
ಮೊದಲ ದಿನ ಪ್ರೇಕ್ಷಕರ ಮನ ಗೆದ್ದ ಕುಬುಸ ಚಿತ್ರ
ಕರುನಾಡ ಬೆಳಗು ಸುದ್ದಿ
ವಿಜಯನಗರ, 27- ಕುಬುಸ ಚಲನಚಿತ್ರ ಜುಲೈ 26ರಂದು ರಾಜ್ಯದ್ಯಂತ 25ಚಿತ್ರ ಮಂದಿರಗಳಲ್ಲಿ ತೆರೆ ಕಂಡಿದ್ದು ಮೊದಲ ದಿನವೇ ಪ್ರೇಕ್ಷಕರ ಮನ ಗೆದ್ದಿದೆ.
ಹೊಸಪೇಟೆಯ ಸರಸ್ವತಿ ಚಿತ್ರ ಮಂದಿರದಲ್ಲಿ ಮೊದಲ ಬೆಳಗಿನ ಮೊದಲ ಶೋ ನಡೆದಿದ್ದು ಇಡೀ ಚಿತ್ರ ತಂಡ ಸಿನಿಮಾ ವೀಕ್ಷಿಸಿದರು, ಪ್ರೇಕ್ಷಕರು ಚಿತ್ರ ನೋಡುವ ಸಂದರ್ಭದಲ್ಲಿ ಕಣ್ಣಂಚಲಿ ನೀರು ತುಂಬಿ ಬಂದಿತು ಕಂಡುಬಂದಿತು.
ಚಿತ್ರ ಮುಗಿದ ನಂತರ ಹಲವಾರು ಪ್ರೇಕ್ಷಕರು ಕತೆಯ ಬಗ್ಗೆ ಮಾತನಾಡಿ ಚಿತ್ರದಲ್ಲಿ ಒಂದು ಕುಟುಂಬದ ಸಾಮರಸ್ಯ ಹೇಗಿರಬೇಕೆಂದು ಮತ್ತು ವಯಸ್ಸಾದವರನ್ನು ಹೇಗೆ ನೋಡಿಕೊಳ್ಳಬೇಕು, ತಾಯಿಯಾದವರನ್ನು ಅವರ ವಿಚಾರಗಳಿಗೆ ಬೆಲೆ ಕೊಡುತ್ತಾ ಹೇಗೆ ಹೊಂದಿಕೊಳ್ಳಬೇಕೆಂದು ಮತ್ತು ವಾಸ್ತದ ಪ್ರಕೃತಿಯೊಂದಿಗೆ ಹೇಗೆ ಜೀವಿಸಬೇಕೆಂಬುದು ಚಿತ್ರದ ಕತೆಯಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ ಚಿತ್ರವು ಸೆಂಚುರಿ ತಲುಪುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡರು.
ಚಿತ್ರದಲ್ಲಿ ನನ್ನ ಹೆಸರು ವಡವಟ್ಟ ಇರಬಹುದು ಆದರೆ “ಎಡವಟ್ಟಲ್ಲ ಎಂಬ ಪ್ರೀತಿ ನಿವೇದನೆಯಿಂದ ಭಾಳ ಗೆಳತಿಯನ್ನು ಆರಿಸಿ ಕೊಳ್ಳುವ “ರಾಮ”(ನಟರಾಜ್ ಬಟ್) ನಿಸರ್ಗ ಪ್ರೇಮಕ್ಕೆ ತನ್ನನ್ನು ಮೀಸಲಿರಿಸಿ ಕೊಂಡ ಸುಂಕವ್ವಳ ಹುಡುಕಾಟ ಪ್ರೇಕ್ಷಕರ ಕಣ್ಣಾಲಿಗಳನ್ನು ತುಂಬಿಸದೆ ಇರಲಿಲ್ಲ. ಸ್ಥಳೀಯ ಕಲಾವಿದರೇ ಇರುವ ಕುಬುಸ ಚಿತ್ರ ಇಂದು ರಾಜ್ಯದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆ ಗೊಂಡಿರುವುದು ಹೆಮ್ಮೆಯ ವಿಷಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಸುಂಕವ್ವಳ ಸ್ನೇಹಿತೆಯಾಗಿ ನಟಿಸಿದ ಮಂಜಮ್ಮ ಜೋಗತಿ ತಾನೇ ಚಿತ್ರದಲ್ಲಿ ನಟಿಸಿದ್ದರೂ ಚಿತ್ರ ಓಡಿದಂತೆ ಅವರ ಕಣ್ಣಾಲಿಗಳಲಿ ಕಣ್ಣಿರು ಹರಿಯುತ್ತಲೇ ಇತ್ತು.
ಜೊತೆಗೆ ಚಿತ್ರ ನಿರ್ಮಾಣಕ್ಕೆ ನೆರವಾಗಿದ್ದ “ಕವಿತಾ ಸಿಂಗ್”ಚಿತ್ರ ಮುಕ್ತಾಯದ ನಂತರವೂ ಅವರ ಕಣ್ಣುಗಳಲ್ಲಿ ನೀರುತುಂಬಿ ಕೊಂಡೇ ಉತ್ತಮ ಚಿತ್ರ ಎಂದು ಪ್ರಶಂಸಿದರು. ನಮ್ಮ ಜಿಲ್ಲೆಯಲ್ಲಿ ಇಂತಹ ಉತ್ತಮ ಚಿತ್ರ ಮೂಡಿ ಬಂದಿದೆ ಎಂದರೆ ಆಶ್ಚರ್ಯವಾಗಿದೆ. ಇಂತಹ ಅದ್ಬುತ ಕಲಾವಿದರು ನಮ್ಮ ಜಿಲ್ಲೆಯವರು ಎನ್ನುವುದು ಹೆಮ್ಮೆಯ ವಿಷಯ,ಎಂಬ ಅಭಿಪ್ರಾಯ ತಿಳಿಸಿ, ಕಲೆಯನ್ನು ಪೋಷಿಸಲು ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಲಿ ಎಂದರು.
“ಕುಬುಸ ಲೆಸ್” ಅತ್ತೆಯ ಪ್ರವೇಶ ಪ್ರೇಕ್ಷಕರಿಗೆ , ತಮ್ಮ ಮನೆಯಲ್ಲಿ ಅತ್ತೆ -ಸೊಸೆಯ ಮುನಿಸುಗಳ ನೆನಪಾಗುತ್ತವೆ.ಹನಿ- ಹನಿ ಹಾಲಲ್ಲೂ ನಿನ್ನ ಋಣವಿದೆ ಎನ್ನುವ ಹಾಡು ಕೇಳಿದ ಪ್ರತಿ ಯೋಬ್ಬರೂ ತಮ್ಮ ತಾಯಂದಿರನ್ನು ನೆನೆಯದೆ ಹೊರ ಹೋಗಲಾರರು.
ಕನ್ನಡ ಚಿತ್ರರಂಗ ಮೋಹಕ ಡ್ಯಾನ್ಸಗಳಿಂದ ಯುವಕರನ್ನು ಆಕರ್ಶಿಸುವ ಕಾರ್ಯಕ್ಕಿಳಿದಿದ್ದರೆ ,ಶತ ಕೋಟಿ ಬಂಡವಾಳ ಹಾಕಿ ಚಿತ್ರ ನಿರ್ಮಾಣ ಮಾಡುವ ಈ ಕಾಲದಲ್ಲಿ, ಅತಿ ಕಡಿಮೆ ಬಜೆಟ್ ನಲ್ಲಿ ಉತ್ತಮ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ ‘ಶೋಭಾ’ ಅವರ ದೈರ್ಯ ಮೆಚ್ಚ ತಕ್ಕಂತಹದು.ಅಮ್ಮನ ಒಡಲಾಳದ ಪ್ರೀತಿಯನ್ನು ಒತ್ತಿಹೇಳುವ ‘ಗೀತೆ’ “ಅಮ್ಮ” ತಾಯಿಯ ಬಗ್ಗೆ ಹಿಂದೆ ಹಾಡಿದ ಎಲ್ಲ ಗೀತೆಗಳನ್ನು ಹಿಂದಕ್ಕೆ ಹಾಕುವಂತಿದೆ .
ತಾಯಿ- ಮಗು ಮತ್ತು ಸ್ನೇಹಿತರ ಮದ್ಯೆ ನಿಸರ್ಗದಲ್ಲಿರುವ ಸಂಭಂದದ ಪ್ರೀತಿ ಎಷ್ಟುಗಾಡವಾದು ದಾಗಿದೆ , ಎಂದು ಚಿತ್ರ ಬಹಳ ಅದ್ಬುತವಾಗಿ ನಿರ್ಮಾಣಗೊಂಡಿದೆ.
ಮೊದಲ ಶೋ ಹೌಸ್ ಪುಲ್ ಆಗಿ ಎರಡನೇ ಶೋ ಗೆ ಜನರು ಟಿಕೇಟ್ ಗಾಗಿ ನೂಕು ನುಗ್ಗಲಾಯಿತು. ಹಿರೋ“ ನಟರಾಜ್ ಭಟ್” ನಾಯಕಿ ‘ಮಹಾಲಕ್ಷಿ ಅವರ ಅನುಪ ಸ್ಥೀತಿಯಲ್ಲಿ ಚಿತ್ರ ಬಿಡುಗಡೆ ಗೊಂಡಿತು., ಪ್ರದೀಪ್ ಚಂದ್ರರವರ ನಿರ್ದೇಶನದಲ್ಲಿ ಚಿತ್ರ ನಿರ್ಮಾಣ ಗೊಂಡು ಸ್ಥಳೀಯ ಕಲಾವಿದೆ ‘ಸುಂಕವ್ವ’ಳ ಪಾತ್ರದಲ್ಲಿಕಂಡು ಬಂದ ಹನುಮಕ್ಕ ಇಂದು ಮೆದುಳಿನ ಟ್ಯೂಮರ್ ನಿಂದ ಆಸ್ಪತ್ರಯಲ್ಲಿ ಸಾವು ಬದುಕಿನ ಮದ್ಯೆ ಇದ್ದಾಳೆಂದು, ಮಂಜಮ್ಮಜೋಗತಿ ಪತ್ರಿಕೆಗೆ ತಿಳಿಸಿದರು.