ವೇದಾವತಿ ನದಿಗೆ ಎಲ್ಎಲ್ ಸಿ ನೀರು ಹರಿಸುವಂತೆ ರೈತರ ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 6- ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಳ್ಳಿ ಮತ್ತು ಬಲಕುಂದಿ ಗ್ರಾಮದ ಸಾರ್ವಜನಿಕರ ಜೀವನದಿಯಾದ ವೇದಾವತಿ ನದಿ ನೀರಿಲ್ಲದೆ ಬತ್ತಿ ಹೋಗಿದ್ದು ಇದರಿಂದ ಜನ ಮತ್ತು ಜಾನುವಾರುಗಳಿಗೆ ತುಂಬಾ ನೀರಿನ ಅಭಾವ ಉಂಟಾಗಿದೆ. ಕಾರಣ ಈ ಎರಡು ಗ್ರಾಮಗಳ ಸಾರ್ವಜನಿಕರ ಮತ್ತು ರೈತರ ಅನುಕೂಲಕ್ಕಾಗಿ ವೇದಾವತಿ ನದಿಗೆ ಎಲ್ ಎಲ್ ಸಿ ಕಾಲುವೆಯಿಂದ ನೀರನ್ನು ಹರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮೇಲ್ಕಂಡ ಎರಡು ಗ್ರಾಮಗಳ ಮುಖಂಡರು ಮತ್ತು ಸಿರುಗುಪ್ಪ ತಾಲೂಕಿನ ಶಾಸಕರಾದಂತಹ ಬಿ ಎಂ ನಾಗರಾಜ್ ಹಾಗೂ ಕಂಪ್ಲಿಯ ಶಾಸಕರಾದಂತಹ ಗಣೇಶ ಮತ್ತು ರೈತ ಮುಖಂಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವೇದಾವತಿ ನದಿಯಲ್ಲಿ ನೀರಿಲ್ಲದೆ ಹಲವಾರು ಗ್ರಾಮಗಳ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ಸದರಿ ಎರಡು ಗ್ರಾಮಗಳ ರೈತರ ಮತ್ತು ಮುಖಂಡರ ಮನವಿಯನ್ನು ಪುರಸ್ಕರಿಸಿದ ಜಿಲ್ಲಾಧಿಕಾರಿಗಳು, ವೇದಾವತಿ ನದಿಗೆ ಆದಷ್ಟು ಶೀಘ್ರದಲ್ಲಿ ನೀರನ್ನು ಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶರಣಬಸವ.ಎಸ್, ಕೆ ದ್ಯಾವಣ್ಣ, ಜಿ ಮುದುಕಪ್ಪ,ವೆಂಕಟೇಶ, ಶರಣಪ್ಪ ಎಪಿಎಂಸಿ ಮಾಜಿ ಅದ್ಯಕ್ಷರು ಗಂಗಪ್ಪ, ಯಲ್ಲಪ್ಪ, ಗಡದೊರೂ ಪಕ್ಕೀರಪ್ಪ, ಟಿ ರಾಘು, ಈರಣ್ಣ, ಟಿ.ಮೌನೇಶ ಸೇರಿದಂತೆ ಮೇಲ್ಕಂಡ ಎರಡು ಗ್ರಾಮಗಳ ರೈತರು ಮತ್ತು ರೈತ ಮುಖಂಡರುಗಳು ಉಪಸ್ಥಿತರಿದ್ದರು.
