
ಹುಟ್ಟು ಹಬ್ಬದ ನಿಮಿತ್ತ ನೋಟ್ ಪುಸ್ತಕಗಳನ್ನು ವಿತರಿಸಿದ ಪಾಲಿಕೆ ಸದಸ್ಯ ಕೆ.ಹನುಮಂತಪ್ಪ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 20- ಮಹಾ ನಗರ ಪಾಲಿಕೆಯ ೨೨ನೇ ವಾರ್ಡಿನ ಸದಸ್ಯ ಕೆ.ಹನುಮಂತಪ್ಪ ತಮ್ಮ ೫೩ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ನಗರದ ವಿವಿಧ ಪ್ರದೇಶಗಳಲ್ಲಿನ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಗಳಾದ ದುರ್ಗಮ್ಮ ಗುಡಿಯ ಹತ್ತಿರ ಗಾಂಧಿನಗರ, ಮದಿಕೇರಿ ಭೀಮಯ್ಯ ಶಾಲೆ, ಕಪ್ಪಗಲ್ ರಸ್ತೆ ಶಾಲೆ ಮತ್ತು ತಾಳೂರು ರಸ್ತೆ ಶಾಲೆಗಳಿಗೆ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕೆ.ಹನುಮಂತಪ್ಪ, ಹುಟ್ಟುಹಬ್ಬದ ದಿನದಂದು ಕೇವಲ ಕೇಕ್ ಕತ್ತರಿಸುವುದು ಪಟಾಕಿ ಸಿಡಿಸುವುದು ಸೇರಿದಂತೆ ಹಣವನ್ನು ದುಂದು ವೆಚ್ಚ ಮಾಡದಂತೆ ಈ ರೀತಿಯಾಗಿ ಶಾಲಾ ವಿದ್ಯಾರ್ಥಿಗಳಿಗೆ ಅಥವಾ ಸಮಾಜಕ್ಕೆ ಅನುಕೂಲಕರವಾಗುವ ಸೇವೆಗಳನ್ನು ಮಾಡಿದಲ್ಲಿ ನಮ್ಮ ಜೀವನ ಸಾರ್ಥಕವಾಗುತ್ತದೆ ಕಾರಣ ನನ್ನ ಹುಟ್ಟು ಹಬ್ಬದ ದಿನದಂದು ಪ್ರತಿ ವರ್ಷವೂ ಸಹ ನನ್ನ ವಾರ್ಡಿನ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನಿಗಳನ್ನು ನೀಡುತ್ತಿದ್ದೇನೆ ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಯಾ ಶಾಲಾ ಮುಖ್ಯ ಉಪಾಧ್ಯಾಯರು, ಶಿಕ್ಷಕರು ವಿದ್ಯಾರ್ಥಿಗಳು ಸೇರಿದಂತೆ ಹನುಮಂತಪ್ಪನವರ ಅಭಿಮಾನಿಗಳು ಇದ್ದರು.