WhatsApp Image 2024-07-30 at 4.25.23 PM

ಮಾವಿನಹಳ್ಳಿ : ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು-2024

ಕರುನಾಡ ಬೆಳಗು ಸುದ್ದಿ

ಕಂಪ್ಲಿ, 30-ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ, ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ “ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಹಮ್ಮಿಕೊಂಡು ಮಕ್ಕಳಲ್ಲಿ ಕಲೆ ಮತ್ತು ಸಾಹಿತ್ಯ, ನಾಟಕಗಳು ಮತ್ತು ಸಂಗೀತ, ಸಮೂಹ ನೃತ್ಯಗಳಲ್ಲಿ ಮಕ್ಕಳನ್ನು ತೋಡಗಿಸಿಕೊಳ್ಳುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.ಸಣ್ಣ ಗ್ರಾಮೀಣ ಪ್ರದೇಶವಾದ ಮಾವಿನಹಳ್ಳಿ ಗ್ರಾಮೀಣದಲ್ಲಿ ನಿರಂತರವಾಗಿ ಹೇಮೇಶ್ವರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಕಲೆಗಳು ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದ ಶ್ರೀ ಹೆಚ್. ದೊಡ್ಡಬಸಪ್ಪ, ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಂಪ್ಲಿ ಇವರು ಉದ್ಘಾಟಕರ ನುಡಿಯನ್ನು ಹೇಳಿದರು…

ಗ್ರಾಮೀಣ ಮಕ್ಕಳಿಗೆ ಈಗ ಆಟಗಳು ಇಲ್ಲದೆ ಜಂಗಮವಾಣಿಯೊಳೆಗೆ ಮಾರು ಹೋಗಿದ್ದಾರೆ. ಮಕ್ಕಳಿಗೆ ಮೊಬೈಲ್ ಫೋನ್ ಕೊಡುವುದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಹೆಚ್.ಜಡೆಪ್ಪ, ಮುಖ್ಯ ಗುರುಗಳು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಆಶ್ರಯ ಕಾಲೋನಿ, ದೇವಸಮುದ್ರ ಹೇಳಿದರು.

ನಾಟಕಗಳು ನಮ್ಮ ಜೀವನದ ಕಥೆಯನ್ನು ಪ್ರಸ್ತಾಪಿಸುವಲ್ಲಿ ಮುಂದಾಗುತ್ತಾವೆ.ನಮ್ಮ ಜೀವನದಲ್ಲಿ ನಡೆಯುವಂತಹ ಘಟನೆಗಳನ್ನು ಪ್ರಸ್ತಾಪಿಸುವಲ್ಲಿ ಮುಂದಾಗುತ್ತಾವೆ ಎಂದು ಕೆ.ವಿರೇಶ ರಂಗಭೂಮಿ ಕಲಾವಿದರು ಪ್ರಸ್ತಾಪಿಸಿದರು.

ನಮ್ಮ ಮಾವಿನಹಳ್ಳಿ ಗ್ರಾಮೀಣದಲ್ಲಿ ನಿರಂತರವಾಗಿ ಉತ್ತರ ಕರ್ನಾಟಕದ ಗಂಡು ಕಲೆ ಎಂದು ಹೆಸರುವಾಸಿಯಾದ ಬಯಲಾಟವನ್ನು ಹಾಡುತ್ತಾ ಬರುವುದನ್ನು ಕಾಣುತ್ತೇವೆ ನಮ್ಮ ಗ್ರಾಮೀಣ ಕಲೆಗಳಾದ ಇಂದು ಕಣ್ಮರೆಯಾಗುತ್ತೀವೆ ಎಂದು ಮಾವಿನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಕೆ ನಾಗರಾಜ ಹೇಳಿದರು.

ನಮ್ಮ ಗ್ರಾಮೀಣದ ಜನತೆಗೆ ಖುಷಿಯಿಂದ ಹಳ್ಳಿಗಾಡಿನ ಪದಗಳು, ಜನಪದ ಗೀತೆಗಳು, ಲಾವಣಿ ಪದಗಳು, ಸುಗ್ಗಿ ಪದಗಳು ,ಬಯಲಾಟ,ನಾಟಕವನ್ನು ಮೊದಲು ಗ್ರಾಮೀಣದ ಅವಿಭಾಜ್ಯ ಅಂಗವಾಗಿತ್ತು ಅದಕ್ಕಾಗಿ ರೈತರು ತಮ್ಮ ಖುಷಿಯನ್ನು ಹಾಡಿನ ಮುಖಾಂತರ ಪ್ರಸ್ತಾಪಿಸುವಲ್ಲಿ ಮುಂದಾಗುತ್ತಾರೆ. ಮಾವಿನಹಳ್ಳಿ ಗ್ರಾಮೀಣದಲ್ಲಿ ಜನರಿಗೆ ಕಲೆ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಇವರಿಗೆ ನಿರಂತರವಾಗಿ ಕಲೆಗಳು ಪರಿಚಯ ಮಾಡುವಂತಹ ಕೆಲಸ ಕೆ ಹೇಮೇಶ್ವರ ಮಾಡುತ್ತಿದ್ದಾರೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಸ.ಹಿ.ಪ್ರಾ. ಶಾಲೆ, ಹೊಸನಗರ, ದೇವಲಾಪುರ ಶಿಕ್ಷಕರಾದ ಶ್ರೀ ಎಸ್.ಚಂದ್ರಪ್ಪ ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು : ಏಕ ವ್ಯಕ್ತಿ ಬಯಲಾಟ ಪ್ರದರ್ಶನ ನೀಡಿದ ಡಿ.ಹುಲಿಯಪ್ಪ.

ಜನಪದ ಸಂಗೀತ : ವಿನಯ ಪ್ರಸಾದ್ ಮತ್ತು ತಂಡ.

ವಾದ್ಯಗಳ ಸಂಗೀತ : ಬಿ ದೊಡ್ಡಬಸಪ್ಪ ಮತ್ತು ತಂಡ.

ತತ್ವಪದಗಳು : ಯೋಗೇಶ್ ಮತ್ತು ತಂಡ.

ಸುಗಮ ಸಂಗೀತ : ಪುರುಷೋತ್ತಮ ಡಿ ಮತ್ತು ತಂಡ.

ಸಾಮಾಜಿಕ ನಾಟಕ : ಸೋರುತ್ತಿಹುದು ಸಂಬಂಧ” ಹೆಚ್ ಲೋಕರಾಜ್ ಮತ್ತು ತಂಡದಿಂದ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರಘು ಗೋನಾಳು, ಕರಿಬಸಪ್ಪ, ಬಿ.ಕೆ.ಎರ್ರಿಸ್ವಾಮಿ, ದೊಡ್ಡಬಸಪ್ಪ, ರಾಮಲ್ಲಿ, ಪಂಪಾಪತಿ, ತಿಮ್ಮಪ್ಪ, ಮುರಾರಿ, ಉಮೇಶಪ್ಪ ಎಸ್, ಬಿ.ಕೆ.ಸಿದ್ದಪ್ಪ ಬಯಲಾಟ ಕಲಾವಿದರು, ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟಿನ ಅಧ್ಯಕ್ಷರು ಬಿ ಗುರು ಮಹಾಂತೇಶ ಮತ್ತು ಕಾರ್ಯದರ್ಶಿ ಕುರುಬರ ಹೇಮೇಶ್ವರ ಹಾಗೂ ಸರ್ವಸದಸ್ಯರು,ಮಾವಿನಹಳ್ಳಿ ಗುರು ಹಿರಿಯರು,ರೈತ ಬಾಂದವರು, ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!