WhatsApp Image 2024-08-17 at 4.01.26 PM

ಮಾನವೀಯತೆಯಿಂದ ಸದ್ಧರ್ಮ ಸ್ಥಾಪನೆ : ರಾಜಯೋಗಿನಿ ನಿರ್ಮಲಾ ಅಕ್ಕ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 17- ಪ್ರೀತಿಯಿಂದ ಯಾರ ಮನಸ್ಸನಾದರು ಗೆಲ್ಲಬಹುದು ಹಾಗೇಯೆ ಮಾನವೀಯತೆಯಿಂದ ಸದ್ಧರ್ಮ ಸ್ಥಾಪನೆ ಸಾದ್ಯವೆಂದು ನೆರೆ ರಾಜ್ಯವಾದ ಆದೋನಿಯ ರಾಜಯೋಗಿನಿ ಬ್ರ.ಕು.ನಿರ್ಮಲಾ ಅಕ್ಕನವರು ಹೇಳಿದರು.

ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದವರು ಆಯೋಜಿಸಿದ “ರಕ್ಷಾಬಂಧನ” ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ಸಹೋದರಿಯರು ತಮ್ಮ ರಕ್ಷಣೆಯನ್ನು ಅಷ್ಟೆ ಬಯಸುವದಿಲ್ಲ ಸಹೋದರರಿಗೆ ಏನೇ ಕಷ್ಟಬಂದರೂ ಸದಾ ಕಾಲ ನಾವು ಅವರ ಜೊತೆ ಇರುತ್ತೇವೆ ಎನ್ನುವ ಸಂದೇಶ ಸಾರುವ ಪವಿತ್ರ ಬಂಧನವೇ ರಕ್ಷಾ ಬಂಧನದ ಉದ್ದೇಶವಾಗಿದೆ ಎಂದರು.

ಈ ಹಬ್ಬದಿಂದ ಭಾತ್ರತ್ವ ಶಕ್ತಿ ವ್ರದ್ಧಿಸಿ ಸಹೋದರ —ಸಹೋದರಿಯರ ಪ್ರೀತಿ ವಾತ್ಸಲ್ಯಗಳು ಅಮರವಾಗುತ್ತವೆ ಎಂದರು. ಮನುಷ್ಯ ತಾನು ಸುಧಾರಣೆ ಆದರೆ ದೇಶವೆ ಸುಧಾರಿಸುತ್ತದೆ ಎನ್ನುವದಕ್ಕೆ ಲೋಕದ ಡೊಂಕನು ನೀವೆಕೆ ತಿದ್ದುವಿರಿ ನಿಮ್ಮ ನಿಮ್ಮ ತನುವನ್ನು ಸಂತೈಸಿಕೊಳ್ಳಿ ಎಂದು ಬಸವಣ್ಣನವರು ಹನ್ನೇರಡನೆ ಶತಮಾನದಲ್ಲಿಯೆ ಹೇಳಿದ್ದನ್ನು ಉದಾಹರಿಸಿ ಸುಂದರವಾದ ಕಥೆಯನ್ನು ಅವರು ಹೇಳುತ್ತಾ ಮನೆ ದೊಡ್ಡದಾದರೆ ಸಾಲದು ಮನವು ದೊಡ್ಡದಾಗಿದ್ದಾಗ ಮನೆಗೆ ಬೆಲೆ ಬರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಈ.ವಿ.ವಿ. ಸಂಚಾಲಕಿಯಾದ ಬ್ರ.ಕು. ಉಮಾ ಅಕ್ಕನವರು ಮಾತನಾಡಿ ಜ್ಞಾನದ ಕಣಜ ಹಾಗೂ ಆಧ್ಯಾತ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆಯುವ ದಿವ್ಯ ಚೇತನ ನಿರ್ಮಲಾ ಅಕ್ಕನವರ ಧೀ ಶಕ್ತಿಯನ್ನು ಶಬ್ಧದಿಂದ ವರ್ಣಿಸಲು ಸಾಧ್ಯವಿಲ್ಲವೆಂದರು. ಪ್ರತಿನಿತ್ಯ ಮುರಳಿಯನ್ನು ಆಲಿಸುವ ಮೂಲಕ ತಮ್ಮ ಬಾಳನ್ನು ಪವಿತ್ರಗೊಳಿಸಿಕೊಳ್ಳಿ ಎಂದು ಸಭಿಕರಿಗೆ ಕರೆ ನೀಡಿದರು.

ಸಿದ್ದಯ್ಯ ಕೊಣ್ಣೂರು ˌ ಫಕೀರಪ್ಪ ಗಾಣಗೇರ ˌ ಮುತ್ತಯ್ಯ ಮಲಕಸಮುದ್ರ ˌ ಬಸವರಾಜ ಮುಗಳಿ ˌ ರೇ ಣುಕಪ್ಪ ಅಬ್ಬಿಗೇರಿˌ ಗೋಣಿ ˌ ಬಸನಗೌಡ. ಇನ್ನೀತರರು ಉಪಸ್ಥಿತರಿದ್ದರು.

ಮಕ್ಕಳಿಂದ ಹಲವಾರು ಸಾಂಸ್ಕ್ರತಿ ಕಾರ್ಯಕ್ರಮಗಳು ಜರುಗಿದವು. ಎಲ್ಲರಿಗೂ ನಿರ್ಮಲಾ ಅಕ್ಕನವರು ಸಹೋದರರಿಗೆ ಶ್ರೀರಕ್ಷೆ ನೀಡುವ “ರಕ್ಷಾ ಬಂಧನ” ದ ಅಂಗವಾಗಿ ರಾಖಿ ಕಟ್ಟಿ ಸಿಹಿ ವಿತರಿಸಿದರು.

ನಂತರ ಎಲ್ಲರು ಬ್ರಹ್ಮಭೋಜನ ವನ್ನು ಎಲ್ಲರೂ ಸವಿದರು.

Leave a Reply

Your email address will not be published. Required fields are marked *

error: Content is protected !!