3

ತುಂಗಭದ್ರಾ ಎಡದಂಡೆ-ರಸ್ತೆ-ಕಾಲುವೆ ಒಡೆಯುವ ಭೀತಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 15- ನಗರಕ್ಕೆ ಹತ್ತಿರವಿರುವ ಸಿದ್ದಿಕೇರಿ ಭಾಗದ ಕರಿಕಲ್ಲಪ್ಪ ಕ್ಯಾಂಪನ ಏರಿಯಾದಲ್ಲಿ ಅಕ್ರಮವಾಗಿ (ಪೀಲ್ಟರ್) ಮರಳುಗಾರಿಕೆಯನ್ನು ನಡೆಯುತ್ತಿದೆ. ಟಿಪ್ಪರಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ.

ಎಡದಂಡೆ ಕಾಲುವೆ ರಸೆ ಹಾಳಾಗಿ ಹೋಗಿದ್ದು ಕಾಲುವೆ ಒಡೆಯುವ ಭಿತಿಯಲ್ಲಿಜನರು ಇದ್ದಾರೆ.ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ರೈತರಾದ ಯಮನಪ್ಪ ವಿಠಲಾಪೂರ.ಶರಣೆಗೌಡ,ನಿಲಪ್ಪ ಸಣಕ್ಕಿ ಜಂಟಿಯಾಗಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಅಕ್ರಮವಾಗಿ ತೆಗೆಯುತ್ತಿರುವ ಮರಳನ್ನು ರಾತ್ರಿ ವೇಳೆಯಲ್ಲಿ ಎಡದಂಡೆ ಕಾಲುವೆಯ ಮೇಲ್ಭಾಗದಿಂದ ಸಾಗಾಟ ಮಾಡಲಾಗುತ್ತಿದೆ. ಕರಿಕಲ್ಲಪ್ಪ ಕ್ಯಾಂಪ ಕೆಲವರು ಯಾವುದೇ ರೀತಿಯ ಪರವಾನಿಗೆಯನ್ನು ಪಡೆದುಕೊಳ್ಳದೆ ಅಕ್ರಮವಾಗಿ ಫೀಲ್ಟರ್ ಮರಳುಗಾರಿಕೆಯನ್ನು ನಡೆಸುತ್ತಿದ್ದಾರೆ.

ಅಕ್ರಮವಾಗಿ ಮರಳುಗಾರಿಕೆಯಿಂದ ಸ್ಥಳೀಯ ರೈತರಿಗೆ, ಕಾಲುವೆಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಜನಪ್ರತಿನಿಧಿಗಳ ಕುಮ್ಮಕಿನಿಂದ ಅಧಿಕಾರಿಗಳು ಮೌನವಹಿಸಿದ್ದಾರೆ. ಅಷ್ಟೆ ಅಲ್ಲದೆ ರೈತರ ಜಮೀನುಗಳಿಗೆ ತಿರುಗಾಡಲು ಬಿಟ್ಟಿರುವ ರಸ್ತೆಗಳನ್ನು ಕೂಡ ಟಿಪ್ಪರ ಓಡಾಟದಿಂದ ರಸ್ತೆಗಳು ಹಾಳಾಗಿ ಹೋಗಿವೆ. ಬಾರಿ ಪ್ರಮಾಣ ಟಿಪ್ಪರ ಲಾರಿಗಳು ಕಾಲುವೆ ಮೇಲ್ಭಾಗದಲ್ಲಿ ಓಡಾಡುತ್ತಿರುವ ಕಾರಣದಿಂದ ಕಾಲುವೆಯು ಬಿರುಕು ಬರುವ ಹಂತಕ್ಕೆ ಬಂದಿದೆ. ಈಗಾಗಲೇ ರೈತರು ನೀರಾವರಿ ಇಲಾಖೆ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಯವರಿಗೆ ಮೌಖಿಕವಾಗಿ ಮಾಹಿತಿಯನ್ನು ನೀಡಲಾಗಿದೆ.

ಯಾವುದೇ ಕ್ರಮಕ್ಕೆ ಮುಂದಾಗದೆ ಸಂಪೂರ್ಣ ನಿರ್ಲಕ್ಷö್ಯವನ್ನು ತೊರಿಸುತ್ತಿದ್ದಾರೆ. ಟಿಪ್ಪರ ಓಡಾಟದಿಂದ ಎಡದಂಡೆ ಕಾಲುವೆಗೆ ಹೊಡೆದು ಸುಮಾರು ಕ್ಯಾಂಪಗಳು ಮುಳುಗುತ್ತವೆ. ಗಂಗಾವತಿ ನಗರಕ್ಕೂ ಕಾಲುವೆ ಒಡೆದು ನೀರು ನುಗ್ಗುವ ಲಕ್ಷಣಗಳು ಗೋಚರಿಸುತ್ತಿವೆ.

ಜನಪ್ರತಿನಿಧಿಗಳ ಮುಂದೆ ಧರಣಿ- ಜಿಲ್ಲಾ ಉಸ್ತುವಾರಿಸಚಿವ ಶಿವರಾಜ ತಂಗಡಗಿ ಗಂಗಾವತಿ ಶಾಸಕ ಜನಾರ್ಧನರೆಡ್ಡಿಯವರ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಮನೆ ಮುಂದೆ ಧರಣಿ ಹಮ್ಮಿಕೊಳ್ಳುವ ಅನಿವಾರ್ಯತೆ ಉಂಟಾಗಬಹುದು.

ತಕ್ಷಣವೇ ಸಚಿವರು ಶಾಸಕರು, ಸಂಸದರು ಜಾಗೃತಿರಾಗಿ ಅಧಿಕಾರಿಗಳ ವರ್ಗ ಕರೆಯಿಸಿ ಅಕ್ರಮ ಮರಳು ಹೋಡೆಯುವದನ್ನು ಬಂದ ಗೋಳಿಸಬೇಕು ಎಂದರು.

ಈ ಸಂದರ್ಭದಲ್ಲಿ ರೈತರಗಳಾದ ಎಸ್.ರಾಮಕೃಷ್ಣ, ಕೃಷ್ಣಪ್ಪ, ಶರಬೋಜಿರಾವ್, ಗೀರೀಶ್ ಗಾಯಕವಾಡ್, ಆಂಜನೇಯ, ರಮೇಶ, ಕರಿಯಪ್ಪ, ನಾನಿ ಮುಂತಾದವರು ಉಪಸ್ಥೀತರಿದ್ದರು.

Leave a Reply

Your email address will not be published. Required fields are marked *

error: Content is protected !!