WhatsApp Image 2024-11-21 at 12.27.18 PM

ಕೊಪ್ಪಳ ಜಿಲ್ಲೆಯ ದಿಶಾ ಸದಸ್ಯರಾಗಿ ಡಾ.ನಂದಿತಾ ದಾನರಡ್ಡಿ ನೇಮಕ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 21- ಪಟ್ಟಣದ ೧೫ನೇ ವಾರ್ಡಿನ ಪಟ್ಟಣ ಪಂಚಾಯಿತಿಯ ಸದಸ್ಯರಾದ ಡಾ.ನಂದಿತಾ ದಾನರಡ್ಡಿ ಅವರನ್ನು ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗು ಉಸ್ತುವಾರಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ದೊಡ್ಡ ಬಸನಗೌಡ ಬಯ್ಯಾಪೂರ, ಸರಸ್ವತಿ ಇಟ್ಟಂಗಿ, ಅಂಬಣ್ಣ ನಾಯಕ, ಈ ನಾಲ್ಕು ಜನ ಕೊಪ್ಪಳ ಜಿಲ್ಲೆಯ ದಿಶಾ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಜಿ.ಪಂ. ಸಿಇಓ ರಾಹುಲ್ ರತ್ತಂ ಪಾಂಡೇ ಅವರು ಅಧಿಕೃತ ಜ್ಞಾಪನ ಪತ್ರದ ಮೂಲಕ ಆದೇಶಿಸಿದ್ದಾರೆ.

ಸಂಸದರು ಮತ್ತು ಅಧ್ಯಕ್ಷರು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ ಇವರ ಶಿಪಾರಸ್ಸು ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವ ಮಾಡುತ್ತಿರುವ ಈ ನಾಲ್ಕು ಜನರನ್ನು ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ.

ಡಾ.ನಂದಿತಾ ದಾನರಡ್ಡಿ ನೇಮಕ ಆಗಿದ್ದಕ್ಕೆ ಗ್ರಾಮೀಣ ಮತ್ತು ತಾಲೂಕಿನ ಜಿಲ್ಲಾ ಮುಖಂಡರು ಹಿರಿಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!