಶ ಬಾಬು, ವಿಧಾನಪರಿಷತ್ ಸದಸ್ಯ. ಯಂ, ಸತೀಶ್, ದಮ್ಮೂರ್ ಶೇಖರ್, ರಾಮಲಿಂಗಪ್ಪ, ಐನಾಥರೆಡ್ಡಿ, ಗುತ್ತಿನೂರ್ ವಿರುಪಾಕ್ಷಿ ಗೌಡ, ಎರಿಂಗಳಿ ತಿಮ್ಮರೆಡ್ಡಿ ವೀರೇಶ್, ಉಡೆದ ಸುರೇಶ, ಮದಿರೆ ಕುಮಾರಸ್ವಾಮಿ, ಕುರುಗೋಡು ಕೋಮರೆಪ್ಪ, ವದ್ಧಟಿ ತಿಪ್ಪೇಸ್ವಾಮಿ, ಹಾಗು ಬಳ್ಳಾರಿ ಬಿಜೆಪಿ ಮುಖಂಡರು ಹಾಗೂ ಕುರುಗೋಡು ಭಾಗದ ಎಲ್ಲಾ ಬಿಜೆಪಿ ಮುಖಂಡರು ಸದಸ್ಯರು ಇದ್ದರು.