WhatsApp Image 2024-10-27 at 6.23.47 PM

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯೋಣ : ಆರ್ ಘನಮಲ್ಲಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 27- ಬ್ಯಾಂಕ್ ನೌಕರರ ಸಂಘಟನೆಯ ಪದಾಧಿಕಾರಿ ಮತ್ತು ಸದಸ್ಯರಾದ ಪ್ರತಿಯೊಬ್ಬರೂ ಬ್ಯಾಂಕ್ ನೌಕರರ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ದೇಶದ ಪ್ರಜಾಸತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯೋಣ ಎಂದು ಭಾರತ ಕಾರ್ಯಕಾರಿಣಿ ಮಂಡಳಿ ಸದಸ್ಯ ಆರ್.ಘನಮಲ್ ಅವರು ಕರೆ ನೀಡಿದರು.

ನಗರದ ರಾಯಲ್ ಸರ್ಕಲ್ ಕೆನರಾಬ್ಯಾಂಕ್ ಶಾಖೆಯ ಬ್ಯಾಂಕ್ ನೌಕರರ ಸಮ್ಮುಖದಲ್ಲಿ ಏರ್ಪಡಿಸಲಾಗಿದ್ದ ಬ್ಯಾಂಕ್ ಎಂಪ್ಲೋಯೀಸ್ ಫೆಡರೇಷನ್ ಆಫ್ ಇಂಡಿಯ (BEFI ) 43ನೇ ವಾರ್ಷಿಕೋತ್ಸವ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ದೇಶದ ಸಾಮಾಜಿಕ ವಿಷಯಗಳಿಗೆ ಧಕ್ಕೆಯಾದಾಗ BEFI ನಿರಂತರವಾಗಿ ಪ್ರತಿಭಟನೆಗಳನ್ನು ಮಾಡುತ್ತಾ ಕಾರ್ಮಿಕರ, ರೈತಪಿವರ್ಗಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಸಿಐಟಿಯು ನ ಜಿಲ್ಲಾ ಮುಖಂಡರಾದ ಸತ್ಯಬಾಬು ಮಾತನಾಡಿ BEFI ತನ್ನೆದೇ ಆದ ಇತಿಹಾಸವನ್ನು ಹೊಂದಿದ್ದು ಬ್ಯಾಂಕ್ ಕಾರ್ಮಿಕರ ಏಳಿಗೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ ಎಂದು ಹೇಳಿದರು.

ಬಳ್ಳಾರಿಯ LICಯ ಕಾರ್ಮಿಕರ ಮುಖಂಡರಾದ ಸೂರ್ಯನಾರಾಯಣ ರವರು ಮಾತನಾಡಿ BEFI ನ ನಿರಂತರ ಶ್ರಮದಿಂದ ಬ್ಯಾಂಕ್ ನೌಕರರ ಏಳಿಗೆಗೆ ತನ್ನದೇ ಆದ ಮೌಲ್ಯವನ್ನು ಹೊಂದಿದೆ ಮತ್ತು BEFI ನಂತಹ
ಮೌಲ್ಲ್ಯಾ ದಾರಿತಾ ಸಂಘಟನೆಯು ಇಂದಿನ ದಿನಗಳಲ್ಲಿ ಬಹುಮುಖ್ಯ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಷಯ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬ್ಯಾಂಕ್ ಸಂಘಟನೆಯ ಪದಾಧಿಕಾರಿಗಳಾದ ವೇಣುಗೋಪಾಲ್ ಶೆಟ್ಟಿ, ಕಾರ್ತಿಕ್. ಕೆ , ಟಿ.ಕಿಶೋರ್ ಕುಮಾರ್, ರಂಗಣ್ಣ, ಮಲ್ಲಿಕಾರ್ಜುನ. ಡಿ, ಸೌಮ್ಯ ಜಾದವ್, ಸಂಘದ ಸದಸ್ಯರು,ಬ್ಯಾಂಕ್ ನೌಕರರು, ನಿವೃತ್ತಿ ಹೊಂದಿರುವ ಬ್ಯಾಂಕ್ ನೌಕರರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!