ರೈತ ಉತ್ಪಾದಕರ ಸಂಸ್ಥೆಗಳನ್ನು ಯಶಸ್ವಿಯಾಗಿ ಕಟ್ಟಬೇಕು : ಮಾಹದೇವ ಕೀರ್ತಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 13- ನಮ್ಮ ದೇಶದಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆ ಮಾಡುವ ಮೂಲಕ ಸಹಕಾರಿ ವಲಯದಲ್ಲಿ ಸಂಘಟಿತ ಮಾರುಕಟ್ಟೆಯ ವ್ಯವಸ್ಥೆಯನ್ನು ನಿರ್ಮಿಸಬೇಕು. ಇಡೀ ನಮ್ಮ ದೇಶದಲ್ಲೇ ರೈತ ಉತ್ಪಾದಕರ ಸಂಸ್ಥೆಗಳನ್ನು ಯಶಸ್ವಿಯಾಗಿ ಕಟ್ಟಬೇಕೆಂದು ನಬಾರ್ಡ ಡಿಡಿಎಂ ಮಾಹದೇವ ಕೀರ್ತಿ ಹೇಳಿದರು.
ತಾಲೂಕಿನ ಮುರಡಿ ಗ್ರಾಮದ ಕನಕರಾಯ ರೈತರ ಉತ್ಪಾದಕರ ಸಂಘದ 2 ನೇ ವರ್ಷದ ಸಾಮಾನ್ಯ ಸಭೆ ಸಸಿಗೆ ನೀರು ಹಾಕುವದರ ಮೂಲಕ ಉಧ್ಘಾಟಿಸಿ ಮಾತನಾಡಿದ ಅವರು ರೈತ ಉತ್ಪಾದಕರ ಸಂಘ ಸ್ಥಾಪಿಸಿ ಸಂಘದಿಂದಲೆ ರೈತರು ಬೆಳೆದ ಬೆಳಗಳ ಕಾಳು-ಕಡಿ, ದವಸ-ಧಾನ್ಯಗಳನ್ನು ಖರೀದಿ ಮಾಡಿ ದಲ್ಲಾಳಿಗಳ ಹಾವಳಿ ನಿರ್ಮೂಲನೆಯಾಗುವ ನಿಟ್ಟಿನಲ್ಲಿ ಶ್ರಮಿಸಬೇಕು,ರೈತರ ಮನೆ ಬಾಗಿಲಲ್ಲೇ ಮಾರುಕಟ್ಟೆ ಸೌಲಭ್ಯ ಮತ್ತು ಉತ್ತಮ ಧಾರಣೆ ಸಿಗುತ್ತದೆ ಎಂದು ಹೇಳಿದರು
ವೆಡ್ಸ ಸಂಸ್ಥೆಯ ಅಧ್ಯಕ್ಷ ವಿ,ಚಕ್ರಪಾಣಿ ಮಾತನಾಡಿ ನಮ್ಮಗೆ ನಬಾರ್ಡ್ ಕೊಟ್ಟಿರುವ ಮೂರು ವರ್ಷ ಅವಧಿಯಲ್ಲಿ ಕನಕರಾಯ ರೈತ ಉತ್ಪಾದಕ ಕಂಪನಿಗೆ ಏನೆಲ್ಲಾ ಸಲಹೆ ಸಹಕಾರ ಸೌಲಭ್ಯ ಬೇಕು ಅದನ್ನು ಕಲ್ಪಿಸಿ ಕೊಡುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆಂದು ಹೇಳಿದರು.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ ಮಾತನಾಡಿ ಗ್ರಾಮದ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸಿ ಕೊಡುತ್ತೇವೆ ಮತ್ತು ಕೇಂದ್ರ ಸರಕಾರವು ರೈತರಿಗಾಗಿ ಅನೇಕ ಕಡಿಮೆ ಮೊತ್ತದ ವಿಮಾ ಯೋಜನೆಯನ್ನು ಸರಕಾರ ಜಾರಿಗೆ ತಂದಿದೆ ಈ ವಿಮಾ ಯೋಜನೆಯನ್ನು ಎಲ್ಲಾ ರೈತ ಬಾಂಧವರು ಸದುಪಯೋಗ ಪಡಿಸಿಕೊಳ್ಳಬೇಕು, ರೈತರು ಸಾಲ ಪಡೆದುಕೊಂಡು ಮೇಲೆ ಸರಿಯಾಗಿ ಪ್ರತಿ ಕಂತನ್ನು ಕಟ್ಟಬೇಕು, ಸುಸ್ತಿದಾರಬಾರದು ಹಾಗೆ ನೋಡಿಕೊಂಡು ಹೊದಾಗ ಮಾತ್ರ ನಿಮ್ಮ ಆರ್ಥಿಕ ವ್ಯವಸ್ಥೆ ಮತ್ತು ಬ್ಯಾಂಕಿನ ಹಣಕಾಸಿನ ವ್ಯವಸ್ಥೆ ಸರಿ ಹೋಗಲು ಸಾಧ್ಯವೆಂದು ಹೇಳಿದರು.
ಈ ವೇಳೆ ಪ್ರಗತಿಪರ ರೈತ ಬಸವರಾಜ ಭಂಡಾರಿ ಮಾತನಾಡಿದರು.
ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಶೇಖರ ಗಡಾದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರಗತಿಪರ ರೈತ ರಾಮಣ್ಣ ಬಾವಿ, ಕನಕರಾಯ, ರೈತ ಉತ್ಪಾದಕ ಕಂಪನಿ ಉಪಾಧ್ಯಕ್ಷ ಸೋಮಲಿಂಗಪ್ಪ ಕುರಿ, ನಿರ್ದೇಶಕರುಗಳಾದ ಬಸವನಗೌಡ ಮಾಲಿ ಪಾಟೀಲ್, ಯಮನಪ್ಪ ಎಂ.ಹೊಸಮನಿ, ಯಮನಪ್ಪ ಎಂ.ಕಾಗಿ,
ಅನೀಲ ಕುಮಾರ ಜೂಲಕಟ್ಟಿ, ಶರಣಪ್ಪ ಎಂ.ಪಟ್ಟೇದ, ಶರಣಮ್ಮ ಮಾಲಿ ಪಾಟೀಲ್, ವಿ.ಅಲವೀರಮ್ಮ ಶಿವಮೂರ್ತೆಪ್ಪ ಹನಮಾಪೂರ, ಸಿಇಓ ಲಕ್ಷ್ಮೀದೇವಿ ತಳವಾರ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.
