ಬಳ್ಳಾರಿ : ರಾಜ್ಯ ಜೆಡಿಎಸ್ ನಿಯೋಗ ಜಿಲ್ಲಾಸ್ಪತ್ರೆಗೆ ಭೇಟಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ 04- ನಗರದಲ್ಲಿರು ಜಿಲ್ಲಾಸ್ಪತ್ರೆ ಮತ್ತು ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣದ ಬಗ್ಗೆ ಇಂದು ರಾಜ್ಯ ಜೆಡಿಎಸ್ ನಿಯೋಗ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ವಿಷಯದ ಕುರಿತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸಿ ಬಿ ,ಶಾಸಕರಾದ ಸುರೆಶ್ ಬಾಬು, ನೇಮಿರಾಜ್ ನಾಯ್ಕ, ಕರಿಯಮ್ಮ ಮಾಜಿ ಶಾಸಕ ನಾಡಗೌಡ ಜಿಲ್ಲಾಧ್ಯಕ್ಷರು ಮೀನಳ್ಳಿ ತಾಯಣ್ಣ ಮೊದಲಾದವರು ಬಾಣಂತಿಯರ ಸರಣಿ ಸಾವಿಗೆ ವೈದ್ಯರು ಹಾಗೂ ಸರ್ಕಾರ ಕಾರಣ. ಕಳಪೆ ಔಷಧ ದಿಂದ ಸಾವಾಗಿದೆ ಎನ್ನಲಾಗ್ತಿದೆ. ಕಳಪೆ ಕಂಪನಿಗೆ ಔಷಧಿ ಸರಬರಾಜಿಗೆ ಅವಕಾಶ ಕೊಟ್ಟಿದ್ಯಾಕೆ. ಇ ಷ್ಟೆಲ್ಲ ಸಾವಾದ್ರು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಬಂದಿಲ್ಲ ಎಂದು ಟೀಕಿಸಿ. ಬಡ ಬಾಣಂತಿಯರ ಸಾವಿನ ಬಗ್ಗೆ ಅಧಿವೇಶನ ದಲ್ಲಿ ಹೊರಾಟ ಮಾಡ್ತವೆ. ತಾಯಿ ಕಳೆದು ಕೊಂಡ ಮಕ್ಕಳ ಭವಿಷ್ಯಕ್ಕೆ ಸರ್ಕಾರ ಕನಿಷ್ಠ 25 ಲಕ್ಷ ಕೊಡಬೇಕು.
ಬಾಣಂತಿಯರ ಸಾವು ಪ್ರಕರಣ
ಬಳ್ಳಾರಿ ಮಾತ್ರ ಅಲ್ಲ ಸಿಂಧನೂರು ಸೇರಿದಂತೆ ಹಲವೆಡೆ ಬಾಣಂತಿಯರ ಸಾವಾಗಿದೆ. ಇದೇ ಗ್ಲೋಕಸ್ ನಿಂದ ರಾಜ್ಯದ ವಿವಿಧ ಆಸ್ಪತ್ರೆಯಲ್ಲಿ ಸಾವಾ ಗಿದೆ ಎಂದು ವೈದ್ಯರು ಹೇಳಿದ್ದಾರೆ.ಇಷ್ಟಾದ್ರೂ ಸರ್ಕಾರ ನಿರ್ಲಕ್ಷ್ಯ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಡಾ.ಬಸಾರೆಡ್ಡಿ ಅವರಿಂದ ವೈದ್ಯರಿಂದ ಬಾಣಂತಿಯರ ಸರಣಿ ಸಾವಿನ ಕುರಿತು ವಮಾಹಿತಿ ಪಡೆದರು. ಬಾಣಂತಿಯರ ವಾರ್ಡ್ ವೀಕ್ಷಿಸಿ ಕೆಲ ಬಾಣಂತಿಯ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾಧ್ಯಕ್ಷರು ಕೆ.ಕೊಟ್ರೇಶ್ ಅವರು, ರೈತ ವಿಭಾಗದ ಜಿಲ್ಲಾ ಅಧ್ಯಕ್ಷರು ಲಕ್ಷ್ಮಿ ಕಾಂತರೆಡ್ಡಿ,ಸಂಡೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಕುರೆಕುಪ್ಪ ಸೋಮಪ್ಪಅವರು, ಬಳ್ಳಾರಿ ನಗರ ಅಧ್ಯಕ್ಷರು ಹೋನ್ನೂರುಸ್ವಾಮಿಅವರು, ಬಳ್ಳಾರಿ ಗ್ರಾಮಾಂತರ ಅಧ್ಯಕ್ಷರು ಅಶೋಕ್ ಸಂಗನಕಲ್ಲು ಸಿರುಗುಪ್ಪ ತಾಲ್ಲೂಕು ಘಟಕದ ಅಧ್ಯಕ್ಷರು ಶಿವನಾರಾಯಣಅವರು , ಕಂಪ್ಲಿ ತಾಲ್ಲೂಕು ಘಟಕದ ಅಧ್ಯಕ್ಷರು ಮೇಘರಾಜ್ಅವರು, ಬಳ್ಳಾರಿ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಕಿರಣ್ ಕುಮಾರ್,ನಗರ ಯುವ ಘಟಕ ಅಧ್ಯಕ್ಷರು ಮುತ್ತು, ಬಳ್ಳಾರಿ ಜಿಲ್ಲಾ ಮಹಿಳಾ ವಿಭಾಗ ಅಧ್ಯಕ್ಷರು ಜಮೀಲಾ ಬೇಗಂ,ಭವಾನಿ , ಜಾವೀದ್,ಹಾಜಿಬಾಯ್, ಬಸಪ್ಪ, ಚಾಗನೂರು ನಾಗರಾಜ್,ಹವಂಬಾವಿ ಬಸವ, ಹೊನ್ನೂರು ಅಲಿ, ಪ್ರದೀಪ್, ಶಬಾನಾ,ರೇಷ್ಮಾ,ನೀಲಾ,ರೆಹಮತ್,
ಪದಾಧಿಕಾರಿಗಳು, ಕಾರ್ಯ ಕರ್ತರು ಮತ್ತು ಮತ್ತಿತರರು ಭಾಗವಹಿಸಿದ್ದರು.