ಎಲ್ಲಾ ವಿಧದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ಪಾಸ್ ನೀಡಿ : ಗಿರಿ ಯಾದವ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 8- ಎಲ್ಲಾ ರೀತಿಯ ಗ್ರಾಮೀಣ ಪತ್ರಕರ್ತರಿಗೆ ಸರ್ಕಾರದಿಂದ ಬಸ್ ಪಾಸ್ ನೀಡಬೇಕು ಎಂದು ಕಾಣಿಪ ಧೋನಿ ಸಂಘಟನೆ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು, ಆ ಸಂದರ್ಭದಲ್ಲಿ ಒಪ್ಪಿದ್ದ ಅವರು ಫಾಸು ಮಂಜೂರು ಮಾಡಿದ್ದಾರೆ, ಆದರೆ ಅದನ್ನು ಪಡೆಯಲು ವಿಧಿಸಿರುವ ಶರತ್ತುಗಳು ಮಾತ್ರ ಗ್ರಾಮೀಣ ಪತ್ರಕರ್ತರಿಗೆ ಪೂರೈಸಲು ಸಾಧ್ಯವಾಗುವುದಿಲ್ಲ ಅಂತಹ ಷರತ್ತುಗಳಿಂದ ವಿನಾಯಿತಿ ನೀಡಿ ಎಲ್ಲಾ ರೀತಿಯ ಪತ್ರಕರ್ತರಿಗೆ ಗ್ರಾಮೀಣ ಬಸ್ ಪಾಸ್ ನೀಡಬೇಕೆಂದು ಧ್ವನಿ ಸಂಘಟನೆ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಗಿರಿ ಯಾದವ್ ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಕರ್ನಾಟಕ ವರ್ಕಿಂಗ್ ಜರ್ನಲಿಸ್ಟ್ ವಾಯ್ಸ್ (ಕಾ.ನಿ.ಪ.ಧ್ವನಿ) ಸಂಘಟನೆಯಿAದ ಈ ಕರಾಳ ಆದೇಶವನ್ನು ವಿರೋಧಿಸುತ್ತಿದ್ದು. ಪ್ರತಿಯೊಬ್ಬ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬ0ಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡಲು ಉಚಿತ ಬಸ್ ಪಾಸ್ ನೀಡಲು ಸೆಪ್ಟಂಬರ್ ೨೬ ರಂದು ಸರ್ಕಾರ ಹೊರಡಿಸಿರುವ ಕರಾಳ ಆದೇಶವು ಗ್ರಾಮಾಂತರ ಪತ್ರಕರ್ತರಿಗೆ ಮರಣ ಶಾಸನದಂತಿದ್ದು, ಪತ್ರಿಕೆಗಳು ಮಾಧ್ಯಮ ಪಟ್ಟಿಯಲ್ಲಿ ಇರಬೇಕು ಹಾಗೂ ಪತ್ರಕರ್ತರುಗಳಿಗೆ ಖಾಯಂ ನೇಮಕಾತಿ ಆದೇಶ ಪತ್ರ ಹೊಂದಿರಬೇಕು ಎಂಬ ಈ ಆದೇಶದಿಂದಾಗಿ ರಾಜ್ಯದಲ್ಲಿರುವ ಯಾವೊಬ್ಬ ಗ್ರಾಮಾಂತರ ಪತ್ರಕರ್ತರಿಗೂ ಈ ಯೋಜನೆ ಪ್ರಯೋಜನಕ್ಕೆ ಬಾರದಂತಾಗಿದೆ. ಕಾರಣ ಈ ಶರತ್ತುಗಳನ್ನು ಸರಳಿಕರಿಸಿ ಎಲ್ಲಾ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ಸಿಗುವಂತೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದ್ದಾರೆ.
ದಿನಾಂಕ ೨೧/೦೩/೨೦೨೪ ರಲ್ಲಿದ್ದಂತ ಮಾಧ್ಯಮ ಪಟ್ಟಿಯಲ್ಲಿರುವ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸಂಖ್ಯೆಯನ್ನಾಧರಿಸಿ ರಾಜಾಧ್ಯಂತ ಒಟ್ಟು ೫೨೨೨ ಪತ್ರಕರ್ತರಿಗೆ ಮಾತ್ರ ಈ ಯೋಜನೆಯ ಪ್ರಯೋಜನೆ ಎಂದು ಸರ್ಕಾರ ತಿಳಿಸಿರುವಂತೆ , ಮಾಧ್ಯಮ ಪಟ್ಟಿಯಲ್ಲಿರದ ಪತ್ರಿಕೆಗಳ ಸಂಪಾದಕರು ಹಾಗೂ ವರದಿಗಾರರಿಗೆ ಈ ಆದೇಶದಿಂದಾಗಿ ಅನ್ಯಾಯವಾಗಿದೆ. ಮಾಧ್ಯಮ ಪಟ್ಟಿಯಲ್ಲಿರದ ಪತ್ರಿಕೆಗಳ ಸಂಪಾದಕರು ಹಾಗೂ ವರದಿಗಾರರು ಸರ್ಕಾರದ ಲೆಕ್ಕದಲ್ಲಿ ಪತ್ರಕರ್ತರೇ ಅಲ್ಲವೇ, ಜೊತೆಗೆ ನಿಯಮಕಾಲಿಕೆಗಳಿಗೆ ಈ ಸೌಲಭ್ಯ ನೀಡಲು ಅವಕಾಶವಿಲ್ಲವೆಂದಿರುವುದು ದುರಾದೃಷ್ಠಕರ.
ಈ ಹಿಂದೆ ಮಾಧ್ಯಮ ಪಟ್ಟಿಯಲ್ಲಿರದ ಲಂಕೇಶ್ ಹಾಗೂ ಹಾಯ್ ಬೆಂಗಳೂರು ಪತ್ರಿಕೆಗಳ ವರದಿಗಾರರು ಪತ್ರಕರ್ತರಲ್ಲವೇ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳ ಮಾಲಿಕರು, ತಾಲೂಕು ಹಾಗೂ ಹೋಬಳಿ ಮಟ್ಟದ ಗ್ರಾಮಾಂತರ ಪತ್ರಕರ್ತರಿಗೆ ಪೂರ್ಣಾವಧಿಯ ನೇಮಕಾತಿ ಅದೇಶ ಪತ್ರ ನೀಡಲು ಸಾಧ್ಯವೇ? ತಮಗೆಲ್ಲಿ ಕಾರ್ಮಿಕ ಕಾನೂನುಗಳು ಅನುಷ್ಠಾನಕ್ಕೆ ಬರುತ್ತವೇ ಎಂಬ ಭಯದಲ್ಲಿ ರಾಜ್ಯದ ಯಾವೊಬ್ಬ ಪತ್ರಿಕೆಯ ಮಾಲಿಕರು ಖಾಯಂ ನೇಮಕಾತಿ ಆದೇಶ ನೀಡಲು ಸಾಧ್ಯವಿಲ್ಲದ ಈ ಪರಿಸ್ಥಿತಿಯಲ್ಲಿ ಇಂಥಾ ಅವೈಜ್ಞಾನಿಕ ಆದೇಶ ಹೊರಡಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಲೋಚಿಸುವಂತಾಗಿದೆ.
ಪ್ರತಿಯೊಬ್ಬ ಪತ್ರಕರ್ತ ಹಾಗೂ ಸಂಪಾದಕರಿಗೆ ಆರ್.ಎನ್.ಐ. ಪ್ರಮುಖವಾಗಿದ್ದು ಇದರ ಜೊತೆಗೆ ಪ್ರಕಟವಾಗುವ ಪತ್ರಿಕೆಗಳ ಸಂಚಿಕೆಯನ್ನು ಪರಿಗಣಿಸಿದರೆ ಸಾಕಾಗಿತ್ತು ಸರ್ಕಾರ. ಸರ್ಕಾರದಿಂದ ಜಾಹೀರಾತು ಪಡೆಯುವ ಉದ್ದೇಶಕ್ಕಾಗಿಯೇ ಮಾಧ್ಯಮ ಪಟ್ಟಿ ರೂಪಿತವಾಗಿದೆ. ನಮಗೆ ಜಾಹಿರಾತು ಬೇಡವೆಂದಲ್ಲಿ ಮಾಧ್ಯಮ ಪಟ್ಟಿ ಅವಶ್ಯಕತೆ ಇಲ್ಲ ಎಂದಿರುವಾಗ ಸರ್ಕಾರದ ಈ ಕರಾಳ ಆದೇಶ ಎಷ್ಟರ ಮಟ್ಟಿಗೆ ಸರಿ ಜೊತೆಗೆ ನಾಡಿನ ಎರೆಡುವರೆ ಕೋಟಿ ಮಹಿಳೆಯರಿಗೆ ೧೮೦೦ ಕೋಟಿ ರೂಗಳು ಮೀಸಲಿರಿಸಿ ಶಕ್ತಿ ಯೋಜನೆಯಡಿ ರಾಜ್ಯಾಧ್ಯಂತ ಓಡಾಡಲು ಉಚಿತ ಬಸ್ ಪಾ ಸ್ ಅದು ಕೇವಲ ಆಧಾರ್ ಕಾರ್ಡ್ ಮಾನದಂಡ ತೋರಿಸಿದರೆ ಸಾಕು ಯೋಜನೆ ಒದಗಿಸಿರುವ ತಾವುಗಳು ಕೇವಲ ೧೨,೦೦೦ ಪತ್ರಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಓಡಾಡಲು ಈ ರೀತಿಯ ಕಠಿಣ ಮಾನದಂಡ ವಿಧಿಸಿರುವುದು ಎಷ್ಟು ಸಮಂಜಸ.?
ಈ ಕೂಡಲೇ ಸರ್ಕಾರ, ಆದೇಶದಲ್ಲಿರುವ ಮಾಧ್ಯಮ ಪಟ್ಟಿಯಲ್ಲಿರಬೇಕೆಂಬ ನಿಯಮವನ್ನು ತೆಗೆದುಹಾಕಿ ಜೊತೆಗೆ ಖಾಯಂ ನೇಮಕಾತಿ ಆದೇಶ ಪತ್ರದ ಬದಲಾಗಿ ನೇಮಕಾತಿ ಪತ್ರದ ಆದೇಶ ಇದ್ದರೇ ಸಾಕು ಎಂಬ ನಿಯಮವನ್ನು ಒಳಪಡಿಸಿ ಮರು ಆದೇಶ ಹೊರಡಿಸಿ ನಾಡಿನ ಪತ್ರಕರ್ತರಿಗೆ ಮಾಧ್ಯಮ ರಾವಣರಾಗದೇ ಮಾಧ್ಯಮ ರಾಮಯ್ಯ ರಾಗಬೇಕೆಂದು ನೋವಿನ ವಿನಂತಿ. ಇದರೊಂದಿಗೆ ದಿನಾಂಕ ೨೬ ರಂದು ಹೊರಡಿಸಿರುವ ಸರ್ಕಾರದ ಆದೇಶದ ಖಂಡಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾಧ್ಯಕ್ಷ ಗಿರಿ ಯಾದವ್ ಇವರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಹಗರಿ ಪ್ರಭಾಕರ್, ಬೊವೆರ್ ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮತ್ತು ಮಲ್ಲಪ್ಪ ಕಂಪ್ಲಿಕಟ್ಟೆ, ಮಾರೆಪ್ಪ, ದುರ್ಗೇಶ್, ವಿರುಪಾಕ್ಷಯ್ಯ ಸ್ವಾಮಿ, ಎಚ್.ಎಂ.ಎರಿಸ್ವಾಮಿ, ಚಂದ್ರ, ಮಲ್ಲಿಕಾರ್ಜುನ ಸೇರಿದಂತೆ ಇತರರು ಭಾಗವಹಿಸಿದ್ದರು.
