WhatsApp Image 2024-08-12 at 7.11.35 PM

ಅನುದಾನಿತ ಶಾಲೆಗಳ ಸಂಘದಿಂದ 15 ರಂದು ಕರಾಳ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 12- ಕಳೆದ ಐದು ವರ್ಷಗಳಿಂದ ಶಿಕ್ಷಣ ಇಲಾಖೆ ದಿನಕ್ಕೊಂದು ಅದೇಶ ಹೊರಡಿಸಿ ಸರ್ಕಾರದ ಶಾಲೆಗಳಲ್ಲಿ ಇಲ್ಲದ ನಿಯಮ ನಿಬಂಧನೆಗಳನ್ನು ಅನುದಾನ ರಹಿತ ಶಾಲೆಗಳ ಮೇಲೆ ಹೇರಿರುವುದು ತುಂಬಾ ಅನ್ಯಾಯ ಇಂತಹ ಕಠಿಣ ನಿಯಮ ನಿಬಂಧನೆಗಳಿಂದ ಖಾಸಗಿ ಅನುದಾನ ರಹಿತ ಶಾಲೆಗಳನ್ನು ನಡೆಸಲು ತುಂಬಾ ಕಷ್ಟವಾಗುತ್ತಿದೆ, ಇನ್ನಿಲ್ಲದ ದಾಖಲೆಗಳನ್ನು ಸಲ್ಲಿಸುವಂತೆ ಕೇಳಿ ಈ ಸಂಸ್ಥೆಗಳನ್ನು ತುಂಬಾ ಸಂಕಷ್ಟಕ್ಕೆ ಇಡು ಮಾಡುತ್ತದೆ ಸಮುದಾಯಕ್ಕೆ ಶಿಕ್ಷಣವನ್ನು ನೀಡಿ ಸಂಸ್ಕಾರವಂತರನ್ನಾಗಿ ಮಾಡುವ ಇಂತಹ ಶಾಲೆಗಳ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವುದು ಬಿಟ್ಟು ಸರಳ ನಿಯಮ ನಿಬಂಧ ಗಳನ್ನು ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಖಾಸಗಿ ಅನುದಾನ ರಹಿತ ಶಾಲೆಗಳ ಅಧ್ಯಕ್ಷರಾದ ಮರಿಸ್ವಾಮಿ ರೆಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಿ, ನ್ಯಾಯಾಲಯದ ತೀರ್ಪುಗಳನ್ನು ಕಡಗಣಿಸಿ ಹೊಸ ಶಿಕ್ಷಣ ಸಂಸ್ಥೆ ರಚಿಸಿದ ನಿಯಮವನ್ನು ಯಥಾವತ್ತಾಗಿ ಹಳೆಯ ಶಿಕ್ಷಣ ಸಂಸ್ಥೆಗಳಿಗೆ ಹೇರುವ ಮುಖಾಂತರ, ಕೇವಲ ಶಿಕ್ಷಣ ಇಲಾಖೆ ಅಲ್ಲದೆ ಇತರೆ ಇಲಾಖೆಗಳಾದ ಅಗ್ನಿಸುರಕ್ಷತಾ ಇಲಾಖೆ, ಪಿ.ಡಬ್ಲ್ಯೂ.ಡಿ ಇಲಾಖೆ, ರೆವಿನ್ಯೂ ಇಲಾಖೆ, ಮಕ್ಕಳ ಹಕ್ಕು ಆಯೋಗ, ಪೊಲೀಸ್‌ ಇಲಾಖೆ ಈ ರೀತಿ ಹಲವು ಇಲಾಖೆಗಳ, ಪ್ರಸ್ತುತ ಸಾಧ್ಯವಾಗದಂತಹ ದಾಖಲೆಗಳನ್ನು ಕೊಡಲೇಬೇಕೆಂಬ ಕಿರುಕುಳ, ದೌರ್ಜನ್ಯ ಹಾಗೂ ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದು ಬಂದಿದೆ, ಇದರಿಂದ ಕಳೆದ ಸರ್ಕಾರ, ಶಿಕ್ಷಣ ಇಲಾಖೆ ವಿರುದ್ಧ ಮಾನ್ಯ ಪ್ರಧಾನ ಮಂತ್ರಿಗಳಿಂದ, ಮುಖ್ಯಮಂತ್ರಿಗಳ ತನಕ ದೂರುಗಳು ಕೊಟ್ಟರೂ ಯಾವುದೇ ಪ್ರಯೋಜನ ಆಗದೆ, ಅನಿವಾರ್ಯವಾಗಿ ನ್ಯಾಯಾಲಯ ಮೊರ ಹೋಗಬೇಕಾಯಿತು, ಕರ್ನಾಟಕ ಉಚ್ಚ ನ್ಯಾಯಾಲಯ ಐದು ಪ್ರಮುಖ – ಪ್ರತ್ಯೇಕ ವಿಷಯಗಳಲ್ಲಿ ಸರ್ಕಾರದ ಸುತ್ತೋಲೆಗಳನ್ನು ರದ್ದುಗೊಳಿಸಿ ಛೀ ಮಾರಿಹಾಕಿ, ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಗಳು, ತಮ್ಮ ಶಾಲೆಗಳಿಗೆ ಯಾಕೆ ಇಲ್ಲ? ಆದೇಶಗಳು ಇದ್ದಲ್ಲಿ ಅದನ್ನ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿ’ ಎಂದು ಅದೇಶ ನೀಡಿತು. ಯಾವುದೇ ಒಂದು ಉದಾಹರಣೆಯು ನೀಡದೆ, 20 ತಿಂಗಳು ಕಳೆದ ನಂತರ, ರದ್ದು ಮಾಡಿರುವಂತಹ ಅದೇಶದ ಮೇಲೆ ಶಿಕ್ಷಣ ಇಲಾಖೆ ಮೇಲ್ಮನವಿ ಹೋಗುವ ಮುಖಾಂತರ ಮತ್ತೊಮ್ಮೆ ಕಳೆದ ಮೂರು ವರ್ಷಗಳಿಂದ ಒಂದೊಂದು ವರ್ಷಕ್ಕೆ ಮಾತ್ರ ಮಾನ್ಯತೆ ನವೀಕರಣ ಹಳೆಯ ಶಿಕ್ಷಣ ಸಂಸ್ಥೆಗಳಿಗೆ, ಸ್ವಾಭಾವಿಕ ಬೆಳವಣಿಗೆಯ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಮುಖಾಂತರ, ಪ್ರತಿವರ್ಷ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಂಡು ಬರುತ್ತಿದ್ದು.

ಪ್ರಸ್ತುತ ವರ್ಷದಲ್ಲಿ ಶಿಕ್ಷಣ ಇಲಾಖೆ ಮೇಲಧಿಕಾರಿಗಳು, ಶಿಕ್ಷಣ ಮಂತ್ರಿಗಳುವಿವಿಧ ಡಿಡಿಪಿಐ – ಬಿಇಒ ವರ್ಗಾವಣೆ ನಡೆಸಿ, ವರ್ಗಾವಣೆಯಲ್ಲಿ 25 ರಿಂದ 30 ಲಕ್ಷ ರೂಗಳ ವಸೂಲಿ ನಡೆದಿದೆ ಎಂದು ಶಿಕ್ಷಣಇಲಾಖೆಯಲ್ಲಿ ಆರೋಪ ಕೇಳಿ ಬರುತ್ತಿದೆ.

ನಮ್ಮ ರಾಜ್ಯದ ರಾಜ್ಯ ಪಠ್ಯಕ್ರಮ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ಅನ್ಯಾಯ ಎಸುಗುತ್ತ, ಕೇವಲ ಅವೈಜ್ಞಾನಿಕ ನಿಯಮಗಳನ್ನು ರಚಿಸುವುದೇ ಶಿಕ್ಷಣ ಇಲಾಖೆಯ ಸಾಧನೆಯಾಗಿದೆ ಇದನ್ನು ಖಂಡಿಸುತ್ತಾ ಸ್ವತಂತ್ರ ಇಲ್ಲದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಇದೆ
ಆಗಸ್ಟ್ 15 ರಂದು ಕರಾಳ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಆ ದಿನದಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು ಕಪ್ಪು ಪಟ್ಟಿ ತೊಟ್ಟು ಕಾರ್ಯನಿರ್ವಹಿಸುವ ಮೂಲಕ ಕರಾಳ ದಿನಾಚರಣೆಯನ್ನು ಆಚರಿಸಲಾಗುವುದು,

ನಮ್ಮ ಸಮಸ್ಯೆಗೆ ಕಿವಿಗೊಡದ ಸರ್ಕಾರದ ವಿವಿಧ ಇಲಾಖೆಗಳ ಮಂತ್ರಿಗಳ ನಡೆಯನ್ನು ಖಂಡಿಸುತ್ತಾ, ಸರ್ಕಾರ ಇದೇ ರೀತಿ ಸಾಗಿದ್ದಲ್ಲಿ ಮುಂದಿನ ದಿನಗಳಲ್ಲಿ, ಪಾಲಕ ಪೋಷಕರಿಗೆ ಕ್ಷಮೆ ಕೇಳಿ ಗುಣಮಟ್ಟ ಶಿಕ್ಷಣ ಕೊಡಲು ಮಾನಸಿಕವಾಗಿ ಶಿಕ್ಷಣ ಸಂಸ್ಥೆಗಳ ನಡೆಸಲು ಬಿಡದ, ಭ್ರಷ್ಟ, ಕನಿಷ್ಠ ಜ್ಞಾನ ರಹಿತ ಅಧಿಕಾರಿಗಳ ವಿರುದ್ಧ, ಶಾಲೆ ಮುಚ್ಚಿ ಹೋರಾಟ ಮಾಡಲು ಮುಂದಾಗ ಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮರಿಸ್ವಾಮಿ ರೆಡ್ಡಿ ಉಪಾಧ್ಯಕ್ಷರಾದ ಎಂ ಶ್ರೀನಿವಾಸ್ ಪದಾಧಿಕಾರಿಗಳಾದ ರಿಯಾಜ್ ರಂಜಾನ್ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *

error: Content is protected !!