3

ಸೋಲು ಗೆಲುವು ಲೆಕ್ಕಿಸದೆ ಕ್ರೀಡೆಯಲ್ಲಿ ಪಾಲ್ಗೊಳ್ಳಿ : ಡಾ.ಸವಿತಾ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 23- ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಕೇವಲ ಮನೋರಂಜನೆಗಾಗಿ ಪಾಲ್ಗೊಳ್ಳಬೇಕೆಂದು, ಗೆಲುವು ಸೋಲುಗಳು ಲೆಕ್ಕಿಸದೆ ಉತ್ಸಾಹದಿಂದ ಆಡಬೇಕು ಎಂದು ಆರ್‌ವೈಎಂಇಸಿ ಉಪ ಪ್ರಾಚಾರ್ಯರು, ಡಾ.ಸವಿತಾ ಸುನೋಳಿ ಹೇಳಿದರು.

ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ಇಂಜಿನಿಯರಿAಗ್ ಕಾಲೇಜ್ ಕ್ರೀಡಾ ಮತ್ತು ಆಟಗಳ ಇಲಾಖೆ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಕಲ್ಬುರ್ಗಿ ವಿಭಾಗದ ಸಹಯೋಗದಲ್ಲಿ ಪುರುಷರ ಕಬಡ್ಡಿ ಪಂದ್ಯಾವಳಿಗಳು ಅತ್ಯಂತ ಉತ್ಸಾಹದಿಂದ ನಡೆದವು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪರಾಚಾರ್ಯರು ಸವಿತಾ ಸೋನುಳಿ ಕ್ರೀಡೆಯಲ್ಲಿ ಸಮಗ್ರ ಮನೋಭಾವ ಕ್ರೀಡಾಕರರು ಹೊಂದಿರುವುದು ಮುಖ್ಯವೆಂದು ಒಂದೇ ಒಂದು ಪಂದ್ಯ ಗೆಲ್ಲಬೇಕೆಂಬುವ ಮನೋಭಾವ ಎರಡು ಗ್ರೂಪ್‌ಗಳಲ್ಲಿ ಇರುವುದರಿಂದ ವಿಜಯಲಕ್ಷ್ಮಿ ಒಂದು ಗ್ರೂಪನ್ನು ವರಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರ್‌ವೈಎಂಎಸಿ ಕಂಪ್ಯೂಟರ್ ಸೈನ್ಸ್ ಆಂಜನೇಯರಿ0ಗ್ ವಿಭಾಗದ ಮುಖ್ಯಸ್ಥ ಡಾ.ಗಿರೀಶ್, ಕಲ್ಬುರ್ಗಿ ವಲಯದ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಕ ನಿರ್ದೇಶಕ ಎಸ್.ವಿಜಯಮಹಾಂತೇಶ್, ಬಿಐಟಿಎಂ ಕಾಲೇಜಿನ ಅಶೋಕ್, ಪಿಡಿಐಟಿ ಹೊಸಪೇಟೆ ಪ್ರಭು, ಬಿಜಿಎಂಐಟಿ ಮುಧೋಳ ಪವನ್, ಬಿಕೆಐಟಿ ಬಾಲ್ಕಿ ಶ್ರೀನಿವಾಸ, ಸಂಘರ್ಷ, ಪಂಪಾಪತಿ ಮತ್ತು ಇತರರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!