ಕೋರ್ಸ್ಗಳ ಶುಲ್ಕ ಹೆಚ್ಚಿಸಿರುವ ನಿರ್ಧಾರ ಖಂಡನೀಯ : ಕಂಬಳಿ ಮಂಜುನಾಥ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 19- 2024-25ನೇ ಶೈಕ್ಷಣಿಕ ವರ್ಷದ, ಪಿಜಿ ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸ್ ಗಳ ಶುಲ್ಕವನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ಖಂಡನೀಯ.
ಖಾಸಗಿ ವೈದ್ಯಕೀಯ ಲಾಬಿಗೆ ಸಂಪೂರ್ಣವಾಗಿ ಶರಣಾಗಿರುವ ರಾಜ್ಯ ಸರ್ಕಾರ ಪ್ರತೀ ವರ್ಷ ಇಂಜಿನಿಯರಿAಗ್ ಹಾಗೂ ವೈದ್ಯಕೀಯ ಶಿಕ್ಷಣದ ಶುಲ್ಕವನ್ನು ಏರಿಸುತ್ತಲೇ ಬಂದಿದೆ.
ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾದ ಶುಲ್ಕವನ್ನು ರೂ. ಒಂದು ಲಕ್ಷದಷ್ಟು ಹೆಚ್ಚಿಸಿರುವುದು, ಸರ್ಕಾರದ ವ್ಯಾಪಾರೀ ಧೋರಣೆಯನ್ನು ತೋರಿಸುತ್ತದೆ.
ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ವೈದ್ಯಕೀಯ ಪಿಜಿ ವ್ಯಾಸಂಗ ಮತ್ತಷ್ಟು ದುಬಾರಿಯಾಗಿರುವುದನ್ನು ಂIಆSಔ ಬಳ್ಳಾರಿ ಜಿಲ್ಲಾ ಸಮಿತಿ ಖಂಡಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್ ಪತ್ರಿಕೆ ಹೇಳಿಕೆ ನೀಡಿದರು.
