ಗುತ್ತೂರು : ಮಾನಸಿಕ ರೋಗಿಗಳಿಗೆ ತಪಾಸಣಾ ಶಿಬಿರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮ ವತಿಯಿಂದ ದೂವಾ-ದವಾ ಪರಿಕಲ್ಪನೆ ಅಂಗವಾಗಿ ಮಾನಸಿಕ ರೋಗಿಗಳಿಗೆ ತಪಾಸಣಾ ಶಿಬಿರ ಕಾರ್ಯಕ್ರಮವು ಇತ್ತೀಚೆಗೆ ಯಲಬುರ್ಗಾ ತಾಲ್ಲೂಕಿನ ಗುತ್ತೂರು ಗ್ರಾಮದಲ್ಲಿ ನಡೆಯಿತು.
ಶಿಬಿರದಲ್ಲಿ ೪೦ ಜನ ಮಾನಸಿಕ ರೋಗಿಗಳನ್ನು ಪರೀಕ್ಷಿಸಲಾಗಿದ್ದು, ೩೭ ಜನರಿಗೆ ಚಿಕಿತ್ಸೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದ್ಯಸರು ವೆಂಕಣ್ಣ, ಮನೋವೈದ್ಯರಾದ ಡಾ.ಲಕ್ಷಿö್ಮÃದೇವಿ ಎಂ ಪಾಟೀಲ್, ಥೇರೆಸಾ ಮನಃಶಾಸ್ತçಜ್ಞರಾದ ಪುಷ್ಪಾ, ಮಂಜುನಾಥ, ಶ್ರೀದೇವಿ ಹೆಚ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
