11

ನಿಂಗೋಜಿ ಬಿಇಡಿ ಕಾಲೇಜಿನಿಂದ ವಿಶಿಷ್ಟ ರೀತಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,17- ಕಲ್ಯಾಣ (ಹೈದ್ರಾಬಾದ) ಕರ್ನಾಟಕದ ೭೭ನೇ ಉತ್ಸವವನ್ನು ಪಟ್ಟಣದ ಎಸ್.ಎ.ನಿಂಗೋಜಿ ಬಿಇಡಿ ಕಾಲೇಜಿನಿಂದ ಕರಮುಡಿಯಲ್ಲಿ ವಿಶಿಷ್ಟರೀತಿಯಲ್ಲಿ ಆಚರಿಸಿದರು.

ತಾಲೂಕಿನ ಕರಮುಡಿ ಹಾಗೂ ಹಾಲಕೇರಿ ಗ್ರಾಮದ ಮಧ್ಯದಲ್ಲಿ ೨-೦೩-೧೯೪೮ ರಂದು ರಜಾಕಾರರ ವಿರುದ್ಧ ದಂಗೆ ಏಳುವ ಮೂಲಕ ಲಡಾಯಿ(ಯುದ್ಧ) ಪ್ರಾರಂಭವಾಗುತ್ತದೆ. ಆ ಸಂದರ್ಭದಲ್ಲಿ ಕಾನ್ಸಟೇಬಲ್ಲರಾದ ರಾಮಪ್ಪ ಪವಾರ ಹಾಗೂ ವೀರನಗೌಡ ಅಯ್ಯನಗೌಡರು ಹುತಾತ್ಮರಾಗುತ್ತಾರೆ. ಅವರ ಸ್ಮರಾಣರ್ಥ ಹಾಲಕೇರಿ ಗ್ರಾಮದವರು ಲಡಾಯಿ ಕಟ್ಟೆಯನ್ನು ಈಗಿನ ಹಾಲಕೇರಿಯ ಗ್ರಾ.ಪಂ. ಅಧ್ಯಕ್ಷ ಗಿರೀಶಗೌಡ ಪಾಟೀಲರವರ ಚಿಕ್ಕಪ್ಪನವರ ಹೋಲದಲ್ಲಿ ಕಟ್ಟಿಸಿದ್ದು ಐತಿಹಾಸಿಕವಾಗಿದೆ.

ಅದೇ ಸ್ಥಳಕ್ಕೆ ಎಲ್ಲಾ ಪ್ರಶಿಕ್ಷಣಾರ್ಥಿಗಳು ಹೋಗಿ ಆಚರಿಸಿದ್ದು ವಿಶೇಷವಾಗಿತ್ತು. ನಿ. ಶಿಕ್ಷಕರು ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷರಾದ ವೀರಣ್ಣ ವಾಲಿ ವಿಶೇಷ ಉಪನ್ಯಾಸ ನೀಡುತ್ತಾ ಹೈ.ಕ.ವಿಮೋಚನೆ ಆಗುವಲ್ಲಿ ಕರಮುಡಿ ಗ್ರಾಮದ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ‍್ಯ ಹೋರಾಟಗಾರರಾದ ಶಂಕ್ರಪ್ಪ ನಿಂಗೋಜಿ, ವೀರಪ್ಪ ಮಾನಶೆಟ್ಟಿ ಅವರು ನಿಸ್ವಾರ್ಥದಿಂದ ಹೋರಾಟ ಮಾಡಿ ೧೮ತಿಂಗಳು ಸೆರೆಮನೆವಾಸ ಅನುಭವಿಸಬೇಕಾಯಿತು. ಅವರೋಡನೆ ಗ್ರಾಮದ ಅನೇಕ ಜನರ ದೇಶಪ್ರೇಮ ಈಗಿನ ಪೀಳಿಗೆಗೆ ಅನುಕರಣಿಯವಾಗಿದೆ. ನಿಂಗೋಜಿರವರ ಮನೆತನ ಈಗಿನ ದಿನಮಾನದಲ್ಲಿ ಶಾಲಾ ಕಾಲೇಜಗಳನ್ನು ಸ್ಥಾಪಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಎಂದರು.

ಉಪನ್ಯಾಸಕ ಹಾಗೂ ವಾಗ್ಮಿಗಳಾದ ಬಸವರಾಜ ಕೊಂಡಗುರಿ ಮಾತನಾಡಿ, ೧೯೪೭ ಅ.೧೫ ರಂದು ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕರೂ ಹೈ.ಕ. ಭಾಗವನ್ನು ಆಳುತ್ತಿದ್ದ ನಿಜಾಮರು ನಂತದ ೧೩ ತಿಂಗಳವರೆಗೂ ನಮಗೆ ಸ್ವಾತಂತ್ರ‍್ಯ ನೀಡದೆ ದೌರ್ಜನ್ಯ ಎಸಗಿದರು.

ಅಳವಂಡಿ ಶಿವಮೂರ್ತಿ ಸ್ವಾಮಿಗಳು, ಶಿರೂರ ವೀರಬಧ್ರಪ್ಪ, ಮುರಡಿ ಭೀಮಜ್ಜ, ಕುಷ್ಟಗಿಯ ಪುಂಡಲೀಕಪ್ಪ, ಜ್ಞಾನಮೋಟೆ ಸ್ವಾಮಿ ರಮಾನಂದ ತೀರ್ಥರು, ಕೋಳೂರು ಮಲ್ಲಪ್ಪ ನಂತಹ ಹಲವಾರು ಸ್ವಾತಂತ್ರ ಯೋಧರ ಹೋರಾಟಗಾರರು ಹೈದ್ರಬಾದ ನಿಜಾಮರ ವಿರುದ್ಧ ಹೋರಾಟ ಮಾಡಿದರು.

ಅಂದಿನ ಗೃಹಮಂತ್ರಿ ಸರ್ಧಾರ ವಲ್ಲಬಾಯಿ ಪಟೇಲ್‌ರ ಆಪರೇಶನ್ ಪೋಲೋ ಕಾರ್ಯ ೧೩-೦೯-೧೯೪೮ ರಿಂದ ೧೭-೦೯-೧೯೪೮ ರವರೆಗೆ ಹೋರಾಟ ಕೇಂದ್ರಿಯ ಸೇನೆಯೋಂದಿಗೆ ನಡೆದು ಅಂದೇ ಮ೪ ಘಂಟೆಗೆ ನಿಜಾಮರು ಶರಣಾಗತಿಯಾದರು . ಆ ಪ್ರಯುಕ್ತ ಹೈ.ಕ. ವಿಮೋಚನೆ ಆಗಿ ನಮ್ಮ ಭಾಗಕ್ಕೆ ಸ್ವಾತಂತ್ರ‍್ಯ ಸಿಕ್ಕಿತು ಎಂದರು.

ಉಪನ್ಯಾಸಕರ ಭಾಷಣವು ಎಲ್ಲರ ಗಮನ ಸೆಳೆದವು ಕರಮುಡಿ ಗ್ರಾ.ಪಂ. ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಲಡಾಯಿ ಕಟ್ಟೆಯನ್ನು ಅಭಿವ್ರದ್ಧಿಗೊಳಿಸಿ ಮುಂದಿನ ದಿನಮಾನದಲ್ಲಿ ಇಲ್ಲಿಯೇ ಧ್ವಜಾರೋಹಣ ಮಾಡುವ ವ್ಯವಸ್ಥೆಯನ್ನು ಮಾಡೋಣ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಲಕೇರಿ ಗ್ರಾ.ಪಂ. ಅಧ್ಯಕ್ಷ ಗಿರೀಶಗೌಡ ಪಾಟೀಲ ಮಾತನಾಡಿ, ಕಳೆದ ೧೦ ವರ್ಷದ ಹಿಂದೆ ಇದೇ ಸ್ಥಳದಲ್ಲಿ ರೋಣ ಹಾಗೂ ಯಲಬುರ್ಗಾ ತಾಲೂಕಾ ಆಡತಿದವರು ನಡೆಸಿಕೊಂಡು ಬಂದಿದ್ದನ್ನು ಅವರು ಸ್ಮರಿಸಿದರು. ಹೈದ್ರಾಬಾದ ಹಾಗೂ ಬಾಂಬೆ ಕರ್ನಾಟಕ ಭಾಗದ ಭಾವೈಕ್ಯತೆಯ ಸ್ಥಳ ಇದಾಗಿದೆ ಎಂದರು.

ನಿAಗೋಜಿ ಶಿಕ್ಷಣ ಹಾಗೂ ಗ್ರಾ.ಅ. ಟ್ರಸ್ಟಿನ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಶಶಿಕಾಂತ ನಿಂಗೋಜಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಪಂ.ಅ. ಅಧಿಕಾರಿ ಶರಣಪ್ಪ ನರೇಗಲ್ಲ, ಮಂಜುನಾಥ ಕುಕನೂರ, ಗ್ರಾ.ಪಂ. ಸದಸ್ಯ ಮರ್ಧಾನಸಾಬ ಮುಲ್ಲಾ, ರಾಮಣ್ಣ ಹೊಕ್ಕಳದ, ವಕೀಲರಾದ ರಾಮಣ್ಣ ಬಟಗೇರಿ, ಬಿಇಡಿ ಕಾಲೇಜಿನ ಪ್ರಾಧ್ಯಪಕರು ಹಾಗೂ ನೂರಾರು ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

ಗಂಗಪ್ಪ ಹವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!