
ಕೃಷ್ಣದೇವರಾಯನ 64 ಕಾಲು ಮಂಟಪ ಜಲಾವೃತ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 27- ಒಂದು ವರ್ಷದ ನಂತರ ಮತ್ತೇ ತುಂಗಭದ್ರಾ ಜಲಾಶಯ ದಿಂದ ಲಕ್ಷಕ್ಕೂ ಅಧಿಕ ನೀರು ಬಿಟ್ಟಿರುವದರಿಂದ ನವವೃಂದಾವನ ಗಡ್ಡೆಗೆ ಹೋಗುವ ಪ್ರಧೇಶ ಸುತ್ತಲೂ ಜಲ ವೃತ್ತವಾಗಿರುವದರಿಂದ ಬೋಟ ಮೂಲಕ ಹೋಗುವ ದಾರಿಗೆ ಬ್ರಕ್ ಬಿದ್ದಿದೆ. ಇನ್ನೂ ವಿಜಯನಗರ ಪ್ರಸಿದ್ದ ದೋರೆ ಶ್ರೀಕೃಷ್ಣದೇವರಾಯಯ ೬೪ ಕಲ್ಲುಮಂಟಪ ಜಲಾವೃತವಾಗಿದೆ.
ಋಷಿಮುಖ ಪರ್ವತ,ಚಿಂತಾಮಣಿ ಎಲ್ಲಡೆಯಲ್ಲೂ ಜಲ ಪ್ರಳಯ ಭಿತಿ ಎದಿರು ಆಗಿದೆ. ತಾಲೂಕ ಆಡಳಿತ-ಪೋಲಿಸ ಇಲಾಖೆ-ತಾಲೂಕ ಆಡಳಿತ ಡಂಗುರ ಹೋಡಿಸುವದರ ಮೂಲಕ ನದಿಪಾತ್ರದ ಜನರನ್ನು ಜಾಗೃತಿಗೋಳಿಸಿದ್ದಾರೆ.
ಪೋಲಿಸ ಇಲಾಖೆಯಲ್ಲಿ ನದಿ ದಂಡೆಯಲ್ಲಿ ಬಾರಿ ಪೋಲಿಸ ಬಂದೋಬಸ್ತ ವ್ಯವಸ್ಥೇ ಮಾಡಲಾಗಿದೆ. ಗಂಗಾವತಿ, ಕಂಪ್ಲಿ ಸೇತುವ ನದಿಯಲ್ಲಿ ಜಲಾವೃತವಾಗಿರುವದರಿಂದ ರಸ್ತೆ ಸಂಚಾರ ಬಂದ ಗೋಳಿಸಿ ಬಾರಿ ಬಂದೋಬಸ್ತ ವ್ಯವಸ್ಥೇ ಮಾಡಲಾಗಿದೆ.
ಬಾರಿ ಟ್ರಾಪಿಕ್ ಗಂಗಾವತಿ, ಕಂಪ್ಲಿ ಸಂಚಾರ ಬಂದ ಆಗಿರುವದರಿಂದ ಕಡೆಬಾಗಿಲು ಸೇತುವೆ ಮೇಲೆ ವಾಹನಗಳ ಸಂಚಾರ ದಟ್ಟನೆ ಜೋರ ಆಗಿದೆ. ಜಿಟಿ ಜಿಟಿ ಮಳೆ ಜನರ ಸಂಚಾರಕ್ಕೆ ತೊಂದರೆ ಮಾಡಿದೆ.
ಜನರು ತಂಡೋಪ ತಂಡವಾಗಿ ಕುಟುಂಬ ಸಮೇತರಾಗಿ ನದಿಯನು ವಿಕ್ಷಕಿಸಲು ಧಾವಿಸುತ್ತಿದ್ದಾರೆ.
ಪೋಲಿಸ ಬಂದೋಬಸ್ತ ನಡುವೆಯೂ ಯುವ ಸಮೂಹ ಮೊಬೈಲ ಸೆಲ್ಪಿಗೆ ಮುಂದಾಗುತ್ತಿರುವುದು ಸರಿಯಲ್ಲ. ಈಗಾಗಲೇ ಅನೇಕ ಸ್ಥಳಗಳಲ್ಲಿ ಮೋಬೈಲ ಸೆಲ್ಪಿ ಸಲುವಾಗಿ ಜನರು ಪ್ರಾಣ ಕಳೆದುಕೊಂಡಿದ್ದನ್ನು ಮರೆಯ ಬಾರದು ಎಂಬುದು ಸಾರ್ವಜನಿಕರ ಅಂಭೊಣವಾಗಿದೆ.