IMG-20240815-WA0011

ತ್ಯಾಗ ಬಲಿದಾನದ ಸ್ವಾತಂತ್ರ್ಯೋತ್ಸವದ ಮಹತ್ವ ಅರಿತು ಯುವಜನತೆ ದೇಶವನ್ನು ಮುನ್ನಡೆಸಬೇಕು: ಶಾಸಕ ಪಾಟೀಲ

ಕುಷ್ಟಗಿ ಸುದ್ದಿ@ ಕರುನಾಡಬೆಳಗು

ಅನೇಕ ಸಂಕಷ್ಟಗಳನ್ನು ಎದುರಿಸಿ ತ್ಯಾಗ ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯೋತ್ಸವವು ಇಂದಿಗೆ 78 ವರ್ಷ ಕಳೆದಿದ್ದು ಇದರ ಮಹತ್ವ ಅರಿತು ಯುವಪೀಳಿಗೆ ಭಾರತ ದೇಶವನ್ನು ಮುನ್ನಡೆಸಿ ವಿಶ್ವಗುರು ಭಾರತ ನಂಬರ್ ಒನ್ ರಾಷ್ಟ್ರವಾಗುವಲ್ಲಿ ಪಣ ತೊಡಬೇಕು ಎಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ  ದೊಡ್ಡನಗೌಡ ಪಾಟೀಲ ಹೇಳಿದರು. 

ಇಲ್ಲಿನ ತಾಲೂಕ ಕ್ರೀಡಾಂಗಣದಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಹಿರಿಯರು ಅನೇಕ ಸವಾಲುಗಳನ್ನು ಎದುರಿಸಿ ಬ್ರಿಟೀಷರ ದಬ್ಬಾಳಿಕೆಗೆ ಒಳಪಟ್ಟು ತಮ್ಮನು ತಾವು ಅರ್ಪಿಸಿಕೊಂಡು ನಮಗೆ ಸ್ವಾತಂತ್ರ ದೊರಕಿಸಿಕೊಟ್ಟಿದ್ದಾರೆ. ಕಳೆದ 78 ವರ್ಷಗಳ ಹಿಂದೆ ಸ್ವಾತಂತ್ರ್ಯ ಪಡೆದಾಗ ನಮ್ಮ ದೇಶ ಅನೇಕ ಸವಾಲುಗಳನ್ನು ಎದುರಿಸಿ ಜ್ಙಾನ ತಂತ್ರಜ್ಙಾನದಲ್ಲಿ, ಜಾಗತಿಕ ಮಟ್ಟದಲ್ಲಿ ಇಂದಿಗೆ ವಿಶ್ವ ಮಟ್ಟದಲ್ಲಿ ನಂಬರ್ ಒನ್ ಪೈಪೋಟಿಯಲ್ಲಿದೆ. ನಮ್ಮ ಯುವ ಪೀಳಿಗೆ ಮೆಲೆ ನಮ್ಮ ಭಾರತ ನಿಂತಿದೆ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಂತೆ ನಾವು ನೀವೆಲ್ಲರೂ ಸ್ವಾತಂತ್ರ ಸೇನಾನಿಗಳನ್ನು ನೆನೆಯೋಣ. ಅವರ ತ್ಯಾಗ ಬಲಿದಾನದ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸೋಣ. ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ದೇಶವನ್ನು ಬೆಳೆಸೋಣ ಎಂದರು. 

ನಮ್ಮ ದೇಶದ ಪ್ರಧಾನಿ ಮೋದಿಯವರು ದೇಶದ ಪ್ರತಿಯೊಬ್ಬ ನಾಗರಿಕರು ಸಹ ಸ್ವಾತಂತ್ರ್ಯೋತ್ಸವ ಆಚರಣೆಯ ಮಹತ್ವ ಅರಿಯಲಿ, ಸಂಭ್ರಮವನ್ನು ಹರ್ ಘರ್ ತಿರಂಗಾ ಮೂಲಕ ಮನೆ ಮನೆಯಲ್ಲಿ ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲು ಒತ್ತು ನೀಡಿದ್ದಾರೆ. ಇದರೊಂದಿಗೆ ನಮ್ಮ ಸ್ವಾತಂತ್ರ್ಯ ನಮಗೆ ಸುಮ್ಮನೆ ದೊರೆತಿಲ್ಲ. ಇದರ ಹಿಂದೆ ದೊಡ್ಡ ನೋವು ಯಾತನೆ, ಚಿತ್ರಹಿಂಸೆ ಸ್ವಯಂ ಬಲಿದಾನ, ಹೋರಾಟ ಹೀಗೆ ಅನೇಕ ಧಾವಂತಗಳ ಮೂಲಕ ಪಡೆದ ಸ್ವಾಂತತ್ರ್ಯವನ್ನು ಮಹತ್ವಪೂರ್ಣವಾಗಿ ಆಚರಿಸಿ ಗೌರವಿಸೋಣ ಎಂದು ಕರೆ ನೀಡಿದರು.  ಇದಕ್ಕೂ ಮುನ್ನ ಶಾಸಕರು ಸ್ಥಳಿಯ ಶಾಸಕರ ಕಾರ್ಯಾಲಯ ಹಾಗೂ ಪಟ್ಟಣದ ಸಂತೆ ಬಜಾರದಲ್ಲಿ ಧ್ವಜಾರೋಹಣ ನೆರವೇರಿಸಿದರು.

ತಹಶಿಲ್ದಾರ ಅಶೋಕ ಶಿಗ್ಗಾವಿ ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರೇಡ್೨ ತಹಶೀಲ್ದಾರ ಮುರುಳೀಧರ ಮುಕ್ತೆದಾರ, ಬಿಇಓ ಸುರೇಂದ್ರ ಕಾಂಬಳೆ, ಸಿಪಿಐ ಯಶವಂತ ಬಿಸನಳ್ಳಿ, ಸಿಡಿಪಿಓ ಯಲ್ಲಮ್ಮ ಹಂಡಿ , ಕಂದಾಯ ಇಲಾಖೆ ಸಿಬ್ಬಂದಿಗಳು, ಪುರಸಭೆ ಸದಸ್ಯರು ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!