ಲೋಕಾಯುಕ್ತರಿಂದ ದಾಳಿ ತೋಟಗಾರಿಕೆ ಅಧಿಕಾರಿ ವಶ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 12- ನಗರದ ತೋಟಗಾರಿಕೆ ಇಲಾಖೆ ಮೇಲೆ ಕೊಪ್ಪಳ ಲೋಕಾಯುಕ್ತ ತಂಡ ದಾಳಿ ನಡೆಸಿ ತೋಟಗಾರಿಕೆ ಇಲಾಖೆ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತೋಟಗಾರಿಕೆ ಇಲಾಖೆಯ ಸಲಕರಣೆಗಳ ಪಡೆದುಕೊಂಡು ಬಿಲ್ ಪಾವತಿಸುವಾಗ ಹಣಕ್ಕಾಗಿ ಒತ್ತಾಯಿಸಿದ್ದಾಕಗಿ ದಾಳಿ ನಡೆದಿದೆ.
ಕಾರಟಗಿ ತಾಲೂಕ ತಿಮ್ಮಾಪೂರ ಗ್ರಾಮದ ಪಂಚಾಕ್ಷರಿ ವಿರನಗೌಡ ಎಂಬುವರು ಲೋಕಾಯುಕ್ತಕ್ಕೆ ನೀಡಿದ ದೂರಿನ ಅನ್ವಯ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ ಹೆಚ್ ಎಂಬುವರು ೧ಲಕ್ಷ (ಒಂದು) ಹಣ ಲಂಚ ನೀಡಿದರೆ ಬಿಲ್ ಕೊಡುತ್ತನೆ ಎಂದು ಒತ್ತಾಯಿಸಿದ್ದರಿಂದ ಕೊಪ್ಪಳ ಲೋಕಾಯುಕ್ತ ಇನ್ಸಪೇಕ್ಟರ ವಿಜಯಕುಮಾರ ರಾಯಚೂರು ಕೊಪ್ಪಳ ಲೋಕಾಯುಕ್ತ ಎಸ್ಪಿ ಶಶಿಧರ ಮಾರ್ಗದರ್ಶನದಡಿ ಕೆಸ್ ಸಂಖ್ಯೆ ೦೬/೨೪ ಭ್ರಷ್ಠಾಚಾರ ತಡೆ (ಪಿಸಿ) ಕಾಯಿದೆಯ ಸೆಕ್ಷನ್ ೭(ಎ) ಅಡಿಯಲ್ಲಿ ಮಹೇಶರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೋಂಡಿದ್ದಾರೆ.
ಕೊಪ್ಪಳ ಲೊಕಾಯುಕ್ತ ಸಿಬ್ಬಂದಿಗಳು ಉಪಸ್ಥಿತರಿದ್ದರು.
