18Ylb02

ವರುಣನ ಅವಕೃಪೆ ಮಸಾರಿ ಭಾಗದಲ್ಲಿ ಉತ್ತಮ ಮಳೆ
ಜಲಾವೃತಗೊಂಡ ತಾಳಕೇರಿ ಶಾಲೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 19- ತಾಲೂಕಿನ ಪೂರ್ವ ಭಾಗದ ಮಸಾರಿ ಎಂದು ಹೆಸರದಾದ ಕೆಂಪು ಮಿಶ್ರಿತ ಭೂಮಿಗೆ ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತಾಪಿ ವರ್ಗದಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತಗೊಂಡಿದೆ.

ಮಸಾರಿ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಎಳ್ಳು, ಸಜ್ಜೆ, ಹತ್ತಿ, ಸೂರ್ಯಕಾಂತಿ ಸೇರಿದಂತೆ ಇನ್ನಿತರ ಬೆಳೆಗಳು ಸಕಾಲಕ್ಕೆ ಸರಿಯಾಗಿ ಸುರಿಯದ ಹಿನ್ನೆಲೆ ಮಳೆಗಾಗಿ ಅನ್ನದಾತರು ಮೊರೆ ಹೋಗಿದ್ದು, ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆ ಸಂಪೂರ್ಣವಾಗಿ ಹಳ್ಳಗಳು, ರಸ್ತೆ, ಕೃಷಿಹೊಂಡ, ತಗ್ಗು ದಿನ್ನೆಗಳಿಂದ ವಾಹನಗಳ ಸಂಚಾರಕ್ಕೆ ಅಸ್ತವ್ಯಸ್ತ ಎದುರಾಗಿದೆ.

ತಾಲೂಕಿನ ತಾಳಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪೂರ್ಣವಾಗಿ ಮಳೆ ನೀರು ಸಂಗ್ರಹಗೊಂಡು ಮಕ್ಕಳ ಕಲಿಕೆಗೆ ತೀವ್ರ ತೊಂದರೆ ಎದುರಾಗಿದೆ. ಅಲ್ಲದೇ ಚಿಕ್ಕಮನ್ನಾಪೂರದಿಂದ ಬೋದೂರಿಗೆ ಸಂಪರ್ಕಿಸುವ ರಸ್ತೆ ಬ್ರೀಜ್ ನಿರಂತರ ಹರಿಯುತ್ತಿದ್ದು,ಪಾದಚಾರಿ, ವಾಹನ ಸವಾರರಿಗೆ ಸಂಚಾರಕ್ಕೆ ಅಡಚಣೆ ಕಾಣಿಸಿದೆ. ಅಲ್ಲದೇ ಚಿಕ್ಕ ಮನ್ನಾಪೂರದಿಂದ ಗುಂಟಮಾಡು ಸಂಪರ್ಕಿಸುವ ಹಳ್ಳ, ಗಾಣದಾಳದಿಂದ ಗುಡ್ಡದ ಹನಮಸಾಗರ ಕ್ಯಾಂಪ್ ಗೆ ತೆರಳುವ ರಸ್ತೆಯ ಉದ್ದಕ್ಕೂ ನೀರು ನಿರಂತರ ಹರಿಯುತ್ತಿದೆ.

ತಾಲೂಕಿನ ಬಹುದಿನದಿಂದ ಕೆರೆ ಅಂಗಳಲ್ಲಿ ನೀರು ಕಾಣದ ರೈತಾಪಿ ವರ್ಗ, ಜನ ಜಾನುವಾರಗಳ ಪರಿಸ್ಥಿತಿ ದುಸ್ತರಗೊಂಡಿತ್ತು. ಹಿನ್ನೆಲೆಯಲ್ಲಿ ಚಿಕ್ಕ ಮನ್ನಾಪೂರ, ಗಾಣದಾಳ,ಮುರಡಿ, ತರಲಕಟ್ಟಿ, ನಿಲೋಗಲ್, ಕಲಬಾವಿ-ಚಿಕ್ಕ ವಂಕಲಕುಂಟಾದ ಕೆರೆ ಅಂಗಳದಲ್ಲಿ ನೀರು ಸಂಗ್ರಹಿಸಿರುವುದರಿಂದ ರೈತರ ಮೊಗದಲ್ಲಿ ಸಂತೋಷ ಮನೆಮಾಡಿದೆ.

Leave a Reply

Your email address will not be published. Required fields are marked *

error: Content is protected !!