ಸಮಾಜಕ್ಕೆ ಎಲ್ಐಸಿ ಸೇವೆಗಳು ಬಹುದೊಡ್ಡವು : ಪಿ.ಸಂಪತ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 2- ಸಮಾಜಕ್ಕೆ ಭಾರತೀಯ ವಿಮೆ ಸಂಸ್ಥೆ ಸಲ್ಲುತ್ತಿರುವ ಸೇವೆಗಳು ಬಹುದೊಡ್ಡವು ಎಂದು, ಬಳ್ಳಾರಿ ಜೀವವಿಮೆ ಕಾರ್ಯಾಲಯ ಎರಡನೇ ಬ್ರಾಂಚಿನ ವ್ಯವಸ್ಥಾಪಕರು, ಪಿ ಸಂಪತ್ ಹೇಳದರು.
ಭಾರತೀಯ ಜೀವ ವಿಮೆ ಸಂಸ್ಥೆ (ಎಲ್ಐಸಿ) ದೇಶಾದ್ಯಂತ ಎಂದು ೬೮ನೇ ವ್ಯವಸ್ಥಾಪನ ದಿನೋತ್ಸವ ಅಂಗವಾಗಿ ಏಳು ದಿನಗಳ ಕಾಲ ನಡೆಸುವ ವಾರೋತ್ಸವಗಳನ್ನು ಕಚೇರಿಯಲ್ಲಿ ಪ್ರಾರಂಭಿಸಿ ಮಾತನಾಡಿದರು.
೧೯೫೬ ನೇ ಇಸವಿಯಲ್ಲಿ ಐದು ಕೋಟಿ ರೂಪಾಯಿ ವ್ಯವಹಾರಗಳಿಂದ ಆರಂಭಿಸಿದ ಎಲ್ಐಸಿ ಇಂದು ೫೩ ಲಕ್ಷ ಕೋಟಿ ರೂಪಾಯಿಗಳ ವ್ಯವಹಾರವನ್ನು ನಡೆಸುತ್ತಿರುವದಾಗಿ, ದೇಶಾದ್ಯಂತ ೩೦ ಕೋಟಿ ಪಾಲಿಸಿದಾರರನ್ನು ಹೊಂದಿರುವುದಾಗಿ ತಿಳಿಸಿದರು.
ಜನರಿಗೆ ಜೀವ ವಿಮೆ ಕಲ್ಪಿಸುವುದರ ಜೊತೆಗೆ, ದೇಶ ಅಭಿವೃದ್ಧಿಗೆ ಬೇಕಾಗುವ ಬಾರಿ ತರಹ ಪ್ರಾಜೆಕ್ಟ್ ಗಳ ನಿರ್ಮಾಣಕ್ಕೆ, ಕೇಂದ್ರ ಸರ್ಕಾರಕ್ಕೆ ಸಾಲದ ರೂಪದಲ್ಲಿ ನೀಡುತ್ತಿರುವುದಾಗಿ ತಿಳಿಸಿದರು.
ಏಳು ದಿನಗಳ ಕಾಲ ನಮ್ಮ ಬ್ರಾಂಚಿ ಯಲ್ಲಿ, ಉದ್ಯೋಗಸ್ಥರು, ಪ್ರತಿನಿಧಿಗಳು, ನೇತೃತ್ವದಲ್ಲಿ ಹಲವಾರು ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳು ನಡೆಯುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ರಾಂಚಿನ ಸಹಾಯಕ ವ್ಯವಸ್ಥಾಪಕರು, ಐ.ಕೆ.ಗೋಪಾಲ್, ಎಲ್ಐಸಿ ಉದ್ಯೋಗಿ ಸಂಘದ ಅಧ್ಯಕ್ಷರು, ದತ್ತಾತ್ರೇಯ, ಕಾರ್ಯದರ್ಶಿಗಳು, ಸೂರ್ಯನಾರಾಯಣ, ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ಗಳು, ಸುರೇಶ್, ವಿಶ್ವನಾಥ್, ಗಂಗಾಧರ, ಹಾಗೂ ಅಭಿವೃದ್ಧಿ ಶಾಖೆ ಅಧಿಕಾರಿಗಳು, ಎಸ್ ಶೇಖರ್, ಶಶಿಧರ್, ರಾಜಸಿಂಹ, ಜ್ಯೋತಿ ಕೃಷ್ಣ, ಗಳ ಜೊತೆಗೆ ಶಾಖೆಯ ಉದ್ಯೋಗಿಗಳು ಮತ್ತು ಪ್ರತಿನಿಧಿಗಳು, ವೀರೇಶ್ ಶೆಟ್ಟಿ, ಎನ್ ಶ್ರೀನಿವಾಸ್, ಜೊತೆಗೆ ಹಲವಾರು ಮಂದಿ ಪ್ರತಿನಿಧಿ ಮಿತ್ರರು ಪಾಲ್ಗೊಂಡಿದ್ದರು.

