3

ರೈತರು ಡಿಜಿಟಲ್ ಸ್ಕಾö್ಯನ್ ಮಾಡಿ ನರೇಗಾ ಸೌಲಭ್ಯ ಪಡೆಯಿರಿ : ಪುಷ್ಪಲತಾ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 27- ರೈತರು ಡಿಜಿಟಲ್ ಸ್ಕಾö್ಯನ್ ಮಾಡಿ ಸೌಲಭ್ಯ ಪಡೆಯಿರಿ. ಈ ಬಾರಿ ನರೇಗಾಕ್ಕೆ ಡಿಜಿಟಲ್ ತಂತ್ರಜ್ಞಾನ ಅಳವಡಿಸಿದ್ದು ಅದರ ಮೂಲಕ ಆರ್ಜಿ ಸಲ್ಲಿಸಿ ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಡಿಓ ಪುಷ್ಪಲತಾ ಮಾಲಿ ಪಾಟೀಲ್ ಹೇಳಿದರು.

ತಾಲೂಕಿನ ಮುರಡಿ ಗ್ರಾಮ ಪಂಚಾಯತಿಯಲ್ಲಿ ೨೦೨೫-೨೬ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಿಯಾಯೋಜನೆ ಸಿದ್ದಪಡಿಸುವ ಸಲುವಾಗಿ ಐಇಸಿ ಕಾರ್ಯಕ್ರಮದಡಿ ಮನೆ ಮನೆ ಜಾಗೃತಿ ಜಾಥಾ ಹಾಗೂ ರೈತರಿಂದ ಕಾಮಗಾರಿಗಳ ಬೇಡಿಕೆ ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು.

ಸ್ವ-ಸಹಾಯ ಸಂಘದ ಮಹಿಳೆಯರು ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಅದಕ್ಕಾಗಿ ಇಂದೆ ಎಲ್ಲರೂ ಅರ್ಜಿ ಸಲ್ಲಿಸಬೇಕು.ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಮುಂದಿನ ವರ್ಷದ ಕ್ರಿಯಾಯೋಜನೆಯಲ್ಲಿ ತಮ್ಮ ಹೆಸರು ಸೇರಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಪಂಚಾಯತಿ ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ ಮಾತನಾಡಿ, ನರೇಗಾ ಯೋಜನೆಯಡಿ ಡಿಜಿಟಲ್ ಆನ್‌ಲೈನ್ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು. ಕ್ಯೂಆರ್ ಕೋಡ್ ಮೂಲಕ ತಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕಿಖ ಕೋಡ್ ಆಂಟಿಸಲಾಯಿತು.

ಈ ಜಾಥಾ ಕಾರ್ಯಕ್ರಮದಲ್ಲಿ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರಕಾಶ್ ಚೂರಿ, ಗ್ರಾಮ ಪಂಚಾಯತಿ ಅಧ್ಯಕ್ಷ ಯಮನಪ್ಪ ಮಾಳಿ, ಸದಸ್ಯ ಹನಮಗೌಡ ಮಾಲಿಪಾಟೀಲ, ಯಲ್ಲವ್ವ ಲಮಾಣಿ, ಬಸಪ್ಪ ಕೊಳ್ಳುರ, ಪ್ರಕಾಶ ಮಾಲಿಪಾಟೀಲ, ಕಂಪ್ಯೂಟರ್ ಆಪರೇಟರ್ ರಮೇಶ, ಬಿಎಫ್‌ಟಿ ಬಸಟ್ಟೆಪ್ಪ, ಕರವಸೂಲಿಕಾರ ಗಿರಿಯಪ್ಪ, ಗ್ರಾ.ಪಂ ಸಿಬ್ಬಂದಿಗಳು ಸ್ವಲ್ಪ ಸಹಾಯ ಸಂಘದ ಮಹಿಳೆಯರು, ಗ್ರಾಮದ ಹಿರಿಯರು ಸಾರ್ವಜನಿಕರು ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!