
ಬಳ್ಳಾರಿ ತಾಲೂಕಿನ 25ಗ್ರಾ.ಪಂ.ಗಳಲ್ಲಿ ಶಿಶು ಪಾಲನಾ ಕೇಂದ್ರಗಳು ಕೂಸಿನ ಮನೆ ಪ್ರಾರಂಭ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 22- ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಯೋಗದೊಂದಿಗೆ ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬದ ೩ ವರ್ಷದೊಳಗಿನ ಮಕ್ಕಳಿಗೆ ಶಿಶಿಪಾಲನಾ ಕೇಂದ್ರಗಳನ್ನು “ಕೂಸಿನ ಮನೆ” ಹೆಸರಿನಲ್ಲಿ ಪ್ರಾರಂಭಿಸಲಾಗಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ ದುಡಿಯುವ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಮತ್ತು ಅವರ ಮಕ್ಕಳಿಗೆ ಸುರಕ್ಷತೆ, ಪೂರಕ ಪೌಷ್ಠಿಕ ಆಹಾರ ಸೌಲಭ್ಯ ಒದಗಿಸಲು ಸಹಕಾರಿಯಾಗುವಂತೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬಳ್ಳಾರಿ ತಾಲೂಕಿನ ೨೫ ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆಗಳನ್ನು ಪ್ರಾರಂಭ ಮಾಡಲಾಗಿದೆ.
ಬೆಂಗಳೂರು ಮೊಬೈಲ್ ಕ್ರಷ್ ಸಂಸ್ಥೆಯವರಾದ ಶ್ರೀ ರಾಜಶೇಖರ ಮತ್ತು ಶಶಿಧರ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡ, ಕೊರ್ಲಗುಂದಿ, ಸಂಗನಕಲ್ಲು, ಅಮರಾಪುರ ಮತ್ತು ಬೈರದೇವನಹಳ್ಳಿ ಗ್ರಾಮ ಪಂಚಾಯತಿಗಳ ಕೂಸಿನ ಮನೆಗಳಿಗೆ ಭೇಟಿ ನೀಡಿ ಕೂಸಿನ ಮನೆಗನ್ನು ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಮಾನ್ಯ ಮಡಗಿನ ಬಸಪ್ಪ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತಿ ಬಳ್ಳಾರಿ, ನಟರಾಜ್ ಜಿಲ್ಲಾ ಐಇಸಿ ಸಂಯೋಜಕರು, ರಮೇಶ ತಾಲೂಕು ಐಇಸಿ ಸಂಯೋಜಕರು, ಶ್ರೀಮತಿ ಮೋಹನ್ ಕುಮಾರಿ ಅಆPಔ (ಗ್ರಾಮಾಂತರ) ಕುಮಾರಿ ಸಂದ್ಯಾರಾಣಿ ಸಹಾಯಕ ನಿರ್ದೇಶಕರು, ಶ್ರೀಮತಿ ನಾಗೂಬಾಯಿ (ಸುಪರವೈಜರ್) ಪಿಡಿಓಗಳು, ಕೇರ್ ಟಕರ್ಸ್ಗಳು ಮತ್ತು ಮಕ್ಕಳು ಹಾಜರಿದ್ದರು.