15 ರಿಂದ ಆ.20ರ ವರೆಗೆ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 8- ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಅಲ್ಲದೇ ಸರ್ವತೋಮುಖ ಅಭಿವೃದ್ಧಿಗಾಗಿ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2024” ಎನ್ನುವ ಕಾರ್ಯಕ್ರಮವನ್ನು ಆಗಸ್ಟ್ 15ರಿಂದ ಆ.20ರ ವರೆಗೆ 06 ದಿನಗಳ ಕಾಲ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ವರ್ಷದ ಸಸ್ಯಸಂತೆಯಲ್ಲಿ ರೈತರಿಗೆ ವಿದೇಶಿ ಹಣ್ಣಿನ ಸಸಿಗಳ ಪರಿಚಯ ಮಾಡುವುದರ ಜೊತೆಗೆ ವಿದೇಶಿ ಹಣ್ಣಿನ ಸಸಿಗಳನ್ನು ಸಹ ರೈತರಿಗೆ ಮಾರಾಟ ಮಾಡಲಾಗುವುದು ಹಾಗೂ ರೈತರಿಗೆ ಕಾರ್ಬನ್ ಕ್ರೆಡಿಟ್ ಕುರಿತು ಕಂಪನಿಗಳೊಂದಿಗೆ ನೊಂದಣಿ ಮತ್ತು ಜಿಲ್ಲೆಯ ರೈತರಿಗೆ, ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಸಾರ್ವಜನಿಕರಿಗೆ ಒಂದೇ ಸೂರಿನಡಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಮಾವು, ತೆಂಗು, ಪೇರಲ, ಚಿಕ್ಕು, ಅಂಜೂರ, ಕರಿಬೇವು, ನುಗ್ಗೆ, ದ್ರಾಕ್ಷಿ ತಳಿಗಳಲ್ಲದೇ ಅನೇಕ ವಿಧದ ಕಸಿ/ಸಸಿಗಳು, ಅಲಂಕಾರಿಕ ಸಸ್ಯಗಳು, ಹೂವಿನ, ತರಕಾರಿ, ಔಷದೀಯ, ಸಾಂಬಾರು ಸಸ್ಯಗಳು ಇದಲ್ಲದೇ ಅಪ್ರಧಾನ ಹಣ್ಣಗಳು (ನೇರಳೆ, ಸೀತಾಫಲ, ಬೀಜ ರಹಿತ ಸೀಬೆ, ಡ್ರಾö್ಯಗನ್ ಹಣ್ಣು, ಮೆಕಡೋನಿಯಾ, ಮಿಯಾ ಜಾಕಿ ಮಾವು ಮತ್ತು ಅವಕಾಡೋ, ರಾಮಭೂತಾನ್, ಲಿಚ್ಚಿ, ಫ್ಲಮ್, ಸ್ಟಾರ್ ಫ್ರೂಟ್, ವಿದೇಶಿ ನಿಂಬೆ, ಪೇರಲ) ಮುಂತಾದ ಸಸ್ಯಗಳನ್ನು ಇಲಾಖೆಯ ಯೋಗ್ಯ ದರದಲ್ಲಿ ಪೂರೈಸುವುದು ಹಾಗೂ ಕೆಲವು ಪ್ರಮುಖ ಉದ್ದೇಶಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿದೇಶಿ ಹಣ್ಣುಗಳ ಪರಿಚಯ ಹಾಗೂ ಮಾರಾಟ. ಕಾರ್ಬನ್ ಕ್ರೆಡಿಟ್ ಕುರಿತು ಮಾಹಿತಿ ಹಾಗೂ ಕಾರ್ಬನ್ ಕ್ರೆಡಿಟ್ ಕಂಪನಿಗಳೊಂದಿಗೆ ನೋಂದಣಿ. ಇಲಾಖೆ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ. ಇಲಾಖೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಗುಣ ಮಟ್ಟದ ಸಸಿಗಳು, ಎರೆಹುಳು ಗೊಬ್ಬರ, ಎರೆಜಲ ಹಾಗೂ ಜೈವಿಕ ಗೊಬ್ಬರ, ನೀಮಾಸ್ತç, ಜೀವಾಮೃತ, ಗೋಕೃಪಾಮೃತ ಮಾರಾಟ. ವಿವಿಧ ಬ್ಯಾಂಕ್ ಗಳಿಂದ ರೈತರಿಗೆ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ.
ಸಮಗ್ರ ಖುಷ್ಕಿ ಒಣ ಬೇಸಾಯ, ಅಪ್ರಧಾನ ಹಣ್ಣುಗಳು, ವಿದೇಶಿ ಹಣ್ಣುಗಳು, ಅಲ್ಪಾವಧಿ, ಮಧ್ಯಾಮವಧಿ ಮತ್ತು ದೀರ್ಘಾವಧಿ ತೋಟಗಾರಿಕೆ ಬೆಳೆಗಳು ಹಾಗೂ ಸಮುದಾಯ ತೋಟಗಾರಿಕೆಯಿಂದ ಆಗುವ ಲಾಭಗಳ ಮಾಹಿತಿ.
ನೀರಿನ ಮಿತವಾದ ಬಳಕೆಗೆ ಹನಿ ನೀರಾವರಿ ಮತ್ತು ರಸಾವರಿ ತಾಂತ್ರೀಕತೆ, ಇಸ್ರೇಲ್ ಮಾದರಿ ತಾಂತ್ರಿಕತೆ ಹಾಗೂ ತೋಟಗಾರಿಕೆಯಲ್ಲಿ ನವೀನ ತಾಂತ್ರಿಕತೆಗಳ ಬಗ್ಗೆ ಮಾಹಿತಿ. ತೋಟಗಾರಿಕೆ ಆಧಾರಿತ ಉಪಕಸುಬುಗಳಾದ ಜೇನು ಸಾಕಾಣಿಕೆ, ಅಣಬೆ ಬೇಸಾಯ, ಮೌಲ್ಯವರ್ಧನೆ ಬಗ್ಗೆ ಮಾಹಿತಿ. ತೋಟಗಾರಿಕೆ ಬೆಳೆ ವಿಮಾ ಬಗ್ಗೆ ಜಾಗೃತಿ. ಕೈ ತೋಟ, ತಾರಸಿ ತೋಟ, ವರ್ಟಿಕಲ್ ತೋಟ ಬಹುಮಹಡಿ ಪದ್ದತಿಯಲ್ಲಿ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷತೆ ಮತ್ತು ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಮಾಹಿತಿಯನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಗುವುದು.
ಜಿಲ್ಲೆಯ ಸಮಸ್ತ ರೈತರು ಮತ್ತು ಸಾರ್ವಜನಿಕರು ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ತೋಟಗಾರಿಕೆ ಇಲಾಖೆ, ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾ.ವ.) ಕೊಪ್ಪಳ ಮೋ.ಸ: 9632221224 ಹಾಗೂ ಆಯಾ ತಾಲ್ಲೂಕುಗಳ ತೋಟಗಾರಿಕೆ ಇಲಾಖೆ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
